ಮೂಡಿಗೆರೆ: ಬೆಟ್ಟದ ಬೈರೇಶ್ವರ ದೇವಾಲಯದ ಪವಿತ್ರತೆ ಉಳಿಸದಿದ್ದಲ್ಲಿ ಅಧಿಕಾರಿಗಳ ವಿರುದ್ದ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡುವುದಾಗಿ ಕೆಂಪೇಗೌಡ ಒಕ್ಕಲಿಗ ವೇದಿಕೆ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮೂಡಿಗೆರೆ ಘಟಕದ ಸಂಘಟನೆಯ ಅಧ್ಯಕ್ಷ ಬ್ರಿಜೇಶ್ ಕಡಿದಾಳು ಇತ್ತೀಚಿನ ದಿನಗಳಲ್ಲಿ ಮರಗುಂದ ಗ್ರಾಮದ ಹಲವು ಶತಮಾನಗಳ ಇತಿಹಾಸ ಇರುವ ಶ್ರೀ ಬೆಟ್ಟದ ಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೆಲವು ಛಾಯಾಗ್ರಾಹಕ ಸಂಘ ಅಂತ ಹೇಳಿಕೊಂಡು ಮದುವೆಯ ಫ್ರೀ ವೆಡ್ಡಿಂಗ್ ಶೂಟ್ ಮಾಡಲು ದೇವಸ್ಥಾನದ ಆವರಣದಲ್ಲಿ ಪಾದರಕ್ಷೆ ಸಮೇತ ಬಂದಿದ್ದ ಕೆಲವು ಪುಡಾರಿಗಳು ವರ್ತನೆ ಖಂಡನೀಯ.

ನಮ್ಮ ನಂಬಿಕೆ ಹಾಗೂ ಶ್ರದ್ಧಾ, ಭಕ್ತಿ,ಧಾರ್ಮಿಕ ಕೇಂದ್ರವಾದ ದೇವಸ್ಥಾನದಲ್ಲಿ ಅನುಚಿತವಾಗಿ ನಡೆದುಕೊಂಡು ದೇವಸ್ಥಾನದ ಪವಿತ್ರ ಸ್ಥಳಗಳಿಗೆ ದೇವಸ್ಥಾನದ ಅರ್ಚಕರ ಮಾಹಿತಿ ಇಲ್ಲದೆ ಹೋಗಿ ಫೋಟೋಗಳನ್ನು ತೆಗೆಯುತ್ತಿದ್ದಾಗ ಅರ್ಚಕರು ಹಾಗೂ ಗ್ರಾಮದ ಗ್ರಾಮಸ್ಥರುಗಳು ಕೆಲವರು ಇದನ್ನು ಪ್ರಶ್ನಿಸಿದ್ದಾರೆ ಛಾಯಾಗ್ರಾಹಕರ ಗುಂಪು ಏಕಾಏಕಿ ಗ್ರಾಮಸ್ಥರ ಮೇಲೆ ಮುಗಿಬಿದ್ದು ಗ್ರಾಮದಲ್ಲಿನ ಯುವಕರುಗಳಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು..
ಸ್ಥಳೀಯರು ಇದನ್ನು ಪ್ರಶ್ನಿಸಿದ್ದೆ ತಪ್ಪು ಎಂಬಂತೆ ಬಿಂಬಿಸಿದ್ದು ಬೇಸರದ ಸಂಗತಿ ಈ ಅಂಶವೇ ಗಲಾಟೆಯಾಗಲು ಪ್ರಮುಖ ಕಾರಣರಾಗಿರುತ್ತದೆ
ಮೂಡಿಗೆರೆ ಹಾಗೂ ಸಕಲೇಶಪುರ ತಾಲ್ಲೂಕಿನ ಎಲ್ಲಾ ಹಿಂದೂ ಜನಾಂಗದ ಅದರಲ್ಲೂ ನಮ್ಮ ಒಕ್ಕಲಿಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಮನೆತನಗಳ ಮನೆದೇವರಾದ ಶ್ರೀ ಕಾಲ ಭೈರವೇಶ್ವರ ಸ್ವಾಮಿ ದೇವರಮನೆ, ಶ್ರೀ ನಾಣ್ಯ ಭೈರವೇಶ್ವರ ಸ್ವಾಮಿ ಭೈರಾಪುರ, ಶ್ರೀ ಬೆಟ್ಟದ ಭೈರವೇಶ್ವರ ಸ್ವಾಮಿ ಮರಗುಂದ, ಧುರ್ಗದಹಳ್ಳಿಯ ಶ್ರೀ ಕಾಲ ಭೈರವೇಶ್ವರ ಸ್ವಾಮಿ ದೇವಸ್ಥಾನಗಳು ನೂರಾರು ವರ್ಷದ ಪುರಾತನ ಇತಿಹಾಸವುಳ್ಳ ದೇವಸ್ಥಾನಗಳಾಗಿದ್ದು ನಮ್ಮ ಮಲೆನಾಡಿನ ಜನರಿಗೆ ಶ್ರದ್ಧಾ ಮತ್ತು ಭಕ್ತಿ ಕೇಂದ್ರವಾಗಿರುತ್ತವೆ
ಈ ದೇವತೆಗಳ ಸುಗ್ಗಿಹಬ್ಬ, ಜಾತ್ರೆಗಳನ್ನು ಇಲ್ಲಿನ ಜನರು ಅನಾಧಿಕಾಲದಿಂದಲು ಭಕ್ತಿಪೂರ್ವಕವಾಗಿ ನಡೆಸಿಕೊಂಡು ಬರುತಿರುವುದರಿಂದ ಇಲ್ಲಿನ ಜನರು, ದೇವತೆಗಳ ಆಶೀರ್ವಾದದಿಂದ ಸಕಾಲಕ್ಕೆ ಮಳೆ, ಬೆಳೆಯಾಗಿ, ಸುಖ ಶಾಂತಿ ನೆಮ್ಮದಿಯಿಂದ ಒಟ್ಟಾಗಿ ಬದುಕು ಸಾಗಿಸುತ್ತಿದ್ದು,ಈ ದೇವರ ಗುಡಿಗಳನ್ನು ತಮ್ಮ ಮನೆಗಳಿಗಿಂತ ಅತಿಯಾಗಿ ತಮ್ಮ ತಮ್ಮ ಮನದಲ್ಲಿಟ್ಟುಕೊಂಡು ಆರಾ ದಿಸುತ್ತಿರವುದರಿಂದ, ಕೆಲವು ಹೊರಗಿನಿಂದ ಪ್ರವಾಸಕ್ಕೆಂದು ಬರುವ ಮತ್ತು ಈ ರೀತಿ ಮದುವೆಯ ಪ್ರಿ ವೆಡ್ಡಿಂಗ್ ಶೂಟ್ ಗೆಂದು ಬರುವ ಕೆಲವು ಸಂಸ್ಕೃತಿ ಹೀನರಿಂದ ದೇವಸ್ಥಾನದ ಸುತ್ತಮುತ್ತ ಅನೈತಿಕ ಚಟುವಟಿಕೆಗಳು ಮತ್ತು ಮೈಲಿಗೆಗಳು ಆಗುತ್ತಿದ್ದರೂ ಕೂಡ ಕಂಡರೂ ಕಾಣದಂತೆ ಕುಳಿತಿರುವ ಈ ದೇವಸ್ಥಾನಗಳಿಗೆ ಸಂಬಂಧಪಟ್ಟ ಧಾರ್ಮಿಕ ದತ್ತಿ ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು ಕೈಕಟ್ಟಿ ಕುಳಿತುಕೊಂಡಿರುವುದು ನಿಜಕ್ಕೂ ವಿಷಾಧನೀಯ, ಇದನ್ನು ಪ್ರಶ್ನಿಸಲು ಮುಂದಾದ ಹಲವಾರು ಗ್ರಾಮದ ಗ್ರಾಮಸ್ಥರುಗಳಿಗೆ ಹೊರಗಿನಿಂದ ಬಂದ ಪಟ್ಟಣದ ಕೆಲವು ಪುಡಾರಿಗಳು ಇಲ್ಲಿನ ಜನರ ದೈವಗಳ ಮೇಲಿನ ನಂಬಿಕೆ ಮತ್ತು ಭಾವನೆ ಅರಿಯದೆ ಗ್ರಾಮಸ್ಥರ ಮೇಲೆಯೇ ಜಗಳಕ್ಕೆ ನಿಲ್ಲವುದು ಇವರುಗಳ ಕೆಲಸವಾಗಿದ್ದು ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಶುಕ್ರವಾರ ದಿನವೂ ಕೂಡ ಅಲ್ಲಿನ ದೇವಸ್ಥಾನದ ಅರ್ಚಕರು ಮತ್ತು ಗ್ರಾಮದ ಯುವಕರಾದ ಪ್ರಶಾಂತ್ ಹಾಗೂ ರಕ್ಷಯ್ ಹಾಗೂ ಗ್ರಾಮದ ಕೆಲವು ಯುವಕರುಗಳು ಇವರನ್ನು ಪ್ರಶ್ನಿಸಿದಾಗ ಅವರುಗಳನ್ನು ದೇವಸ್ಥಾನದಲ್ಲಿ ಅವಾಚ್ಯ ಶಬ್ದಗಳಿಂದನಿಂದಿಸಿ, ಗಲಾಟೆಯಾಗಲು ಪ್ರಚೋದಿಸಿ ತಮ್ಮ ಪುಂಡ ತನವನ್ನು ಮೆರೆದಿರುತ್ತಾರೆ, ಹಾಗೂ ಕೇಳಲು ಹೋದವರಮೇಲೆಯ ಸಕಲೇಶಪುರದ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನು ದಾಖಲಿಸಿರುವುದು ವಿಷಾದನೀಯ, ಎರೆಡು ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ ಗಲಾಟೆ ನಡೆಯಲು ಪ್ರಚೋದನೆ ಕಾರಿಯಾಗಿ ಅವಾಚ್ಯ ಪದಗಳಿಂದ ನಿಂದಿಸಿದ ಆ ಪುಡಾರಿ ಛಾಯಾಗ್ರಾಹಕನು ಸಹ ತಪ್ಪಿತಸ್ತನೆ ಆಗಿರುತ್ತಾನೆ ಆತನಿಗೂ ಕೂಡ ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆಯನ್ನು ನೀಡದೆ ರಾಜಕೀಯ ಒತ್ತಡಕ್ಕೆ ಪೊಲೀಸ್ ಇಲಾಖೆ ಒಳಗಾಗಿರವುದು ನೋವಿನ ಸಂಗತಿಯಾಗಿದೆ.
ಅಲ್ಲದೆ ವಿಚಾರವನ್ನು ಸಮರ್ಥಿಸಿಕೊಂಡು ನಮ್ಮ ಮೂಡಿಗೆರೆಯ ಕೆಲವು ಛಾಯಾಗ್ರಾಹಕರು ವಿಕೃತ ಮನಸಿನಿಂದ ಸಂಭ್ರಮಿಸಿರವುದನ್ನು ನಾವು ಖಂಡಿಸುತ್ತೇವೆ, ಇದರ ಸತ್ಯ ಅಸತ್ಯತೆಯನ್ನು ತಿಳಿದುಕೊಂಡು ಸರಿಯಾದ ಕ್ರಮ ಕೈಗೊಂಡು ಸ್ಥಳೀಯ ಭಕ್ತಾದಿಗಳಿಗೆ, ಗ್ರಾಮಸ್ಥರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಈ ದೇವಸ್ಥಾನಗಳಿಗೆ ಸಂಬಂಧಪಟ್ಟ ಇಲಾಖೆಗಳು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಥವಾ ಪ್ರವಾಸಿಗರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿ ಮತ್ತು ದೇವಸ್ಥಾನದ ಆವರಣದ ಸುತ್ತಮುತ್ತ ಫೋಟೋ ಅಥವಾ ವಿಡಿಯೋ ಚಿತ್ರೀಕರಣವನ್ನು ನಿಷೇದಿಸಬೇಕು ಇಲ್ಲವಾದಲ್ಲಿ ನಮ್ಮ ಧಾರ್ಮಿಕ ಕೇಂದ್ರದ ಪವಿತ್ರತೆಯನ್ನು ಉಳಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಹಲವು ಹಿಂದೂಪರ ಸಂಘಟನೆಗಳ ಪರ ಕೈಜೋಡಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವರದಿ:ಪುನೀತ್ ಕಡಿದಾಳು
9483811948
