ಮೂಡಿಗೆರೆ: ಪ್ರತಿ ವರ್ಷದಂತೆ ಈ ವರ್ಷವೂ ಮೇಧಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಗಸ್ಟ್ 10 ರಂದು ಮೂಡಿಗೆರೆಯ ತೋಟಗಾರಿಕ ಕೃಷಿ ವಿಜ್ಞಾನ ಕಾಲೇಜು ಆವರಣದಲ್ಲಿ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ.

ಈ ಕುರಿತು ಪಬ್ಲಿಕ್ ಇಂಪಾಕ್ಟ್ ಮೇಧಾ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಸುರೇಶ್ ಮಾಹಿತಿ ನೀಡಿದ್ದು, ಸ್ವಾತಂತ್ರ ದಿನಾಚರಣೆಯ ಅಂಗವಾಗಿ. ಬಡ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮೂರನೇ ವರ್ಷದ ತಾಲ್ಲೂಕು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಕಬ್ಬಡಿ ಕ್ರೀಡಾಕೂಟ ಆಯೋಜಿಸಿದ್ದು ಬಡ ಮಕ್ಕಳ ಏಳಿಗೆಯನ್ನು ಸಂಸ್ಥೆ ಸದಾ ಬಯಸುತ್ತದೆ.
ಈ ಹಿನ್ನಲೆ ಪ್ರತಿ ಭಾನುವಾರ ಕ್ಲಬ್ ವತಿಯಿಂದ ಉಚಿತ ತರಬೇತಿ ನೀಡಲಾಗುವುದು. ಸಂಸ್ಥೆ ಬಡ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಸಲುವಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ.ಇದರ ಜೊತೆಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನವನ್ನು ನೀಡುತ್ತಾ ಬಂದಿರುವುದಾಗಿ ತಿಳಿಸಿದರು.
ಹಾಗೆ ನುರಿತ ತರಬೇತುದಾರರಾದ ಸುರೇಂದ್ರ.ಪೂರ್ಣೇಶ್ ಕೌಶಿಕ್ ಇವರಿಂದ ಮಕ್ಕಳಿಗೆ ತರಬೇತಿ ನೀಡಲಾಗುವುದು ಎಂದರು
ಮೇಧಾ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಸುರೇಂದ್ರ ಹಳ್ಳದಗಂಡಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಸೂಚಿಸಿದರು.