ಮೂಡಿಗೆರೆ: ಪಟ್ಟಣದಲ್ಲಿ ಶುಕ್ರವಾರ ಭೀಮಾ ಕೋರೆಗಾಂವ್ ಆಚರಣ ಸಮಿತಿ ಹಾಗೂ ಹಮ್ಮಿಕೊಂಡಿದ್ದ ನಾಲ್ಕನೇ ವರ್ಷದ 208ನೇ ಸ್ವಾಭಿಮಾನ ಮತ್ತು ಶಾರ್ಯ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಡಾ. ಅಡ್ಯಂತಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಚರಿಸಲಾಯಿತು

ನಂತರ ಭೀಮರಾವ್ ಘೋಷಣೆಯೊಂದಿಗೆ ರೋಟರಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಅಲ್ಲಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆ ಸಾಗಿದರು.
ಮೆರವಣಿಗೆಯ ವೇಳೆ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. 30 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು

ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ರ‍್ಯಾಲಿಗೆ ಪಟ್ಟಣದ ಪ್ರವಾಸಿ ಮದಿರದಲ್ಲಿ ಚಾಲನೆ ನೀಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ನಿಖಿಲ್ ರಾಜ್,ಭೀಮಾ ಕೋರೆಗಾಂವ್ ಯುದ್ಧವು ದೇಶದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದು ಸ್ವಾಭಿಮಾನ ಮತ್ತು ಸ್ಪೂರ್ತಿಯ ಸಂಕೇತವಾಗಿದೆ ಎಂದು ಹೇಳಿದರು.
ಸೂರು, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ದೇವದಾಸಿ ಮರು ಪರಿಶೀಲನೆ ಸೇರಿದಂತೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಪರಿಹರಿಸಬೇಕು ಎಂದು ಸಮುದಾಯದ ಪರವಾಗಿ ಸರ್ಕಾರಕ್ಕೆ ಆಗ್ರಹಿಸಿದರು
30 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾ ಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀಯ ವೌಲ್ಯಗಳನ್ನು ಪಡೆದು ಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟವಾಗಿದೆ ಎಂದರು.
‘ಕೋರೆಗಾಂವ್ ಯುದ್ದದಲ್ಲಿ 30 ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿದ 500 ಮಹಾರ್ ಸೈನಿಕರ ಪೈಕಿ 22 ಮಂದಿ ಸೈನಿಕರು ಮರಣ ಹೊಂದುತ್ತಾರೆ. ಅವರ ನೆನಪಿಗಾಗಿ ಭೀಮನದಿ ತೀರದಲ್ಲಿ ವಿಜಯಸ್ಥಂಭ ಸ್ಥಾಪಿಸಲಾಗಿದ್ದು, ಪ್ರತಿವರ್ಷ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಈ ದಿನದ ಶಕ್ತಿ ಎಂದರು
ದಲಿತರ ಸ್ವಾಭಿಮಾನ ಮತ್ತು ಐತಿಹಾಸಿಕ ಅಸ್ಮಿತೆಯ ಪ್ರತೀಕಗಳಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಕೂಡ ಒಂದು. ಶಿವಾಜಿ ಮಹಾರಾಜರ ನಂತರ ಅಧಿಕಾರಕ್ಕೇರಿದ ಪೇಶ್ವೆ ಸಂತತಿ ಶಿವಾಜಿ ಆರ್ಮಿಗಳನ್ನು ಮಣ್ಣುಪಾಲು ಮಾಡಿದಂತೆ ದಲಿತರ ಮೇಲೆ ಅಟ್ಟಹಾಸ ಮೆರಯಿತು. 2ನೇ ಬಾಜೀರಾಯನ ಅಧಿಕಾರದ ಅವಧಿಯಲ್ಲಿ ಸೈನ್ಯದಲ್ಲಿ ಮಹರ್ ಮತ್ತು ಮಾಂಗ್ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸದೆ ಅಪಮಾನ ಮಾಡಿದರು. ಇದರಿಂದ ಕಿಡಿಕಿಡಿಯಾದ ಮಹರ್ ಸೈನಿಕರು ಬ್ರಿಟೀಷ್ ಸೈನ್ಯದಲ್ಲಿ ಸೇರಿಕೊಂಡು 1818ರಲ್ಲಿ ನಡೆದ ಯುದ್ಧದಲ್ಲಿ 28 ಸಾವಿರದಷ್ಟು ಮರಾಠ ಪೇಶ್ವೆಗಳ ಸೈನ್ಯದ ವಿರುದ್ಧ ಮೂಲನಿವಾಸಿ ಮಹರ್ ರೆಜಿಮೆಂಟ್‌ನ 500 ಯೋಧರು ಸೆಣಸಾಡಿ ವಿಜಯ ಸಾಧಿಸಿದ ಸ್ಮರಣಾರ್ಥ ಈ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.
ಈ ಮಹರ್ ಸೈನಿಕರ ವೀರೋಚಿತ ಸ್ವಾಭಿಮಾನದ ಹೋರಾಟದ ಇತಿಹಾಸ 1927ರವರೆಗೂ ಭಾರತದಲ್ಲಿ ಮುಚ್ಚಿಹೋಗಿತ್ತು. ಅಂಬೇಡ್ಕರ್ ಲಂಡನ್‌ನಲ್ಲಿ ವ್ಯಾಸಂಗ ಮಾಡುವಾಗ ಅಲ್ಲಿನ ಗ್ರಂಥಾಲಯದಲ್ಲಿ ಅವರು ಈ ಸುದ್ದಿ ಓದಿ ಮಹಾರಾಷ್ಟ್ರಕ್ಕೆ ವಾಪಸಾದ ಕೂಡಲೇ ಈ ಸ್ಥಳಕ್ಕೆ ಭೇಟಿ ನೀಡಿ ಮಹರ್ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಅಲ್ಲಿಂದ ಆರಂಭವಾದ ವಿಜಯೋತ್ಸವ ಈ ತನಕ ಮುಂದುವರೆದು ಅಂಬೇಡ್ಕರ್ ನೀಡಿದ ಬೆಳಕಲ್ಲಿ ಲೋಕವನ್ನು ಬೆಳಗುತ್ತಿದೆ ಎಂದರು
1818ರ ಜನವರಿ 1 ರಂದು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ 500 ಮಂದಿ ಸೈನಿಕರು ಶಿರೂರಿನಿಂದ ಪುಣೆಗೆ ಆಗಮಿಸುತ್ತಾರೆ. ಆಗ 2ನೇ ಬಾಜೀರಾವ್‌ನ 28 ಸಾವಿರ ಸೈನಿಕರು ಇವರಿಗೆ ಎದುರಾಗುತ್ತಾರೆ. ಕೋರೆಗಾಂವ್ ಎಂಬ ಸ್ಥಳದಲ್ಲಿ ನಡೆದ ಈ ಯುದ್ಧ ಹೆಚ್ಚುಕಾಲ ನಡೆಯಲಿಲ್ಲ. ಇದರಲ್ಲಿ ಬ್ರಿಟೀಷರ 200 ಸೈನಿಕರು ಪೇಶ್ವೆಯ 500 ಸೈನಿಕರು ಮೃತರಾದರು. ಆಂಗ್ಲೋ ಮರಾಠ ಯುದ್ಧದ ಅಂತಿಮ ಗೆಲುವು ಬ್ರಿಟೀಷರದ್ದಾಗಿತ್ತು. ಈ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ಮಹರ್ ಸೈನಿಕರೇ ಎಂಬುದು ಗಮನಾರ್ಹ. ಮೇಲ್ಜಾತಿಯ ಪೇಶ್ವೆ ಸೇನೆಯ ವಿರುದ್ದ ಮಹರ್ ಸೇನೆಯ ಗೆಲುವು ದಲಿತರ ಹೆಮ್ಮೆಗೆ ಕಾರಣವಾಗಿದೆ. ಈ ಇತಿಹಾಸ ಬರೆದ ಬ್ರಿಟೀಷ್ ಅಧಿಕಾರಿ ಹೆನ್ರಿ ಬೇಡನ್ ಪೋವೆಲ್ ಉಲ್ಲೇಖಿಸುವಂತೆ ಮಹರರು ಬಲಿಷ್ಟ ದೇಹವುಳ್ಳವರು, ಸುಂದರಾಂಗರು, ಬುದ್ದಿವಂತರು, ಸೂಕ್ಷ್ಮಮತಿಗಳು, ಅಪಾರ ಧೈರ್ಯಶಾಲಿಗಳು ಆಗಿದ್ದಾರೆ ಎಂದು ತಿಳಿಸಿದರು.
ಮಹರರ ಸಮರ ಕೌಶಲ್ಯವನ್ನು ಗುರುತಿಸಿದ್ದ ಬ್ರಿಟೀಷರು ಗುರುತಿಸಿದ್ದಂತೆ, ಶಿವಾಜಿ ಮಹಾರಾಜರು ಕೂಡ ಗುರುತಿಸಿದ್ದರು ಎಂಬುದು ಜ್ಯೋತಿರಾವ್ ಪುಲೆ ಅವರು ಶಿವಾಜಿ ಕುರಿತು ರಚಿಸಿರುವ ಲಾವಣಿಯಲ್ಲಿ ಉಲ್ಲೇಖವಾಗಿದೆ. ಮೂಲ ನಿವಾಸಿ ದಲಿತರ ಅಚ್ಚಳಿಯದ ಚರಿತ್ರೆಯನ್ನು ಮನುವಾದಿ ಇತಿಹಾಸಕಾರರು ಕೀಳಾಗಿ ಚಿತ್ರಿಸಿರುವ ಬಗ್ಗೆ ಯುವಜನತೆ ಅರಿಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ನಮಗೂ ನಮ್ಮದೇ ಆದ ಇತಿಹಾಸ ಇದೆ ಎಂಬುದೇ ಈ ಕಾರ್ಯಕ್ರಮ ಉದ್ದೇಶವಾಗಿದೆ.
ಮಹಾರ ಜನಾಂಗ ನಮ್ಮ ಸ್ವಾಭಿಮಾನ ಹಾಗೂ ಆತ್ಮ ಗೌರವಕ್ಕೆ ನಡೆದ ಯುದ್ಧ ಗೆದ್ದ ದಿನವಾಗಿದೆ ಎಂದರು.ಹಾಗೆಯ ನಮ್ಮ ದಲಿತ ಸಮುದಾಯದ ಕಾರ್ಯಕ್ರಮಕ್ಕೆ ಶಾಸಕಿ ನಯನ ಮೋಟಮ್ಮ ಗೈರಾದ ಹಿನ್ನಲೆ ಅಸಮಾಧಾನ ಹೊರಹಾಕಿ ಮಗಳನ್ನು ನಮ್ಮ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೂಚಿಸುವಂತೆ ಮೋಟಮ್ಮ ಅವರಿಗೆ ಉದ್ದೇಶಿತವಾಗಿ ಹೇಳುತ್ತಿದ್ದೇನೆ ಎಂದರು.
ನಮ್ಮ ಸಮಸ್ಯೆಗಳಿಗೆ ಸಂಘಟನೆ ಶಿಕ್ಷಣ ಹೋರಾಟ ಮಾಡಬೇಕು ಇದು ಅಂಬೇಡ್ಕರ್ ಕನಸು ಆಗಿತ್ತು ಎಂದರು
ಈ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ ಆಚರಣೆ ಸಮಿತಿ ತಾಲೂಕು ಅಧ್ಯಕ್ಷ ಸುಂದ್ರೇಶ್ ಕನ್ನಾಪುರ, ಗೌರವ ಅಧ್ಯಕ್ಷೆ ಸಾವಿತ್ರಿ ಎಂ. ಬಿ.ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ನಟರಾಜ್ ಗೌಡ್ರು, ಚಂದ್ರೇಶ್ ಉಪಾಧ್ಯಕ್ಷ ಭೀಮಾ ಕೋರೆಗಾಂವ್ಸಮಿತಿ, DSS ಅಂಬೇಡ್ಕರ್ ಧ್ವನಿ ರಾಜ್ಯದ್ಯ ಕ್ಷೇ ವಸಂತ ಕುಮಾರಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸದಸ್ಯೆ ಆಶಾ ಸಂತೋಷ್, SDPI ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು. BSP ತಾಲೂಕು ಅಧ್ಯಕ್ಷ ಲೋಕುವಳ್ಳಿ ರಮೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು
ವರದಿ :ಪುನೀತ್ ಕಡಿದಾಳು
9483811948
