ಮೂಡಿಗೆರೆ : ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಲ್ಪಟ್ಟಿರುವ ಶೌಚಾಲಯಕ್ಕೆ ತಿಂಗಳುಗಳ ಹಿಂದೆ ಬೀಗ ಜಡಿದಿದ್ದು ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಹೌದು .. ಪಟ್ಟಣದ ಹೃದಯ ಭಾಗವಾದ ತಾಲೂಕು ಕಛೇರಿಗೆ ವಿವಿಧ ಪ್ರದೇಶಗಳಿಂದ ಸಾರ್ವಜನಿಕರು ಕೆಲಸ ಕಾರ್ಯಗಳ ನಿಮಿತ್ತ ಬರುತ್ತಿದ್ದು ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಬೀಗ ಜಡಿದ ಹಿನ್ನಲೆ ಮಹಿಳೆಯರು ಮುಜುಗರಕ್ಕೆ ಒಳಗಾಗಿದ್ದು, ಪುರುಷರು ಕಟ್ಟಡದ ಹಿಂಭಾಗದ ಸ್ಥಳವನ್ನು ಉಪಯೋಗಿಸುತ್ತಿದ್ದಾರೆ.
ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ತಾಲ್ಲೂಕು ಕಚೇರಿಯ ಸುತ್ತಮುತ್ತಲು ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದೂ ವಿವಿಧ ಕಾಯಿಲೆಗಳ ಭೀತಿಯಲ್ಲಿ ಸಾರ್ವಜನಿಕರಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ