Tuesday, February 10, 2026
Homeಕ್ರೈಮ್ಮೂಡಿಗೆರೆ: ಗೋವುಗಳನ್ನು ಅಟ್ಟಾಡಿಸಿ ವಾಹನಕ್ಕೆ ತುಂಬಿದ ದುಷ್ಕರ್ಮಿಗಳು: cctv Video viral

ಮೂಡಿಗೆರೆ: ಗೋವುಗಳನ್ನು ಅಟ್ಟಾಡಿಸಿ ವಾಹನಕ್ಕೆ ತುಂಬಿದ ದುಷ್ಕರ್ಮಿಗಳು: cctv Video viral

ಚಿಕ್ಕಮಗಳೂರು: ಮಲೆನಾಡಿನಲ್ಲಿ ಗೋವುಗ ಕಳ್ಳತನಕ್ಕೆ ಮಿತಿಗೆ ಇಲ್ಲದಂತಾಗಿದೆ. ಪೊಲೀಸರು ಕಟ್ಟೆಚ್ಚರ ವಹಿಸಿದರು ಸರಣಿ ಕಳ್ಳತನಗಳು ನಡೆಯುತ್ತಲೇ ಇದೆ.

ಹೌದು .. ಮೂಡಿಗೆರೆ ತಾಲೂಕಿನ ಬಣಕಲ್‌ ನಲ್ಲಿ ಚಂದನ್‌ ಕೆಫೆ ಬಳಿ ಮಲಗಿದ್ದ ಗೋವನ್ನು ನಾಲ್ವರು ಮುಸುಕುಧಾರಿಗಳು ಅಟ್ಟಾಡಿಸಿ ಹಿಡಿದು ಬೊಲೆರೋ ವಾಹನದಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುರುವಾರ ನಸುಕಿನಲ್ಲಿ ಬಂದ ಆರೋಪಿಗಳು ಬಲವಂತವಾಗಿ ಗೋವನ್ನು ಎಳೆದಾಡುತ್ತಾ ಹಿಂಸಾತ್ಮಾಕವಾಗಿ ವಾಹನಕ್ಕೆ ತುಂಬಿಸುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು ಹಾಗೆ ಮತ್ತೊಂದು ಗೋವನ್ನು ಅಟ್ಟಾಡಿಸಿ ಎಳೆದಾಡುತ್ತಾ ವಾಹನಕ್ಕೆ ತುಂಬುವ ದೃಶ್ಯ ಕೂಡ ಅಸ್ಪಷ್ಟವಾಗಿ ಸೆರೆಯಾಗಿದೆ.

ತಿಂಗಳುಗಳ ಹಿಂದಷ್ಟೇ ಹೈಟೆಕ್ ಕಾರಿನಲ್ಲಿ ಬಂದ ಇಬ್ಬರು ಗೋ ಕಳ್ಳರು ಬಣಕಲ್ ಪಟ್ಟಣದ ಆಸ್ಪತ್ರೆಯ ಮುಂಭಾಗದಲ್ಲಿ ಮಲಗಿದ್ದ ಹಸುವನ್ನು ಕಾರಿಗೆ ತುಂಬುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು.

ಈ ಭಾಗದಲ್ಲಿ ನಿರಂತರವಾಗಿ ಹಸುಗಳ ಕಳ್ಳತನ ನಡೆಯುತ್ತಿದ್ದು,  ಹೈಟೆಕ್ ಗೋ ಕಳ್ಳರ ನಿಯಂತ್ರಣಕ್ಕೆ ಪೊಲೀಸರು ಕಡಿವಾಣ ಹಾಕಲೇಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!