Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಕಸಾಪ ಗೋಣಿಬೀಡು ಘಟಕದ ನೂತನ ಸಾರಥಿಯಾಗಿ ನವೀನ್ ಆನೆದಿಬ್ಬ ನೇಮಕ

ಮೂಡಿಗೆರೆ: ಕಸಾಪ ಗೋಣಿಬೀಡು ಘಟಕದ ನೂತನ ಸಾರಥಿಯಾಗಿ ನವೀನ್ ಆನೆದಿಬ್ಬ ನೇಮಕ

ಮೂಡಿಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಗೋಣಿಬೀಡು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು

ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾಲ್ಲೂಕಿನ ಗೋಣಿಬೀಡು ಹೋಬಳಿ ಜನ್ನಪುರ ಗಣಪತಿ ಪೆಂಡಾಲ್ ನಲ್ಲಿ ಇಂದು ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಾಕಿ ಶ್ರೀಮತಿ ಅನಿತಾ ಜಗದೀಪ್ ಗೌಡ ಮಾತನಾಡಿ
ಕನ್ನಡದ ಉತ್ತಮ ಕೆಲಸಗಳನ್ನು ಮಾಡುವುದರೊಂದಿಗೆ ಕೇಂದ್ರ ಸ್ಥಾನಕ್ಕೆ ಸೀಮಿತವಾಗಿತ್ತು. ಆದರೆ, ಇಂದು ಹೋಬಳಿ ಮಟ್ಟಕ್ಕೆ ಅದರ ಕಾರ್ಯಕ್ಷೇತ್ರ ವಿಸ್ತರಿಸಿದೆ ಇಂತಹ ಬೆಳವಣಿಗೆ ಸ್ವಾಗತರ್ಹ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಲಕ್ಷ್ಮಣ ಗೌಡ ಮಕ್ಕಳಿಗೆ ಅಪ್ಪ ಅಮ್ಮ ಎಂದು ಕರೆಯಲು ತಿಳಿಸಿದರು.. ಕನ್ನಡ ಕಲಿಕೆ ಹೆಚ್ಚಾಗಲಿ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮ ಮೂಡಿ ಬರಲಿ ಎಂದು ಹಾರೈಸಿದರು.. ಎಲ್ಲಾ ಕಾರ್ಯಕರ್ತರು ಸಮಾಜಕ್ಕೆ ಒಳ್ಳೇಯ ಸೇವೆ ಮಾಡುವಂತೆ ತಿಳಿಸಿದರು.

ನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಚಂದ್ರು ಒಡೆಯರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕೆಲಸದ ಜೊತೆಗೆ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕನ್ನಡ ಶ್ರೀಮಂತ ಭಾಷೆ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.

ಯುವ ಸಮೂಹ ಹೆಚ್ಚು ತಮ್ಮನ್ನು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಭಾಷೆಯ ಉಳಿವಿಗಾಗಿ ಶ್ರಮ ವಹಿಸುವಂತೆ ಕಿವಿಮಾತು ಹೇಳಿದರು.ಇಡೀ ಜಿಲ್ಲೆಗೆ ಗೋಣಿಬೀಡು ಘಟಕ ಮಾದರಿಯಾಗಲಿ ಎಂದರು

ಕನ್ನಡ ಸಾಹಿತ್ಯ ಪರಿಷತ್ ಗೋಣಿಬೀಡು ಘಟಕದ ನೂತನ ಅಧ್ಯಕ್ಷ ನವೀನ್ ಆನೆದಿಬ್ಬ ಮಾತನಾಡಿ ನನಗೆ ನೀಡಿದ ಜವಾಬ್ದಾರಿಯನ್ನು ಹಿರಿಯರ ಮಾರ್ಗದರ್ಶನದಂತೆ ಎಲ್ಲರ ಪ್ರೀತಿಗಳಿಸಿ ಕನ್ನಡ ಭಾಷೆಯ ಉಳಿವಿಗಾಗಿ ಸಮಯ ನೀಡುವುದಾಗಿ ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಗೆ ಹಲವಾರು ಸವಾಲುಗಳಿವೆ. ಸ್ಥಳೀಯ ಪ್ರಜ್ಞಾವಂತರು ಜಾಗೃತರಾಗಿ ಕನ್ನಡದ ಸೇವಕರಾಗಿ ಕಾರ್ಯನಿರ್ವಹಿಸುವುದು ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಎಂ. ಎಸ್. ನಾಗರಾಜ್ ಕನ್ನಡ ಭಾಷೆ. ಕನ್ನಡ ಸಾಹಿತ್ಯದ ಕುರಿತು. ನಾಡು ನುಡಿ ವಿಚಾರಗಳನ್ನು ಉಪನ್ಯಾಸ ಮಾಡಿದರು

ನೂತನ ಪದಾಧಿಕಾರಿಗಳಿಗೆ ಶಾಂತಕುಮಾರ್ ಪ್ರತಿಜ್ಞ ವಿಧಿ ಬೋದಿಸಿದರು

ಸಭಾ ಅಧ್ಯಕ್ಷೆ ಶ್ರೀಮತಿ ಭಾಗ್ಯ ಲಕ್ಷ್ಮಣ ಗೌಡ ಮಾತನಾಡಿ ಪ್ರಶ್ನಿಸುವರಿದ್ದಾರೆ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ..

ಸಾಹಿತ್ಯ ಎಂಬುವುದು ದೇವಾಲಯ ಇದ್ದಂತೆ ನಾವೆಲ್ಲರೂ ಭಾಷೆ ದೇವರನ್ನು ಪೂಜಿಸೋಣ ಎಂದರು.

ಇದೆ ವೇಳೆ ಅವರು ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ಮತ್ತು ಕನ್ನಡ ಬಾವುಟ ನೀಡುವುದರ ಮೂಲಕ ಗೌರವಿಸಿದರು.

ಈ ಸಂದರ್ಭದಲ್ಲಿ ನವೀನ್ ಆನೆದಿಬ್ಬ ಅವರನ್ನು ತಾಯಿ ಸರೋಜ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮವನ್ನು ಅಂಬಿಕಾ ಚಂದ್ರಶೇಖರ ಸ್ವಾಗತಿಸಿದರು. ನಿರೂಪಣೆ ಇಂಪಾ ಸವೀನ್ ನೆರವೇರಿಸಿದರು ಆಶಾ ಜಯಕುಮಾರ್ ಪ್ರಾರ್ಥನ ಗೀತೆ ಹಾಡಿದರು. ಸುಂದ್ರೇಶ್ ಹೊಯ್ಸಳಲು ವಂದನಾರ್ಪಣೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಕಾರ್ಯಕ್ರಮದ ಉಸ್ತುವಾರಿ ಸಂಚಾಲಕ ವಿ. ಪಿ. ನಾರಾಯಣ್,ಜಿಲ್ಲಾ ಸಂಘಟನ ಕಾರ್ಯದರ್ಶಿ ಬಕ್ಕಿ ಮಂಜುನಾಥ್. ಗೋಣಿಬೀಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್. ಗ್ರಾಮ ಪಂಚಾಯಿತಿ ಸದಸ್ಯರಾದ ಸ್ವಾತಿ. ಚಿನ್ನಿಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಲಕ್ಷ್ಮಿ ಪತ್ರಕರ್ತರಾದ ಪ್ರಸನ್ನ ಗೌಡಹಳ್ಳಿ. ಸುಚಿತ್ರ ಪ್ರಸನ್ನ. ಪ್ರಕಾಶ ಬಕ್ಕಿ. ಜೆ ಸಿ ಐ ಅಧ್ಯಕ್ಷ ಜಗದೀಶ್ ಗೌಡ ಹಸ್ಸನರ್,ಸೇರಿದಂತೆ ಕಾರ್ಯಕರ್ತರು ಇದ್ದರು.

ವರದಿ : ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!