ಮೂಡಿಗೆರೆ: ಲಯನ್ಸ್ ಕ್ಲಬ್ ಗೋಣಿಬೀಡು ಮಾತೃಶ್ರೀಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸೂಪರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ನವೀನ್ ಕುಮಾರ್ ಎಂ.ಸಿ. ಮಾತನಾಡಿ, ನೇತೃತ್ವವೆಂದರೆ ಇತರರಿಗೆ ಸೇವೆ ಮಾಡುವ ಮಾರ್ಗ ನಾಯಕನ ಮಹತ್ವ ಅವನ ಅಧಿಕಾರದಲ್ಲಿ ಅಲ್ಲ, ಅವನ ಸೇವಾ ಭಾವನೆಯಲ್ಲಿ ಇರುತ್ತದೆ ಎಂಬ ಡಾಕ್ಟರ್ ಅಬ್ದುಲ್ ಕಲಾಂ ಅವರ ಮಾತನ್ನು ನೆನೆಸಿಕೊಳ್ಳುತ್ತಾ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದಾಗಿ ತಿಳಿಸಿದರು
ಸಂಘಟನೆ ಕಾರ್ಯದರ್ಶಿಯಾಗಿ ಹರೀಶ್ ಎಂ.ಸಿ, ಕೋಶಾಧಿಕಾರಿಯಾಗಿ ಸುನಿತಾ ಕುಮಾರ್ ಅವರು ಜವಾಬ್ದಾರಿ ಸ್ವೀಕರಿಸಿದರು ಹಾಗೆ ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲರಾದ ಹೆಚ್.ಎಂ.ತಾರಾನಾಥ್ ನೂತನ ಪಧಾದಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು
ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷರಾದ ಬಿ.ಏನ್. ವೆಂಕಟೇಶ್ , ಪ್ರಾಂತೀಯ ರಾಯಭಾರಿಗಳಾದ ಎಂ.ಬಿ.ಗೋಪಾಲ್ ಗೌಡ , ವಲಯ ಅಧ್ಯಕ್ಷರಾದ ರಾಮ್ ಪ್ರಸಾದ್ ಯು .ಎಂ.ಸಂಸ್ಥಾಪಕ ಅಧ್ಯಕ್ಷರಾದ ಆರ್ ಶಿವಕುಮಾರ್ , ಮಹೇಶ್ ಯು. ಸಿ. ಸೇರಿದಂತೆ ಇತರರು ಉಪಸ್ಥಿತರಿದ್ದರು