ಮೂಡಿಗೆರೆ: ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾಗುವ ಮೂಲಕ ನ್ಯಾಯಾಧೀಶರಾಗಿ ಮೂಡಿಗೆರೆಯ ಯುವಕ ಆಯ್ಕೆಯಾಗಿದ್ದಾರೆ.
ಪಟ್ಟಣದ ಬಿಳಗುಳದ ಲಿಯೋ ಕುವೆಲ್ಲೋ ಹಾಗೂ ಅನಿತಾ ಕುವೆಲ್ಲೋ ದಂಪತಿಗಳ ಪುತ್ರರಾಗಿರುವ ಇವರು ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯಾದ ಸೆಂಟ್ ಮಾರ್ಥಾಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮಂಗಳೂರಿನಯ SDM ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುತ್ತಾರೆ

ನಿತೀನ್ ಅವರು ಪಟ್ಟಣದ ಪ್ರಖ್ಯಾತ ವಕೀಲರಾದ ಶ್ರೀ ಡಿ.ಎಸ್. ಸುಧೀರ್ ಗರಡಿಯಲ್ಲಿ ಕಲಿತು 2021 ರಿಂದ ಮೂಡಿಗೆರೆ ನ್ಯಾಯಾಲಯದಲ್ಲಿ ಸಹಾಯಕ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ನ್ಯಾಯಾಧೀಶ ಪರೀಕ್ಷೆಯನ್ನು ಶ್ರದ್ದೆ ಭಕ್ತಿಯಿಂದ ಸ್ವೀಕರಿಸಿದ ನಿತೀನ್ ಕಷ್ ಪಟ್ಟು ಉನ್ನತ ಪ್ರಯತ್ನದಿಂದಾಗಿ ಕನಸ್ಸನ್ನು ಈಡೇರಿಸಿಕೊಂಡಿದ್ದಾರೆ.
ನಿತೀನ್ ಅವರು ಈ ಸಾಧನೆ ಮೂಲಕ ತಾಲೂಕಿಗೂ, ಪೋಷಕರಿಗೂ, ಕೀರ್ತಿ ತಂದಿದ್ದು ಇವರಿಗೆ ವಕೀಲರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಶುಭಾಶಯ ತಿಳಿಸಿದ್ದಾರೆ. ರಾಜ್ಯದ್ಯಂತ ಒಟ್ಟು 83 ನ್ಯಾಯಾಧೀಶರನ್ನು ಆಯ್ಕೆ ಮಾಡಲಾಗಿದೆ.
ವರದಿ :ಪುನೀತ್ ಕಡಿದಾಳು
9483811948
