ಮೂಡಿಗೆರೆ: ಗೋಣಿಬೀಡು ವ್ಯಾಪ್ತಿಯ ಹೊಸಪುರ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆ ಶಾರದಾ ಪೂಜೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಗೆ ಧ್ವಜದ ಕಟ್ಟೆಯನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿ ಮಾತನಾಡಿದ ಜೆಸಿ ಜನ್ನಾಪುರ ಸಮೃದ್ಧಿಯ ಅಧ್ಯಕ್ಷ ಪ್ರಹ್ಲಾದ್ ಮಾತನಾಡಿ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಸಹಕಾರ ನೀಡಿ ಶಾಲೆಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದರು.
ವಾಲ್ಮೀಕಿರಂತ ಶ್ರೇಷ್ಠ ಹೆಸರಿನ ವ್ಯಕ್ತಿಯ ಶಾಲೆಗೆ ನಾವು ಬಂದಿದ್ದು ನಮ್ಮ ಸಂಸ್ಥೆಯ ಪುಣ್ಯ, ವಾಲ್ಮೀಕಿಯವರ ತತ್ವ ಆದರ್ಶಗಳನ್ನು ಮುಂದಿನ ಪೀಳಿಗೆಯಾದ ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು
ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಕೊರತೆಗಳನ್ನು ಕಂಡುಕೊಂಡು ಸಾಮಾಜಿಕ ಸೇವೆ ದೃಷ್ಟಿಯಲ್ಲಿ ಸಂಘ ಸಂಸ್ಥೆಗಳು ಹೆಚ್ಚು ಶಾಲೆಗಳಿಗೆ ಅವಶ್ಯಕ ವಸ್ತುಗಳನ್ನು ಕೊಡುಗೆಯಾಗಿ ನೀಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜೆಸಿ ಕಾರ್ಯದರ್ಶಿ ನಿಕ್ಷೇಪ, ಸ್ಥಾಪಕ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಚರಣ್ ಗೌಡ ಮರಬೈಲು ಸೇರಿದಂತೆ ವೀರೇಂದ್ರ ಪಟೇಲ್, ನಿತಿನ್, ಪ್ರವೀಣ್, ಶ್ಯಾಮ್ ಉಗ್ಗೇಹಳ್ಳಿ, ವಿನಯ್, ಕೀರ್ತನ್, ವಿಶ್ವಾಸ ಗೌಡ ಮರಬೈಲು, ಲಿಖಿತ್ ಹಾಜರಿದ್ದರು
