ಮೂಡಿಗೆರೆ: ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕದ ಪದಗ್ರಹಣ ಕಾರ್ಯಕ್ರಮವನ್ನು ಪಟ್ಟಣದ ಜೆಸಿಐ ಹಾಲ್ ನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕುಮಾರಿ ಅನನ್ಯ ಅವರಿಗೆ ಪುಷ್ಪ ನೀಡಿ ಸಿಹಿ ತಿನಿಸಿ ಜ್ಯೋತಿ ಬೆಳಗುವುದರ ಮೂಲಕ ಜಿಲ್ಲಾ ಕಸಪ ಯುವ ಘಟಕದ ಅಧ್ಯಕ್ಷೆ ಪ್ರಿಯಾಂಕ ಭರತ್ ಉದ್ಘಾಟಿಸಿದರು

ಬಳಿಕ ಮಾತನಾಡಿ ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿರುವ ಯುವ ಸಮೂಹವನ್ನು ಒಂದುಗೂಡಿಸಿ ಅದೇ ಸಾಮಾಜಿಕ ಜಾಲತಾಣಗಳಿಂದಲೇ ಕನ್ನಡ ನಾಡು ನುಡಿ ಸಂಸ್ಕೃತಿ ತಿಳಿದುಕೊಳ್ಳುವ ಕೆಲಸ ಯುವ ಸಮೂಹ ಮಾಡಬೇಕು. ಕನ್ನಡ ಪುಸ್ತಕ ಗಳ ಹೆಚ್ಚಾಗಿ ಓದಲು ಸಲಹೆ ನೀಡಿದರು. ಕನ್ನಡ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಿ ಯುವ ಮನ ಸೆಳೆಯುವ ಕೆಲಸ ಸಂಘಟನೆ ಮಾಡಬೇಕು ಕನ್ನಡದ ಭವ್ಯ ಪರಂಪರೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮದು ಎಂದರು
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿದ ಶಾಂತಕುಮಾರ್ ಸಾಮಾಜಿಕ ಜಾಲತಾಣಗಳಿಗೆ ತಲೆ ತಗ್ಗಿಸಿದ ಯುವಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕ ನಮ್ಮ ಸಂಘಟನೆಗೆ ತಂದು ಕನ್ನಡ ಭಾಷೆ ಪರಂಪರೆ ಕುರಿತು ತಿಳಿಸಬೇಕು. ಯಾವುದೇ ಉತ್ತಮ ಕೆಲಸ ಮಾಡುವಾಗ ಗೇಲಿ ಮಾಡುವವರು ಸಹಜ ಅವರುಗಳಿಗೆ ತಲೆ ಕೆಡಿಸಿಕೊಳ್ಳದೆ ಮುನ್ನುಗ್ಗಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಯುವ ಘಟಕದ ಅಧ್ಯಕ್ಷ ಚಂದ್ರು ಒಡೆಯರ್ ಮಾತನಾಡಿ ಕನ್ನಡ ಮನುಸುಗಳೆಲ್ಲ ನನ್ನೊಂದಿಗೆ ಕೈ ಜೋಡಿಸಬೇಕು. ಕನ್ನಡದ ಕೆಲಸಗಳಿಗೆ ಯುವಕರು ಸದಾ ಮುಂಚೂಣಿಯಲ್ಲಿರಬೇಕು. ಉತ್ತಮ ತಂಡ ನನ್ನೊಂದಿಗಿದ್ದು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಉಳಿವಿಗೆ ಶ್ರಮಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ ಘಟಕದ ಅಧ್ಯಕ್ಷ ಲಕ್ಷ್ಮಣ ಗೌಡ, ಕಸಪ ಜಿಲ್ಲಾ ಸಂಚಾಲಕಿ ವಿಶಾಲ ನಾಗರಾಜ್, ಸಮಾಜ ಸೇವಕ ಹಸೈನರ್ ಬೀಳಗುಳ, ಕೆಂಪೇಗೌಡ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್, ಕನ್ನಡ ಪರ ಹೋರಾಟಗಾರ ರಘು ಹೊರಟ್ಟಿ, ಅಮರ್ ನಾಥ್, ಕಾಮಿಡಿ ಕಿಲಾಡಿ ರಮೇಶ್ ಯಾದವ್, ಮಹಿಳಾ ಘಟಕದ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಘಟಕದ ಜವಾಬ್ದಾರಿಯುತ ಸದಸ್ಯರು ಸೇರಿದಂತೆ ಸಂಘಟನೆಯ ಸದಸ್ಯರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.