Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ಹಳ್ಳಿಯಲ್ಲಿ ನಾಟ್‌ ರೀಚಬಲ್‌, ಪಟ್ಟಣದಲ್ಲಿ ಸರ್ವರ್‌ ಡೌನ್‌ : ಈ ಸಮಸ್ಯೆಗೆ ಕೊನೆಯೆಂದು?

ಮೂಡಿಗೆರೆ: ಹಳ್ಳಿಯಲ್ಲಿ ನಾಟ್‌ ರೀಚಬಲ್‌, ಪಟ್ಟಣದಲ್ಲಿ ಸರ್ವರ್‌ ಡೌನ್‌ : ಈ ಸಮಸ್ಯೆಗೆ ಕೊನೆಯೆಂದು?

ಮೂಡಿಗೆರೆ: ಶಾಸಕರೇ ಇದನ್ನು ಗಮನಿಸಿ ಸಾರ್ವಜನಿಕ ಸಮಸ್ಯೆಗಳ ಮುಂದುವರೆದ ಭಾಗವಿದು. ನೆನಪಿದಿಯಾ ನಿಮಗೆ ಅದೊಂದು ಕಾಲವಿತ್ತು ಲ್ಯಾನ್ಡ್ ಲೈನ್ ಫೋನ್ ಟ್ರಿಣ್ ಟ್ರಿಣ್ ಅನ್ನೋ ಶಬ್ದ ಮರೆಯಾಗಿ ಇಷ್ಟ ಬಂದಂತೆ ಬದಲಿಸಿಕೊಳ್ಳೋ 5ಜಿ ನೆಟ್‌ವರ್ಕ್‌ ಕಾಲಕ್ಕೆ ಕಾಲಿಟ್ಟರು ನಮ್ಮ ಮೂಡಿಗೆರೆ ಜನತೆಗೆ ತಪ್ಪಲಿಲ್ಲ ನಾಟ್ ರೀಚಬಲ್ ಹಾಗೂ ಸರ್ವರ್ ಸಮಸ್ಸೆ

ಹೌದು .. ಹಳ್ಳಿಗಳಲ್ಲಿ ಆಲದ ಮರ ಹತ್ತಿದ್ರು ಸಿಗದ ನೆಟ್ವರ್ಕ್ ಹಾಲಿ ಇರುವ ವ್ಯವಸ್ಥೆಗಳಲ್ಲಿ ಇರುವ ಕೊರತೆಗಳನ್ನು ಸರಿಪಡಿಸುವವರು ಯಾರು? ಅಂಥಾ ಸಮಸ್ಯೆಗಳೇನು ಅಂತೀರಾ? ಹಾಗಾದರೆ ಈ ಕೆಳಗಿನ ಕೆಲವು ಘಟನೆಗಳನ್ನು ಓದಿ ನೋಡಿ ನಿಮಗೂ ಆಗಿರಲೇ ಬೇಕು ಈ ಅನುಭವ.

ಕಳೆದ ಶುಕ್ರವಾರ ಬೆಳಿಗ್ಗೆಯೇ ಮನೆಯಿಂದ ಬಂದ ನಾನು ಬ್ಯಾಂಕ್ ಒಂದರಲ್ಲಿ ಟೋಕನ್ ಪಡೆದು ಸರದಿ ಸಾಲಿನಲ್ಲಿ ಕಾಯುತ್ತಿದೆ. ಇನ್ನೇರೆಡು ಜನರದ್ದು ಮುಗಿದಿದ್ರೆ, ನಾನು ಬಂದ ಕೆಲಸ ಮುಗ್ಸಿ ನೆಮ್ಮದಿಯಾಗಿ ಮನೆಗೆ ಹೋಗ್ತಿದ್ದೆ ಅಷ್ಟ್ರಲ್ಲಿ ಅದೆಂತದೋ ಸಾರು ವಾರು (ಸರ್ವರ್ ) ಹೊಯ್ತು ಅಂದ್ರು. ತಥ್ ಇದ್ರ ಮನೆ ಕಾಯೋಗ ಮೂರು ದಿನ ದಿಂದ ಇದೇ ರಾಮಾಯಣ ಆಯ್ತಲ್ಲ ಅಂತಾರೆ ಬೈರಾಪುರ ಗ್ರಾಮದ ಹಿರಿಯರೊಬ್ಬರೂ

ಹೌದು ಕಲಿಯುಗ ಅಂದರೆ ತಪ್ಪಾಗುತ್ತೆ 5ಜಿ ಯುಗಕ್ಕೆ ಕಾಲಿಟ್ಟಿದ್ದರೂ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಅಲ್ವೇ? ಪಟ್ಟಣದಲ್ಲಿ ಇಲ್ಲದೆ ಇರೋ ನೆಟ್ವರ್ಕ, ಸರ್ವರ್ ಹಳ್ಳಿಗಳಿಗೆ ಎಲ್ಲಿ ನಮಗೆ ಬುಡ್ಡಿ ದೀಪ ದಿನಗಳಲ್ಲಿ ಜೀವನ ಚೆನ್ನಾಗಿತ್ತು ಅಂತಾರೆ ಹಳ್ಳಿ ಜನರು.

ಅಯ್ಯೋ ಸ್ವಲ್ಪ ದೂರದಲ್ಲಿ ಇರುವವರಿಗೆ ಫೋನ್ ಮಾಡಿದರೂ ನಾಟ್‌ ರೀಚೆಬಲ್, ಪೇಟೆಲಿ ಇದ್ದಾರೆ ಅಂತ ಗೊತ್ತು ತೊಂಡು ತರೋಕೆ ಹೇಳೋಣ ಅಂತ ಫೋನ್ ಮಾಡಿದ್ರೆ ಕುಯ್ ಕುಯ್. ಇಲ್ಲಾ ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದಾಗುವುದು, ಐದು ನಿಮಿಷದ ಹಿಂದೆ ಕರೆ ಮಾಡಿದವರಿಗೆ ಮರಳಿ ಕರೆ ಮಾಡಿದರೆ ಇನ್ಯಾರೋ ಮಾತನಾಡುವುದು ನಿತ್ಯದ ಸಮಸ್ಯೆಯಾಗಿ ಹೋಗಿದೆ.

ಅಬ್ಬಬ್ಬಾ ಏರ್ಟೆಲ್. BSNL. ಮತ್ತ್ತೊಂದು ಮಗದೊಂದು ಸಂಸ್ಥೆಗಳು ಹಳ್ಳಿ ಹಳ್ಳಿಯ ಮೂಲೆ ಮೂಲೆ ತಲುಪಿದ್ದೇವೆ ಎಂದು ಜಾಹೀರಾತು ಕೊಡುತ್ತಿವೆಯೇ ಹೊರತು ವಾಸ್ತವದಲ್ಲಿ ಈಗಲೂ ಹಲವೆಡೆ ಮೊಬೈಲ್‌ ಅನ್ನು ಮೆತ್ತಿಯಲ್ಲಿ ಇಡುವುದು, ಪಕಾಸಿಗೆ ಒಂದು ಮೊಳೆ ಜಡಿದು ಅದಕ್ಕೆ ತೂಗು ಹಾಕುವುದು ತಪ್ಪಿಲ್ಲ. ಅಂತಾ ಸಂಸ್ಥೆಗಳು ಒಂದು ಸತಿ ಬೈರಾಪುರ. ಸತ್ತಿಗನಹಳ್ಳಿ. ಹೊಸಕೆರೆ. ಹೇರಿಕೆ. ಮರಗುಂದ.. ಕಾಡ ಅಂಚಿನ ಗ್ರಾಮಗಳಿಗೆ ಭೇಟಿ ಕೊಟ್ರೆ ಸಾಕು ನೈಜ ಸ್ಥಿತಿ ಅರ್ಥ ಆಗುತ್ತೆ

ಅದು ಇರಲಿ ಸರ್ವರ್‌ ಡೌನ್‌ ನೋಡೋಣ.ರೇಷನ್‌ ಕಾರ್ಡ್‌ ಮಾಡಿಸಲು ಹೋದಾಗೆಲ್ಲಾ ಸರ್ವರ್‌ ಡೌನ್‌. ತಿಂಗಳಿಗೆ ನಾಲ್ಕು ಬಾರಿ ಫುಡ್‌ ಆಫೀಸಿಗೆ ಹೋಗಿಬಂದಾಯ್ತು.. ಸರ್ವರ್ ಬಂದಿಲ್ಲ ಅಂತಾರೆ. ಇದೆಂತ ಸಾವು ಮಾರಾಯ..

ಕೊರೋನ ಕಾಯಿಲೆ ಬಂತಲ್ಲ ಆಗ ಕೊಟ್ಟ ಅರ್ಜಿ ಹಂಗೆ ಇದವಂತ ಕಣ… ಇನ್ನ ನಮ್ಮ ಕಥೆ ಮುಗಿತು ಬಿಡು ಅಂತ ತಾಲೂಕು ಆಫಿಸ್ ನಲ್ಲಿ ಅವರರವರೆ ಸಮಾಧಾನ ಮಾಡಿಕೊಳ್ಳೋ ಮುಗ್ದ ಹಳ್ಳಿ ಜನರು.

ಇನ್ನ ಗ್ಯಾಸ್ ದುಡ್ಡು ಫೋನ್ ಪೆ ಮಾಡಣ ಅಂದ್ರು ನೇಟ್ವರ್ಕ್ ಇರಲ್ಲ.. ಬ್ಯಾಂಕ್ ನಲ್ಲಿ ದುಡ್ದು ಬಿಡ್ಸಿ ಕೊಡೋಣ ಅಂದ್ರೆ ಸರ್ವರ್ ಇಲ್ಲಾ ಅದೇನು ಹಾಳದ ನೆಟ್ವರ್ಕ್ ಕರ್ಮ ಅಂತ ಹಿಡಿ ಶಾಪ ಹಾಕಿ…

ನಾಳೆ ಬನ್ನಿ, ಸರ್ವರ್ ಸರಿ ಆಗಬಹುದು, ನೋಡೋಣ ಬನ್ನಿ, ಗೊತ್ತಿಲ್ಲ ಸರ್, ನಾವೇನ್ ಮಾಡೋಕೆ ಆಗುತ್ತೆ. ನಿಮಗೆ ಅರ್ಥ ಆಗಲ್ವಾ. ಅದ್ಯಾರಿಗೆ ಹೇಳ್ಕೊತೀರ ಹೇಳ್ಕೊಳಿ.. ಅನ್ನೋ ಅಧಿಕಾರಿಗಳ ಉಡಾಫೆ ಮಾತುಗಳನ್ನು ಕೇಳಿಸಿಕೊಂಡು ಬಂದ ದಾರಿ ಹಿಡಿಯೋ ಪರಿಸ್ಥಿತಿ ನಮ್ಮ ಮೂಡಿಗೆರೆ ಸಾರ್ವಜನಿಕರದ್ದು.

ಇನ್ನಾದರೂ ಶಾಸಕರು. ಅಧಿಕಾರಿಗಳು ಎಚ್ಚೆತ್ತು ಏನಾದ್ರು ಆಕ್ಷನ್ ತಗೋತಾರ ನೋಡೋಣ.

ವರದಿ :ಪುನೀತ್ ಕಡಿದಾಳ್

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!