ಮೂಡಿಗೆರೆ: ದಲಿತರ ಭೂಮಿ -ವಸತಿ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೂಡಿಗೆರೆ ಘಟಕದ ವತಿಯಿಂದ ತಾಲೂಕು ಕಚೇರಿಯಲ್ಲಿ ಮುಂಭಾಗ ಪ್ರತಿಭಟನೆ ನಡೆಸಿದರು. ಆ ನಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ದಂಡಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಕೂಡ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಯೋಜಕ ಸಂತೋಷ್ ಮಾತನಾಡಿ, ಭೂಮಿ ಒಂದು ಉತ್ಪಾದನ ಸಾಧನವಾಗಿದೆ. ಬ್ರಾಹ್ಮಣ ಧರ್ಮ ದಲಿತರನ್ನು ವಂಚಿಸುತ್ತ ಬಂದಿದ್ದು ಬಾಬಾ ಸಾಹೇಬ ಅಂಬೇಡ್ಕರ್ ಕಟ್ಟು ನಿಟ್ಟಿನಲ್ಲಿ ಸಂವಿಧಾನದಿಂದಾಗಿ ನಾವುಗಳು ಈ ಸಮಾಜದಲ್ಲಿ ಉಸಿರಾಡುತ್ತಿದ್ದೇವೆ. ಹಕ್ಕುಪತ್ರ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದ್ದು ನಮಗೆ ಹೆಂಡ ಬೇಡ ಭೂಮಿ ಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಹಾಗೆ ತಾಲೂಕಿನ ಭೂ ಗಳ್ಳರಿಗೆ ಕಠಿಣ ಕ್ರಮ ಕೈಗೊಳ್ಳಬೇಕು, ಅಟ್ರಾಸಿಟಿ ಕಾಯ್ದೆ ಅಡಿ ಕಠಿಣ ಕ್ರಮ ಜರುಗಿಸಿ ದೌರ್ಜನ್ಯ ಆಗದಂತೆ ಕಾಪಾಡಬೇಕು ಎಂದು ಆಗ್ರಹಿಸಿದರು.
ಆ ನಂತರ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಎಸ್ ಡಿ ಪಿ ಐ. ಮುಖಂಡ ನಾಗೇಶ್ ಅವರು, ಮೂಲಭೂತ ಸೌಕರ್ಯಗಳನ್ನು ಪಡೆಯಲು ಎಲ್ಲದ್ದಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಬಡವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಿರುವುದು ನಿಜಕ್ಕೂ ಬೇಸರ ತಂದಿದೆ. ಭೂಮಿಯನ್ನು ಲೀಜ್ʼಗೆ ನೀಡುತ್ತಿದ್ದೂ ಅದನ್ನ ಬಿಟ್ಟು ಬಡವರಿಗೆ ನೀಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ಹಾಗೆ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ದಂಡಧಿಕಾರಿ ರಾಜಶೇಖರ್ ಮೂರ್ತಿ ಅವರು, ಇದನ್ನ ನಾನು ಸರ್ಕಾರದ ಗಮನಕ್ಕೆ ತಂದು ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು
ಈ ಸಂಧರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್ ಲೋಕುವಳ್ಳಿ, ಮಹಿಳಾ ಸಂಘಟನೆಯ ಮೇರಿ,
ಪ್ರಮೀಳಾ,ಕಾವ್ಯ,ಸ್ಪಂದನ,ಸುಮಿತ್ರ.ಎಸ್. ಡಿ. ಪಿ. ಐ.ಸಂಘಟನೆ ಕಾರ್ಯಕರ್ತ ಖಾಲಿದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.