Saturday, March 28, 2026
Homeಜಿಲ್ಲಾಸುದ್ದಿಮೂಡಿಗೆರೆ: ದಾರದಹಳ್ಳಿ ಗ್ರಾ.ಪಂ. ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ ನಯನಾ ಮೋಟಮ್ಮ

ಮೂಡಿಗೆರೆ: ದಾರದಹಳ್ಳಿ ಗ್ರಾ.ಪಂ. ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ ನಯನಾ ಮೋಟಮ್ಮ

ಮೂಡಿಗೆರೆ: ದಾರದಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಇಂದು ಶಾಸಕಿ ನಯನಾ ಮೋಟಮ್ಮನವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಗ್ರಾಮ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಷರೀಫ್ ಕಟ್ಟಡದ ಅಡಿಪಾಯ ಹಾಕಿ ಪೂರ್ಣಗೊಳ್ಳಲು ಅನೇಕ ಸದಸ್ಯರ ಕಾರ್ಯ ಮೆಚ್ಚುವಂತದ್ದು
ಗ್ರಾಮ ಪಂಚಾಯಿತಿಗೆ ಬರುವ ಅಲ್ಪ ಅನುದಾನದಲ್ಲಿ ದಾನಿಗಳ ಸಹಾಯದಿಂದ ಕಟ್ಟಡ ಲೋಕಾರ್ಪಣೆಗೊಂಡಿದೆ ಎಂದರು

ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿ ಮಾತನಾಡಿದ ಕ್ಷೇತ್ರದ ಜನ ನಾಯಕಿ ನಯನಾ ಮೋಟಮ್ಮ, ನಾನು ಈ ಗ್ರಾಮದ ಮೊಮ್ಮಗಳು. ನನ್ನ ತಾಯಿ ಇದೇ ಪಂಚಾಯಿತಿಯವರು. ಅಮ್ಮನ ಊರಲ್ಲಿ ನೂತನ ಕಟ್ಟಡ ಉದ್ಘಾಟಿಸಲು ತುಂಬಾ ಹೆಮ್ಮೆ ತಂದಿದೆ

ದಾರದಹಳ್ಳಿ ಭಾಗದಲ್ಲಿ ಅತಿ ಹೆಚ್ಚು ರಾಜಕಾರಿಣಿಗಳಿದ್ದು ಕಟ್ಟಡ ನಿರ್ಮಾಣಕ್ಕೆ ಇಷ್ಟು ವರ್ಷ ಅವಶ್ಯಕತೆ ಇರಲಿಲ್ಲ. ಬಹುತೇಕ ರಾಜಕಾರಣ ಬಿಟ್ಟು ಕೆಲಸ ಮಾಡಿದ್ದರೆ ಬೇಗನೆ ಕಟ್ಟಡ ಲೋಕಾರ್ಪಣೆಗೊಳ್ಳುತ್ತಿತ್ತು ಎಂಬುದಾಗಿ ಅಭಿಪ್ರಾಯ ಪಟ್ಟರು.

ಮನಸಲ್ಲಿ ದೃಢ ಸಂಕಲ್ಪ ಮಾಡಿ ಹಾಲಿ ಆಡಳಿತದಲ್ಲಿರುವ ಗ್ರಾಮ ಪಂಚಾಯಿತಿ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳು ತಿಳಿಸಿದರು ಸ್ವ ಸಹಾಯ ಸಂಘಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿದ್ದು ಮುಂದಿನ ಆಡಳಿತ ಅವಧಿಗೆ ಬರುವ ಪದಾಧಿಕಾರಿಗಳು ಮಹಿಳೆಯರನ್ನು ಗಮನದಲ್ಲಿಟ್ಟು ಸಂಜೀವಿನಿ ಕಟ್ಟಡದಲ್ಲಿ ಬೇಕಾದ ಸೂಕ್ತ ವ್ಯವಸ್ಥೆ. ಮಾಡುವಂತೆ ಸೂಚಿಸಿದರು

ಭಾಷಣದಿಂದಾಗಿ ಸಾದಿಸುವುದು ಏನು ಇಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷೇತ್ರದಲ್ಲಿ ಅನುದಾನ ನೀಡಿ ಅಭಿವೃದ್ಧಿ ಪತದಲ್ಲಿ ಸಾಗುತ್ತಿರುವುದು ತಮಗೆಲ್ಲರಿಗೂ ತಿಳಿದಿದೆ ಅಭಿವೃದ್ಧಿ ಕೆಲಸಗಳಿಂದ ಮಾತ್ರ ಹೆಸರು ಶಾಶ್ವತ ಎಂದರು

ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಗ್ರಂಥಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀ ರಂಜನ್ ಅಜಿತ್ ಕುಮಾರ್ ಅವರು, ಗ್ರಾಮ ಪಂಚಾಯಿತಿ ಕಟ್ಟಡ ಲೋಕಾರ್ಪಣೆ ಗೊಳ್ಳುತ್ತಿರುವುದು ವೈಯಕ್ತಿಕವಾಗಿ ತುಂಬಾ ಸಂತಸ ತಂದಿದೆ.

ಕ್ಷೇತ್ರದ ಜನನಾಯಕಿ ನಯನ ಮೋಟಮ್ಮ ಹಲವು ಅಭಿವೃದ್ಧಿ ಕೆಲಸ ಮಾಡುತ್ತಿದ್ದು ಕಿತ್ತಲೆಗಂಡಿ ಗ್ರಾಮದಲ್ಲಿ ನಿವೇಶನ ರಹಿತ ಬಡವರಿಗೆ ಸುಮಾರು 70 ನಿವೇಶನ ಮಾಡಿದ್ದೂ ಅನೇಕರಿಗೆ ಹಕ್ಕು ಪತ್ರ ನೀಡಿದ್ದಾರೆ ಎಂದರು ಕೆಲಸ ಮಾಡಿ ಹೆಸರು ಮಾಡಬೇಕು ಅನುದಾನ ಬರಲಿ ಬಿಡಲಿ ನಮ್ಮ ಪ್ರಯತ್ನ ಪ್ರಮುಖವಾಗಿರುತ್ತದೆ

ಈ ಹಿಂದೆ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವ ಆಡುತ್ತಿತ್ತು ನನ್ನ ಅಧಿಕಾರ ಅವಧಿಯಲ್ಲಿ ಮುಂಚಿತ ಕೆಲಸ ಮಾಡಿ ಸಾರ್ವಜನಿಕರ ಸಮಸ್ಸೆ ಬಗೆಹರಿಸುತ್ತಿದ್ದೆ ಎಂದರು

ವಸತಿ ರಹಿತ ಜನಗಳಿಗೆ ಒಂದೇ ವರ್ಷದಲ್ಲಿ 180 ಕ್ಕೂ ಹೆಚ್ಚು ಮನೆ ಕೊಡಿಸಿ ಬಡವರ ನೆಮ್ಮದಿ ಜೀವನಕ್ಕೆ ಸಾಕ್ಷಿಯಾಗಿ ಉಳಿದಿದ್ದು ಅದೇ ನಿಟ್ಟಿನಲ್ಲಿ ನಮ್ಮ ಶಾಸಕಿ ಕೂಡ ಜನಪರ ಕಾಳಜಿ ಹೊಂದಿದ್ದಾರೆ ಎಂದರು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಧಿಕಾರಿ ಶ್ರೀಮತಿ ದಮಯಂತಿ ಯೋಜನೆ ಮತ್ತು ಯೋಚನೆಗಳಿದ್ದರೆ ಎಲ್ಲಾ ಕಾರ್ಯಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕಿಯ ಯೋಚನೆ ಮತ್ತು ಯೋಜನೆ ಇಟ್ಟುಕೊಂಡು ಅನೇಕ ಪಂಚಾಯಿತಿ ಅಭಿವೃದ್ಧಿಗಳಲ್ಲಿ ಮುಂದಾಗಿದ್ದಾರೆ ಎಂದರು. ನರೇಗಾ ಯೋಜನೆ ಅಡಿಯಲ್ಲಿ ಅನೇಕ ಪಂಚಾಯಿತಿ ಕೆಲಸಗಳು ನೆರವೇರಲಿದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾರದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಜಿದ ಅವರು ನೂತನ ಕಟ್ಟಡಕ್ಕೆ ಶ್ರಮಿಸಿದ ಸಕಲರಿಗೂ ಧನ್ಯವಾದ ಅರ್ಪಿಸಿದರು. ಕಟ್ಟಡದ ನಿರ್ಮಾಣ ಆರಂಭವಾಗಿ 10 ವರ್ಷ ಕಳೆದಿದ್ದು ಹಲವು ಸಮಸ್ಯೆಗಳಿಂದ ಲೋಕಾರ್ಪಣೆಗೊಳ್ಳಲು ತಡವಾಗಿದ್ದು ಬಹುತೇಕ ನನ್ನ ಹಾಗೂ ಈಗಿನ ಸದಸ್ಯರುಗಳ ಭಾಗ್ಯ ನಮ್ಮ ಅವಧಿಯಲ್ಲಿ ಲೋಕಾರ್ಪಣೆಗೊಂಡಿದೆ ಎಂದರು. ಪುರುಷ ಸದಸ್ಯರಕಾರ್ಯ ವೈಖರಿ ಶ್ಲಾಘಸಿದರು. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೂತನ ಕಟ್ಟಡಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು. ರಾಜಕೀಯ ಪ್ರವೇಶಕ್ಕೆ ರಂಜನ್ ಅಜಿತ್ ಕುಮಾರ್ ಸಹಕಾರ ಎಂದಿಗೂ ಮರೆಯುವುದಿಲ್ಲ ಎಂಬುದಾಗಿ ತಿಳಿಸಿದರು

ಇದೇ ವೇಳೆ ಇತ್ತೀಚೆಗೆ ದೈವಧೀನರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಮೌನಾಚರಣೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಹಾಗೆ ಪಂಚಾಯಿತಿ ಮಾಜಿ ಹಾಗೂ ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೃಷಿ ಪತ್ತಿನ ವ್ಯವಸಾಯೋತ್ಪನ್ನ ಅಧ್ಯಕ್ಷ ಸಿದ್ದೇಶ್ ಕೆಸವಳಲು, ಉಪಾಧ್ಯಕ್ಷೆ ಧಾರ್ಮಿಕ ದಿನೇಶ್, ನಿರ್ದೇಶಕರಾದ ದೀಪಕ್ ಕಡಿದಾಳ್, ರಂಜಿತ್ ದಾರದಹಳ್ಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನವೀನ ಅಶ್ವಥ್, ಸದಸ್ಯರಾದ ವಿಕ್ರಂ ಗೌಡ, ಸಂಪತ್ ಬಿಳ್ಳೂರ್, ಸಾಧನ ಮಣಿಶ್, ಮಯೂರ್ ಹಾಲೂರು, ಮಂಜುನಾಥ್ ಕಡಿದಾಳು, ಮಾಜಿ ಮಂಡಲ ಪ್ರಧಾನರು ಎಂ. ಎಂ. ಲಕ್ಷ್ಮಣ ಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲತಾ ಸುಬ್ರಯಗೌಡ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಘು ಕಡಿದಾಳು ಸೇರಿದಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ :ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!