ಮೂಡಿಗೆರೆ :ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ವತಿಯಿಂದ ರಾಜ್ಯೋತ್ಸವ ಮತ್ತು ನಾಡಗೀತೆ ಶತ ಸಂಭ್ರಚರಣೆ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ತಾಲ್ಲೂಕು ಘಟಕ ಹಾಗೂ ಲೇಖಕಿಯರ ಬಳಗ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆ ಶತ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಪಟ್ಟಣದ ಅಡ್ಯಾಂತಯ ರಂಗ ಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ ತಾಯಿಯ ಮಮತೆ ಮತ್ತು ವಾತ್ಸಲ್ಯ ಮಕ್ಕಳಿಗೆ ಎಷ್ಟು ಕೊಡುಗೆ ನೀಡುತ್ತಾಳೆ ಅಷ್ಟೇ ಭಾಷೆಗೂ ತಾಯಿಯ ಪಾತ್ರ ದೊಡ್ಡದು ಎಂದರು.
ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೂ ಕೆಲ ಸಂಘಟನೆಗಳಲ್ಲಿ ಪುರುಷರು ರೋಷ ವೇಷದಲ್ಲಿ ಮುಂದಿದ್ದರೆ ಮಹಿಳೆಯರು ಸಹನೆ, ಪ್ರೀತಿ, ಮಮತೆ ನೀಡಿ ಸಂಘಟನೆಗಳನ್ನು ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ವಿದ್ಯಾರ್ಥಿಗಳು ಬಾವಿಯಲ್ಲಿ ಇರೋ ಕಪ್ಪೆಯಾಗದೆ ಸಾಮಾಜಿಕ ಜ್ಞಾನವನ್ನು ಅರಿತುಕೊಳ್ಳಬೇಕು ಎಂದರು.
ವಿವಿಧ ರಾಷ್ಟ ರಾಜ್ಯಗಳಲ್ಲಿ ಅವರವರ ಭಾಷೆ ಮಾತೃ ಭಾಷೆ ಬಿಡದೆ ಹೇಗೆ ಅವರ ಭಾಷೆಗೆ ಗೌರವಿಸುತ್ತಾರೆ ಅದಕ್ಕಿಂತ ಹೆಚ್ಚು ನಮ್ಮ ಮಾತೃ ಭಾಷೆಗೆ ಇತಿಹಾಸವಿದ್ದು ವ್ಯವಹಾರ ರಾಜಕೀಯ ವಿವಿಧ ಕ್ಷೇತ್ರಗಳಲ್ಲಿ ಪರಭಾಷೆ ಅವಶ್ಯಕತೆ ಇದೆ ಆದರೆ ನಮ್ಮ ಮಾತೃ ಭಾಷೆಯ ಬಗ್ಗೆ ಸದಾ ಗೌರವ ಹೆಮ್ಮೆ ನಮ್ಮಲ್ಲಿರಬೇಕು ಎಂದರು
ಯಾವುದೇ ಪ್ರದೇಶಗಳಿಗೆ ಭೇಟಿ ಕೊಟ್ಟರು ನಮ್ಮ ಅಸ್ತಿತ್ವ ಮರೆಯಬಾರದು. ಯಾವುದೇ ಭಯ ಮುಜುಗರಕ್ಕೆ ಒಳಗಾಗದೆ ನಮ್ಮ ಸಂಸ್ಕೃತಿ ಭಾಷೆಯ ಚಾಪು ಮೂಡಿಸುವ ಮನಃಸ್ಥಿತಿ ಯುವ ಪೀಳಿಗೆ ಬೆಳೆಸಿಕೊಂಡು ನಮ್ಮ ತನವನ್ನು ಕಾಪಾಡಿಕೊಳ್ಳಬೇಕು ಎಂದರು
ಯಾವುದೇ ಪ್ರದೇಶಗಳಿಗೆ ಹೋದರು ಅಮ್ಮ ಮಾಡಿದ ಮಲೆನಾಡು ತಿನಿಸುಗಳಾದ ಕಡುಬು ಏಡಿ, ಶಾವಿಗೆ ರೊಟ್ಟಿ ಸವಿದ ನೆನಪು ಶಾಶ್ವತ ಹೇಗೋ ಆದೇ ರೀತಿ ಕನ್ನಡ ಭಾಷೆಯನ್ನು ಸವಿಯುತ್ತ ಸದಾ ಅಮ್ಮನ ಭಾಷೆ ನೆನಪಲ್ಲಿಟ್ಟುಕೊಂಡು ಬದುಕಿನಲ್ಲಿ ಸದಾ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿ ಉಪನ್ಯಾಸ ನೀಡಿದ ರಾಜ್ಯ ಶಾಸ್ತ್ರ ಉಪನ್ಯಾಸಕಿ ಸವಿತ ರಮೇಶ್ ಕನ್ನಡ ಭಾಷೆಯನ್ನು ಹೃದಯದ ಆಳಕ್ಕೆ ಇಳಿಸಿಕೊಂಡು ನಮ್ಮ ಮಾತೃ ಭಾಷೆಯನ್ನು ಬಳಸಬೇಕು ಎಂದರು.
ಹರಿದು ಹಂಚಿಹೋದ ಕನ್ನಡ ನಾಡು ಇಂದು ಕೂಡ ಕೆಲ ಪ್ರದೇಶಗಳಿಗೆ ಭೇಟಿ ಕೊಟ್ಟಾಗ ಕರ್ನಾಟಕ ಅಥವಾ ಬೇರೆ ರಾಜ್ಯದಲ್ಲಿದ್ದವ ಎಂಬ ಆಶ್ಚರ್ಯ ಉಂಟಾಗುತ್ತದೆ.
ಬೆಂಗಳೂರು. ಬೆಳಗಾವಿ. ಕಾಸರಗೋಡು ಭಾಗಗಳಲ್ಲಿ ಬೇರೆ ಭಾಷೆಯ ಜನ ಪ್ರಭಾಲ್ಯ ಮೆರೆಯಲು ಪ್ರಯತ್ನ ಪಡುತ್ತಿರುವುವದು ಅಘಾತಕಾರಿ ವಿಷಯವಾಗಿದೆ
ಕಾವೇರಿ ಇಂದ ಗೋದಾವರಿಗೆ ವಿಸ್ತರಣೆಗೊಂಡ ನಮ್ಮ ನಾಡಿನ ಇವತ್ತಿನ ಸ್ಥಿತಿಯಿಂದ ಕಾಪಾಡಬೇಕಾದರೆ ಚಿಂತಿಸಬೇಕಾಗಿದೆ, ನಮ್ಮ ಭಾಷೆ ಸಂಸ್ಕೃತಿ ಉಳಿಸಿ ಬೆಳಸಬೇಕಾದ ಕೆಲಸ ಮಾಡಬೇಕೆ ವಿನಃ ಪರ ಭಾಷೆಗೆ ನಾವು ಬಳಸುವುದರಿಂದಲ್ಲ ಎಂದರು
ಕನ್ನಡ ಭಾಷೆಗೆ ಅನೇಕರು ಕೊಡುಗೆ ನೀಡಿದ್ದಾರೆ ಅಂತಹ ಮಹನೀಯರ ಮಾರ್ಗದರ್ಶನ ಪಾಲಿಸಿ ಕನ್ನಡ ಭಾಷೆಗೆ ಗೌರವಿಸಿ ಭಾಷೆ ಬಳಸೋಣ ನವೆಂಬರ್ ಕನ್ನಡಿಗರಾಗದೆ ಸದಾ ಕಾಲ ಕನ್ನಡಿಗರಾಗೋಣ ಎಂದರು
ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರಮೇಶ್ ಹಳೇಕೋಟೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ. ಕೆ. ಲಕ್ಷ್ಮಣಗೌಡ, ಚಿಕ್ಕಮಗಳೂರು ಕ.ಸಾ.ಪ.ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಮಂಚೇಗೌಡ, ಕ. ಸಾ. ಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರವಿರಾಜ್ ಅರಸ್, ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೇಮ ಪುಣ್ಯಾಮೂರ್ತಿ ಸೇರಿದಂತೆ ವಿವಿಧ ಶಾಲಾ ಮಕ್ಕಳು, ಶಿಕ್ಷಕರು, ಕನ್ನಡಭಿಮಾನಿಗಳು ಉಪಸ್ಥಿತರಿದ್ದರು
ವರದಿ :ಪುನೀತ್ ಕಡಿದಾಳು
9483811948
