ಮೂಡಿಗೆರೆ: ಸ್ಟಾರ್ಕ್ ಆಕಾಡೆಮಿ ಹಾಗೂ ಸೂರ್ಯ ಫೌಂಡೆಷನ್ ಇವರ ವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶಿಕ್ಷಕರ ಸದನ ಬೆಂಗಳೂರು ನಗರದಲ್ಲಿ ಭಾನುವಾರ ನಡೆಯಿತು
ಕಾರ್ಯಕ್ರಮದಲ್ಲಿ ತರಬೇತಿ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತ ಶಿಕ್ಷಕರಾಗಿ ತರಬೇತುದಾರರಾಗಿ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಉಪಯುಕ್ತ ವೈಶಿಷ್ಟ ಪೂರ್ಣ ತರಬೇತಿ ನೀಡುತ್ತಿರುವ ಅರಣ್ಯ ಮಹಾವಿದ್ಯಾಲಯ ಕಾಲೇಜಿನ ಸಹಾಯಕ ಕುಲಸಚಿವ ಪೊನಂಪೇಟೆ ಮಣಿಕಂಠ ಬಿಳ್ಳೂರು ಅವರಿಗೆ ಕರ್ನಾಟಕ ತರಬೇತುದಾರ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಪ್ರಶಸ್ತಿ ಸ್ವೀಕರಿಸಿ ಬಳಿಕ ಮಾತನಾಡಿದ ಅರಣ್ಯ ಮಹಾವಿದ್ಯಾಲಯ ಸಹಾಯಕ ಕುಲಸಚಿವ ಮಣಿಕಂಠ ಅವರು, ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ನನ್ನ ಬಿಡುವಿನ ಸಮಯದಲ್ಲಿ ಕೌಶಲ್ಯ ಗುಣಮಟ್ಟದ ಅತ್ಯುತ್ತಮ ತರಬೇತಿ ನೀಡಲು ಸಹಾಯ ಮಾಡಬೇಕು ಎಂದುಕೊಂಡಿದ್ದೇನೆ. ಯುವಜನತೆ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಂಡು, ನಾಯಕತ್ವ ಗುಣ ಬೆಳೆಸಿಕೊಂಡು, ಸಮಯ ಪ್ರಜ್ಞೆಯಿಂದ ದೇಶದ ಅಭಿವೃದ್ಧಿಗೆ ದುಡಿಯಬೇಕು. ಭ್ರಷ್ಟಾಚಾರ ಮುಕ್ತ ಕೆಲಸ ಮಾಡಬೇಕು ಎಂದರು
ಈ ಕಾರ್ಯಕ್ರಮದಲ್ಲಿ ಶ್ರೀ ಮಹೇಶ್ ಪಿ. ರಾಜ್ಯ ಸಂಯೋಜಕರು, ಸ್ಪಾರ್ಕ್ ಅಕಾಡೆಮಿ ಬೆಂಗಳೂರು, ನವೋದಯ ಸಂಸ್ಥಾಪಕ ಅಧ್ಯಕ್ಷ ಸೋಮೇಶ್, ಶ್ರೀಮತಿ ಸತ್ಯವತಿ ಬಸವರಾಜು, ಶ್ರೀ ಸತೀಶ್, ಬಿ.ಕೆ.ಸಾಯಿ ಪ್ರಕಾಶ್, ಚಲನಚಿತ್ರ ನಟ ವೇಣು, ಶ್ರೀಮತಿ ಪೂರ್ಣಿಮಾ, ಡಿ ಎನ್.ಮುಖ್ಯಸ್ಥರು ಸ್ಪಾರ್ಕ್ ಅಕಾಡೆಮಿ ಬೆಂಗಳೂರು ಉಪಸ್ಥಿತರಿದ್ದರು.
