Wednesday, March 25, 2026
Homeಕ್ರೈಮ್ಮೂಡಿಗೆರೆ: ತಮ್ಮ ಜಾಗಕ್ಕೆ ಪತಿಯನ್ನು ಕೂರಿಸಿದ ಕುಂದೂರು ಗ್ರಾ.ಪಂ ಅಧ್ಯಕ್ಷೆ: ಈತ ಮಾಡಿದ್ದೇ ಬೇರೆ ಕೆಲಸ:...

ಮೂಡಿಗೆರೆ: ತಮ್ಮ ಜಾಗಕ್ಕೆ ಪತಿಯನ್ನು ಕೂರಿಸಿದ ಕುಂದೂರು ಗ್ರಾ.ಪಂ ಅಧ್ಯಕ್ಷೆ: ಈತ ಮಾಡಿದ್ದೇ ಬೇರೆ ಕೆಲಸ: ಇಲ್ಲಿದೆ ಡಿಟೇಲ್‌ ಸ್ಟೋರಿ!

ಮೂಡಿಗೆರೆ : ಗ್ರಾಮದ ಕೆಲಸವಾಗಲಿ ಎಂದು ಗ್ರಾಮಸ್ಥರು ಅಧ್ಯಕ್ಷರನ್ನು ಚುನಾವಣೆ ಮೂಲಕ ಗೆಲ್ಲಿಸಿ ಕಳಿಸಿದರೆ ಅಧ್ಯಕ್ಷರು ತಮ್ಮ ಕುರ್ಚಿಯಲ್ಲಿ ಕೂರದೆ ಖಾಸಗಿ ಶಾಲೆಯ ಶಿಕ್ಷಕಿಯಾಗಿ ಭೋಧಿಸಲು ಹೋಗುತ್ತಿದ್ದಾರೆ. ಆದರೆ ತಮ್ಮ ಕುರ್ಚಿಯನ್ನು ತನ್ನ ಪತಿರಾಯರಿಗೆ ಬಿಟ್ಟು ಕೊಡುವ ಮೂಲಕ ಆದರ್ಶ ಸತಿ ಎಂದು ಸಾಬೀತು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಗೆದ್ದು ಗದ್ದುಗೆ ಏರಿದ ಶ್ರೀಮತಿ ರತಿ ನವೀನ್ ರವರು ಗೆದ್ದ ನಂತರ ತನ್ನ ಸಂಬಳಕ್ಕೆ ಖೋತ ಆಗುತ್ತದೆ ಎಂದು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಮುಂದುವರೆದುಕೊಂಡು ಹೋಗುತ್ತಿದ್ದಾರೆ. ಆದರೆ ಇತ್ತ ಅಧ್ಯಕ್ಷರ ಗದ್ದುಗೆ ಖಾಲಿ ಇರಬಾರದೆಂದು ತಮ್ಮ ಪತಿ ನವಿನ್ ರವರನ್ನು ಕೂರಿಸುವ ಮೂಲಕ ತಮ್ಮ ತನವನ್ನು ತೋರಿಸಿದ್ದಾರೆ. ಆದರೇ ಸಾರ್ವಜನಿಕರ ಕೆಲಸಗಳು ಯಾವುದೇ ಆಗುತ್ತಿಲ್ಲಾ ಎಲ್ಲಾ ಕಮಿಷನ್ ದಂಧೆಗಳು ನಡೆಯುತ್ತಿವೆ ಅಧ್ಯಕ್ಷರ ಪತಿ ಮತ್ತು ಅಧಿಕಾರಿಗಳು ದಂಧೆಯಲ್ಲಿ ಮುಳುಗಿದ್ದು ಅಭಿವೃದ್ದಿ ಕಾರ್ಯದಿಂದ ಹಿನ್ನಡೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.


ಸರ್ಕಾರ ಜಾತಿಗಣತಿ ಮಾಡುವಂತೆ ಶಿಕ್ಷಕರು ಮತ್ತು ಗ್ರಾಮಪಂಚಾಯತಿ ಅಧಿಕಾರಿಗಳನ್ನು ನೇಮಿಸಿ ಜಾತಿಗಣತಿ ನಡೆಸಿತು ಆದರೆ ಕುಂದೂರು ಗ್ರಾಮ ಪಂಚಾಯತಿಯಲ್ಲಿ ವಯಕ್ತಿಕವಾಗಿ ಕುಟುಂಬವೊಂದನ್ನು ಬಿಟ್ಟು ಜಾತಿಗಣತಿ ನಡೆಸಿರುವ ಪ್ರಕರಣ ವರದಿಯಾಗಿದೆ.


ಇನ್ನು ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು ಕುಡಿಯುವ ನೀರಿಗೆ ಹಾಹಾಕಾರವಾಗಿದೆ. ಕುಡಿಯುವ ನೀರಿಗೆ ತೊಂದರೆ ಆಗಬಾರದೆಂದು ಸರ್ಕಾರದಿಂದ ನೀರಿನ ಟ್ಯಾಂಕರ್ ಗಳನ್ನು ನೀಡಲಾಗಿದೆ. ಆದರೇ ಅಧ್ಯಕ್ಷರು ಮತ್ತು ಅಧಿಕಾರಿಗಳು ಆ ನೀರಿನ ಟ್ಯಾಂಕರ್ ಅನ್ನು ಖಾಸಗಿ ಗುತ್ತಿಗೆದಾರನಿಗೆ ಬಾಡಿಗೆ ನೀಡಿದ್ದರ ಪರಿಣಾಮ ಕುಡಿಯುವ ನೀರು ಸರಬರಾಜು ಆಗದೆ ಗ್ರಾಮಸ್ಥರು ಹಪಾಹಪಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಪಂಚಾಯತಿ ಪಿಡಿಓರವರನ್ನು ಕೇಳಲು ಹೋದರೆ ಅವರ ಸರ್ಕಾರಿ ಸಿಮ್ ಸುಚ್ ಆಫ್ ಆಗಿದ್ದು ವಾರದಲ್ಲಿ ಮೂರು ದಿನ ಕುಂದೂರು ಮತ್ತೆ ಮೂರು ದಿನ ಬೇರೊಂದು ಗ್ರಾಮ ಪಂಚಾಯತಿ ಹಾಗಾಗಿ ಪಿಡಿಓ ಅವರನ್ನು ನೋಡಲು ಹರಸಾಹಸ ಪಡಬೇಕಾಗಿದೆ. ಅಧ್ಯಕ್ಷರನ್ನು ಕೇಳಿದರೆ ತಾವು ಶಾಲೆಯಲ್ಲಿ ಇದ್ದು ತಮ್ಮ ಪತಿದೇವರನ್ನು ಕಾಣುವಂತೆ ತಿಳಿಸುತ್ತಿದ್ದಾರೆ. ಒಟ್ಟಿನಲ್ಲಿ ಅಲ್ಲಿದ್ದವರಿಗೆ ಕಡಲೇ ಇಲ್ಲಾ ಕಡಲೇ ಇದ್ದವರಿಗೆ ಹಲ್ಲಿಲ್ಲದಂತ ಪರಿಸ್ಥಿತಿ ಎದುರಾಗಿದೆ.


ಪ.ಜಾತಿ ಮತ್ತು ಪ.ಪಂಗಡಗಳ 50 ಕ್ಕೂ ಅಧಿಕ ಮನೆಗಳು ಇದ್ದು ಈ ಮನೆಗಳಿಗೆ ರಸ್ತೆ ಮಾಡಲು ಆದೇಶವಿದ್ದರೂ ಸದರಿ ರಸ್ತೆಯನ್ನು 200ಮೀಟರ್ ರಸ್ತೆಯನ್ನು ಅಲ್ಲಿ ನಿರ್ಮಿಸಲು ಮೀಸಲಿಡಲಾಗಿತ್ತು ಆದರೆ ಅಧ್ಯಕ್ಷರ ಪತಿ ದೇವರ ಕೃಪಾರ್ಶೀವಾದದಿಂದ ಆ ರಸ್ತೆಯನ್ನು ತಮಗೆ ಬೇಕಾದವರ ಅಂದರೆ ಜನರಲ್ ಗೆ ಬದಲಾಯಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಹೋಗುತ್ತಿರುವುದಾಗಿ ಗ್ರಾಮಸ್ಥರಾದ ಮಂಜುಳ ಕುಮಾರ್ ಮತ್ತು ಕುಮಾರ ಮಂಜುನಾಥ್ ತಿಳಿಸಿದ್ದಾರೆ.


ಅಧ್ಯಕ್ಷರ ಪತಿ ನವೀನ್ ರವರು ವಯಕ್ತಿಕ ದ್ವೇಷದಿಂದ ಜಾತಿ ಗಣತಿ ಮಾಡಲು ತಮ್ಮ ಮನೆಗೆ ಅಧಿಕಾರಿಗಳು ಬಾರದೇ ಇರುವಂತೆ ತಡೆದಿದ್ದು ತಮ್ಮ ಮನೆಯ ಜಾತಿ ಗಣತಿಯನ್ನು ನಡೆಸಿಲ್ಲ ಎಂದು ಗ್ರಾಮಸ್ಥರಾದ ಅಶ್ವತ್ ಆರೋಪಿಸಿದ್ದಾರೆ.


ಕುಂದೂರು ಗ್ರಾಮ ಪಂಚಾಯತಿಯಲ್ಲಿ ಹೇಳುವವರೂ ಕೇಳುವವರೂ ಇಲ್ಲದಂತಾಗಿದೆ ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಮನಸ್ಸಿಗೆ ಬಂದಂತೆ ಬದಲಾಯಿಸಿಕೊಳ್ಳಲಾಗುತ್ತಿದೆ. ಕೆಲವರಿಗೆ ಈ ಸ್ವತ್ತು ಸಹ ಸಿಗದೆ ಪರೆದಾಡುತ್ತಿದ್ದಾರೆ ಕೂಡಲೇ ಕುಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಬದಲು ಅವರ ಪತಿಯವರು ಆಡಳಿತ ನಡೆಸುತ್ತಿದ್ದು ಅವರೊಂದಿಗೆ ಅಧಿಕಾರಿಗಳು ಸಹಾ ಶಾಮೀಲಾಗಿದ್ದು ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!