Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಅನ್ಯ ಚಟುವಟಿಕೆಗಳ ತಾಣವಾಯ್ತಾ ಅರಣ್ಯ ಇಲಾಖೆ ವಸತಿ ಗೃಹ?

ಮೂಡಿಗೆರೆ: ಅನ್ಯ ಚಟುವಟಿಕೆಗಳ ತಾಣವಾಯ್ತಾ ಅರಣ್ಯ ಇಲಾಖೆ ವಸತಿ ಗೃಹ?

ಮೂಡಿಗೆರೆ: ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸುಸಜ್ಜಿತವಾದ ವಸತಿ ಗೃಹಗಳು ನಿರ್ಮಾಣ ಮಾಡಿದ್ದಾರೆ. ಆದರೆ ಇಲ್ಲಿ ಸಿಬ್ಬಂದಿಗಳುಇಲ್ಲಿ ವಾಸಿಸುತ್ತಿದ್ದಾರ ಇಲ್ಲವೇ ಎಂಬ ಸಂಶಯ ಈಗ ಎಲ್ಲರಲ್ಲೂ ಮೂಡಿದೆ.

ಹೌದು.. ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ- ಮೇಕನಗದ್ದೆ ಮುಖ್ಯ ರಸ್ತೆಯ ಹಕ್ಕೆರುದ್ದಿಯಲ್ಲಿ ಅರಣ್ಯ ಪಾಲಕರಿಗೆ ನಿರ್ಮಾಣಗೊಂಡಿರುವ ಈ ವಸತಿ ಗೃಹ ಅನೇಕ ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಈ ನಿಟ್ಟಿನಲ್ಲಿ ಸರ್ಕಾರ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡಿದಂತಾಗಿದೆ.ರಾತ್ರಿ ಆದರೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಸಿಬ್ಬಂದಿಗಳು ತಮಗೆ ಇಷ್ಟ ಬಂದಾಗ ಬರುವುದು ಹೋಗುವದು ಮಾಡುತಿದ್ದಾರೆ. ಕಳೆದ ವರ್ಷ ಸರಕಾರ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಅನುದಾನ ಬಿಡುಗಡೆ ಮಾಡಿದ್ದು ಅದರಂತೆ ಸಿಬ್ಬಂದಿಗಳು ಅಚ್ಚುಕಟ್ಟಾಗಿ ತೋಪಗಳನ್ನು ನಿರ್ವಹಣೆ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಪೋಷಣೆ ಇಲ್ಲಾ ಎಂಬುದು ಸ್ಥಳೀಯರ ಆರೋಪವಾಗಿದೆ

ವಸತಿ ಗೃಹದ ಅಕ್ಕಪಕ್ಕದಲ್ಲಿರುವ ಗಿಡ ಗಂಟೆಗಳು ಬೆಳೆದು ನಿಂತಿದ್ದು ಸಿಬ್ಬಂದಿಗಳು ವಾಸಿಸುವ ಸ್ಥಳವನ್ನೇ ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿರುವರು ಅರಣ್ಯ ಕಾಪಾಡಲು ಹೇಗೆ ಸಾಧ್ಯ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಅದಲ್ಲದೆ ಮೋಜು ಮಸ್ತಿ ಸ್ಥಳವಾಗಿ ಪರಿವರ್ತನೆ ಗೊಳ್ಳುತ್ತಿದ್ದೂ ವಸತಿ ಗೃಹದ ಸುತ್ತ ಮುತ್ತ ಬಿಯರ್ ಟಿನ್ ಕುಡಿದು ಬಿಸಾಕಿದ್ದು ಸಾರ್ವಜನಿಕ ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರು ಸಿಬ್ಬಂದಿಗಳು ಅರಣ್ಯ ಬೆಳೆಸಲು ಶ್ರಮವಹಿಸಿ ಕೆಲಸ ಮಾಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!