ಮೂಡಿಗೆರೆ : ಬಹುಜನ ಸಮಾಜ ಪಾರ್ಟಿ ವತಿಯಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆಯನ್ನು ಮೂಡಿಗೆರೆ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು,
ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ,ಜಾಕೀರ್ ಹುಸೇನ್ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳಲ್ಲಿ ಟಿಪ್ಪು ಸುಲ್ತಾನ್ ಒಬ್ಬರಾಗಿದ್ದು,ಬ್ರಿಟಿಷರು ಭಯ ಪಟ್ಟಿದ್ದು ಅಂಬೇಡ್ಕರ್ ಅವರ ಶಿಕ್ಷಣ ಬಿಟ್ಟರೆ ಸುಲ್ತಾನ್ ಅವರ ಖಡ್ಗಕ್ಕೆ ಮಾತ್ರ ಎಂಬುದಾಗಿ ತಿಳಿಸಿದರು.
ಜರ್ಮನ್ ನಂತಹ ವಿದೇಶಗಳ ಉಪಕರಣ ಬಳಸಿ ರಾಜ್ಯದಲ್ಲಿ ರೇಷ್ಮೆ ಕಾರ್ಖಾನೆ ಆರಂಭಿಸಿ ಆನೇಕ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ ಕೀರ್ತಿ ಟಿಪ್ಪು ಸುಲ್ತಾನ್ ಅವರಿಗೆ ಸಲ್ಲುತ್ತದೆ ಎಂದರು
ಟಿಪ್ಪು ಸುಲ್ತಾನ್ ಅವರ ವೀರಾವೇಶ, ದೇಶ ಪ್ರೇಮ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹ ಸಂಯೋಜಕರಾದ ಕೆ ಟಿ ರಾಧಾಕೃಷ್ಣ, ರಾಜ್ಯ ಕಾರ್ಯದರ್ಶಿ ಜಾಕೀರ್ ಆಲಿಕಾನ್ , ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸಂಯೋಜರಾದ ಗಂಗಾಧರ ಹಾಗೂ ಶಂಕರ್ ಬೆಟ್ಟಗೆರೆ, ಜಿಲ್ಲಾ ಉಪಾಧ್ಯಕ್ಷ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಕೆ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್ , ಅಧ್ಯಕ್ಷರು ಲೋಕವಳ್ಳಿ ರಮೇಶ್, ಕಾರ್ಯದರ್ಶಿ ಮಹೇಶ್, ಎಂ ಡಿ ಶಂಕರ್, ವಸಂತ್, ಕುಮಾರ್, ಸುರೇಶ್, ಧರ್ಮೇಶ್, ಹಮೀದ್, ವಸಂತ್, ಮಲ್ಲೇಶ್, ಸತೀಶ್, ರಾಜೇಶ್, ದೊಡ್ಡಯ್ಯ, ಸುಮಿತ್ರ , ರಾಜು, ಮುಂತಾದವರು ಭಾಗವಹಿಸಿದ್ದರು.
ವರದಿ : ಪುನೀತ್ ಕಡಿದಾಳು
9483811948
