ಮೂಡಿಗೆರೆ: ತಾಲೂಕಿನ ದಾರದಹಳ್ಳಿ ಗ್ರಾಮದ ನಿರ್ಮಾಣ ಹಂತದಲ್ಲಿರುವ ಗ್ರಾಮ ಪಂಚಾಯಿತಿ ಕಟ್ಟಡವು ಅನ್ಯ ಚಟುವಟಿಕೆಗಳ ತಾಣವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಹೌದು…ಸುಮಾರು ವರ್ಷಗಳಿಂದ ಮಂದಾಗತೀಯ ಕಾಮಗಾರಿಯಿಂದ ಪುಂಡ ಪೊರ್ಕಿ ಗಳ ಕುಡಿತದ ಅಡ್ಡ ವಾಗಿ ಪರಿವರ್ತನೆಗೊಳ್ಳುತ್ತಿದ್ದೂ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ

ಸರಿ ಸುಮಾರು ನಾಲ್ಕು ವರ್ಷ ಕಳೆದರು ಕಟ್ಟಡದ ಸಂಪೂರ್ಣ ಕಾಮಗಾರಿ ಕಾಣದೆ ಸರ್ಕಾರಿ ಕಟ್ಟಡ ಬೇರೆ ಚಟುವಟಿಕೆ ಗೆ ದಾರಿ ಮಾಡಿಕೊಟ್ಟಿದ್ದೂ ಸಾರ್ವಜನಿಕರ ಉಪಯೋಗಕ್ಕೆ ಬರಬೇಕ್ಕಿದ್ದ ಸರ್ಕಾರಿ ಕಟ್ಟಡ ಸಂಪೂರ್ಣ ಪಾಳು ಬಿದ್ದು ಪುಂಡರ ಅಡ್ಡವಾಗಿ ಬದಲಾಗಿದೆ.
ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಎದೆ ಮಟ್ಟಕ್ಕೆ ಕಳೆ ಬೆಳೆದಿದ್ದು, ಪಕ್ಕದ್ದಲ್ಲಿ ಆಸ್ಪತ್ರೆ, ಹಾಗೂ ಕಿರಿಯ ಪ್ರಾರ್ಥಮಿಕ ಶಾಲೆ ಇದ್ದು ರೋಗಿಗಳಿಗೂ ಮತ್ತು ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ, ನಿರ್ಮಾಣ ಹಂತದ ಕಟ್ಟಡದ ಸುತ್ತಲು ಬಿಯರ್ ಬಾಟಲ್, ಇಸ್ಪೀಟ್ ಕಾರ್ಡ್, ಸಿಗರೇಟ್ ತುಂಡುಗಳು ಕಂಡು ಬರುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೇತ್ತು ಕಟ್ಟಡದ ಸಂಪೂರ್ಣ ಕಾಮಗಾರಿಗೆ ಗಮನ ಹರಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ನಿರ್ಮಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ