Wednesday, February 11, 2026
Homeಕ್ರೈಮ್ಮೂಡಿಗೆರೆ: ಹೊಸ ವರ್ಷ ಆಚರಣೆ: ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳ ಹದ್ದಿನ ಕಣ್ಣು

ಮೂಡಿಗೆರೆ: ಹೊಸ ವರ್ಷ ಆಚರಣೆ: ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳ ಹದ್ದಿನ ಕಣ್ಣು

ಮೂಡಿಗೆರೆ : ಹೊಸವರ್ಷಚರಣೆ ಹಿನ್ನೆಲೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಗಳಿಗೆ ಪ್ರವಾಸಿಗರು ಹೆಚ್ಚಿಗೆ ಆಗಮಿಸುತ್ತಿದ್ದು ಮಧ್ಯ ಇತರೆ ಪಾರ್ಟಿಗಳನ್ನು ಆಯೋಜಿಸಿದರೆ ದೊಟ್ಟ ಮಟ್ಟದ ಡಿಜೆ ಬಳಸಿದಲ್ಲಿ CL 5 ಪರವಾನಿಗೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಅಬಕಾರಿ ಉಪ ಅಧಿಕ್ಷಕ ಕೀರ್ತಿಕುಮಾರ್ ಟಿ.ತಿಳಿಸಿದ್ದಾರೆ.

ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಸವರ್ಷ ಆಚರಣೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‌ನಲ್ಲಿ ಮದ್ಯದ ಪಾರ್ಟಿ ಆಯೋಜಿಸಿಕೊಂಡಲ್ಲಿ ಗೋವಾ ಮತ್ತು ಹೊರರಾಜ್ಯಗಳಿಂದ ಮದ್ಯ ತೆರಿಗೆ ರಹಿತ ಮದ್ಯಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ಆಕಸ್ಮಿಕವಾಗಿ ಅಲ್ಲಿಗೆ ಬಂದಾಗ ಅಂತಹ ಮದ್ಯಗಳು ಕಂಡು ಬಂದಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಅದಕ್ಕೆ ಅವಕಾಶ ನೀಡದೆ ಕಾನೂನಿನ ನಿಯಮದ ರೀತಿಯಲ್ಲಿ ನಡೆದು ಕೊಳ್ಳುವಂತೆ ಮನವಿ ಮಾಡಿದರು.

ಹೊಸ ವರ್ಷಾಚರಣೆಯಲ್ಲಿ 100-2೦೦ ಜನ ಡಿಜೆ ಪಾರ್ಟಿಗೆ ಸೇರಿದರೆ ಒಂದು ದಿನಕ್ಕೆ 11,500 ರೂ ಕಟ್ಟಿದಲ್ಲಿ ಪರವಾನಗೆ ನೀಡುತ್ತೇವೆ. ಅದನ್ನು ಒಂದೆರಡು ದಿನ ಮುಂಚಿತವಾಗಿ ಪಡೆಯಬಹುದು ಎಂದರು. ಇತ್ತೀಚಿನ ದಿನಗಳಲ್ಲಿ ಗಾಂಜಾ , ಅಫೀಮಿನಂತಹ ಮಾದಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಹಿತಿ ನೀಡಿದ್ರು. ಮಾದಕ ವಸ್ತುಗಳು ಕಂಡು ಬಂದರೆ ನೀವು ಅವರುಗಳಿಗೆ ಏನು ಮಾಡಲು ಹೋಗಬೇಡಿ ಏಕೆಂದರೆ ಅವರು ನಿಮಗೆ ಅಪಾಯ ಮಾಡುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ನಮ್ಮ ಖಾಸಗಿ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ನಮ್ಮ ತಂಡ ಬಂದು ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ಅಲ್ಲದೇ ಹೋಂ ಸ್ಟೇ ಮತ್ತು ರೆಸಾರ್ಟ್ ಹಾಗೂ ಮಾಲೀಕರ ಹೆಸರುಗಳನ್ನು ಗೌಪ್ಯವಾಗಿರಿಸಲಾಗುವುದು ಎಂದರು.

ಇನ್ನೂ ಈ ಸುದ್ದಿಗೋಷ್ಟಿಯಲ್ಲಿ ಇನ್ಸ್ ಪೆಕ್ಟರ್ ನಾರಾಯಣ್, ಹೋಂ ಸ್ಟೇ ಮತ್ತು ರೆಸಾರ್ಟ್ ಸಂಘದ ಅಧ್ಯಕ್ಷರಾದ ಜಿ.ಎಂ. ಜಗದೀಶ್ ಗುತ್ತಿ, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಕೊಟ್ಟಿಗೆಹಾರ ಸಂಜಯ್, ಬಲಿಗೆ ಪ್ರಶಾಂತ್, ಕಾರ್ತಿಕ್ ಪಟ್ಟದೂರು, ದೀಕ್ಷಿತ್ ಚಿತ್ರಗುತ್ತಿ, ಪವಿತ್ರ ಸೇರಿದಂತೆ ಇತರೆ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!