Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ಭರವಸೆಗಳಿಗೆ ಮಾತ್ರ ಸೀಮಿತವಾದ್ರ ಶಾಸಕಿ?: ನಮ್ಮೂರ ರಸ್ತೆ ದುರಸ್ತಿ ಯಾವಾಗ ಅಂತಿದ್ದಾರೆ ಚಿನ್ನಿಗಾ ಗ್ರಾಮಸ್ಥರು!

ಮೂಡಿಗೆರೆ: ಭರವಸೆಗಳಿಗೆ ಮಾತ್ರ ಸೀಮಿತವಾದ್ರ ಶಾಸಕಿ?: ನಮ್ಮೂರ ರಸ್ತೆ ದುರಸ್ತಿ ಯಾವಾಗ ಅಂತಿದ್ದಾರೆ ಚಿನ್ನಿಗಾ ಗ್ರಾಮಸ್ಥರು!

ಮೂಡಿಗೆರೆ: ತಾಲೂಕಿನ ಚಿನ್ನಿಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಯ್ಸಳಲು ಗ್ರಾಮದ ವಾಟೇಹಳ್ಳಿ ರಸ್ತೆಯನ್ನು ಸ್ವತಃ ಗ್ರಾಮಸ್ಥರೇ ಇತ್ತೀಚೆಗೆ ಹಣ ಕ್ರೂಢಿಕರಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ರಸ್ತೆ ಗುಂಡಿಗಳನ್ನು ಮುಚ್ಚುವುದರ ಮುಖೇನ ತಾಲೂಕಿನ ಜನಪ್ರಿಯ ಶಾಸಕರಿಗೆ ಮಾಧ್ಯಮದ.ಮೂಲಕ ಪ್ರಶ್ನೆಗಳ ಸುರಿಮಳೆಗೈದರು.

ಶಾಸಕಿ ನಯನ ಮೋಟಮ್ಮ ಮೂಡಿಗೆರೆ ಮಾದರಿಯನ್ನಾಗಿಸುತ್ತಾರೆ ಎಂಬ ನಂಬಿಕೆ ಇಟ್ಟಿದ್ದೆವು ಆ ನಂಬಿಕೆ ಎಂಬುದು ನಂಬಿಕೆಗೆ ಮಾತ್ರ ಸೀಮಿತವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಕೇವಲ ಭರವಸೆ ನೀಡಿದರೆ ಸಾಲದು ಮಾತು ಕೊಟ್ಟ ಮೇಲೆ ತಕ್ಕಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬುದು ಇಲ್ಲಿನ ಸ್ಥಳೀಯರು ಆಕ್ರೋಶವಾಗಿದೆ.

ಹೌದು ಗ್ರಾಮ ಪಂಚಾಯತಿಯವರಿಂದಾಗಲಿ ಶಾಸಕರಿಂದಾಗಲಿ ಯಾವ ಅನುದಾನ ಬಂದಿರುವುದಿಲ್ಲಾ ಕಳೆದ ಅತೀ ಮಳೆಯ ಸಮಯದಲ್ಲಿ ರಸ್ತೆ ತುಂಡಾಗಿದ್ದು ಓಡಾಡಲು ವಿದ್ಯಾರ್ಥಿಗಳಿಗೆ,ಜನರಿಗೆ ತುಂಬಾ ತೊಂದರೆಯಾಗಿತ್ತು.ಈ ವಿಷಯದಲ್ಲಿ ಶಾಸಕರಿಗೂ ತಿಳಿಸಲಾಗಿತ್ತು.ಈ ರಸ್ತೆಗೆ ಯೊಜನಾ ವರದಿ ತಯಾರಾಗಿತ್ತು.ಆದರೆ ಈ ರಸ್ತೆ ಕೆಲಸಮಾಡಲು ಇನ್ನು ಎಷ್ಟುದಿನ ಬೇಕು ಅನ್ನೋದೇ ಜನರ ಪ್ರಶ್ನೆಯಾಗಿದೆ

ರಸ್ತೆ ಗುಂಡಿ ಬಿದ್ದು ಹಾಳಾಗಿರುವುದರ ವಿಚಾರ ಶಾಸಕರ ಗಮನಕ್ಕೂ ತಿಳಿಸಲಾಗಿತ್ತು.ನಮಗೆಲ್ಲ ಭರವಸೆ ನೀಡಿದ್ದರು ಆ ಭರವಸೆ ಇದೀಗ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದ್ದು ಶಾಸಕರು ನೀಡಿದ ಭರವಸೆ ನಮಗೆ ಅತೃಪ್ತ ವಾಗಿದೆ ಎಂದು ಗ್ರಾಮಸ್ಥರು ನೋವನ್ನು ಹಂಚಿಕೊಂಡರು.

ಒಂದು ಪಕ್ಷದಲ್ಲಿ ರಸ್ತೆ ಸರಿಯಾಗದಿದ್ದರೆ ಮುಂದಿನ ಮಳೆಗೆ ಅವಾಂತರಗಳು ಕಟ್ಟಿಟ್ಟಬುತ್ತಿ ಜನರು ಗ್ರಾಮದಿಂದ ಜನ್ನಾಪುರ ತಲುಪಲು ಸುಮಾರು 6 ಕಿಲೋ ಮೀಟರ್ ಕ್ರಮಿಸಬೇಕು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಗಮನದಲ್ಲಿಟ್ಟು ಈ ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ನವ ರಸ್ತೆ ಕಾಮಗಾರಿಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!