Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಪ್ರವಾಸಿ ತಾಣ ದೇವರಮನೆ ಸಾಗುವ ರಸ್ತೆ ದುರಸ್ಥಿ ಕಾರ್ಯಕ್ಕೆ ಮುಂದಾದ ಸ್ಥಳೀಯರು

ಮೂಡಿಗೆರೆ: ಪ್ರವಾಸಿ ತಾಣ ದೇವರಮನೆ ಸಾಗುವ ರಸ್ತೆ ದುರಸ್ಥಿ ಕಾರ್ಯಕ್ಕೆ ಮುಂದಾದ ಸ್ಥಳೀಯರು

ಮೂಡಿಗೆರೆ: ತಾಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾದ ದೇವರಮನೆ ಸಾಗುವ ರಸ್ತೆಯನ್ನು ಸ್ವತಃ ಗ್ರಾಮಸ್ಥರೇ ದುರಸ್ಥಿಗೊಳಿಸಿದ ಘಟನೆ ಗುತ್ತಿ ಗ್ರಾಮದಲ್ಲಿ ನಡೆದಿದೆ.

ಕಚ್ಚಾ ರಸ್ತೆಯನ್ನು ಗ್ರಾಮಸ್ಥರೇ ದುರಸ್ಥಿ ಮಾಡಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ರಸ್ತೆಯು ಭೂಕುಸಿತದಿಂದ ಹದಗೆಡುತ್ತಿದೆ. ‘ಪ್ರತಿವರ್ಷವೂ ಮಳೆಗಾಲ ಕಳೆದ ನಂತರ ಈ ರಸ್ತೆಯ ದುರಸ್ತಿ ಮಾಡಲೇ ಬೇಕಿದೆ. ಇಲ್ಲದಿದ್ದರೆ ತೋಟಕ್ಕೆ ಗೊಬ್ಬರ ಕೊಂಡೊಯ್ಯಲು ಅಥವಾ ತೋಟದಿಂದ ಫಸಲು ತರಲು ರಸ್ತೆಯೇ ಇಲ್ಲವಾಗುತ್ತದೆ

ರಸ್ತೆ ಸಂಪೂರ್ಣ ಗುಂಡಿ ಬಿದಿದ್ದು ವಾಹನ ಸವಾರರು ಹರ ಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥ ಚಿರಾಗ್ ಕೊಟ್ರುಕೆರೆ ಹೇಳುತ್ತಾರೆ. ಕೂಡಲೆ ಸಂಬಂಧ ಪಟ್ಟ ಇಲಾಖೆಯವರು ರಸ್ತೆ ಸರಿ ಪಡಿಸಿಕೊಡಬೇಕೆಂದು ಗ್ರಾಮಸ್ಥರು ಭಕ್ತಾದಿಗಳು ಆಗ್ರಹಿಸಿದ್ದಾರೆ

ಶ್ರಮದಾನದಲ್ಲಿ ಗ್ರಾಮಸ್ಥರಾದ ಮದನ್ ಹೆಸಗೋಡು, ಸುನಿಲ್ ಹೆಸಗೋಡು, ಗಿರೀಶ್ ಹಳ್ಳಿಬೈಲ್, ಸಂದೇಶ್ ಗೌಡ ಗುತ್ತಿ, ವಿಜೇಂದ್ರ, ಅರುಣ್, ನವೀನ್, ಪ್ರವೀಣ್, ಪ್ರಸನ್ನ, ಉಪೇಂದ್ರ, ದಿನಕರ್ ಮತ್ತಿತರರು ಭಾಗವಹಿಸಿದ್ದರು.

ವರದಿ :ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!