ಮೂಡಿಗೆರೆ: ತಾಲೂಕಿನ ತತ್ಕೋಳ ಗ್ರಾಮಕ್ಕೆ ಹೋಗುವ ರಸ್ತೆಯ ಅಗಲೀಕರಣಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ..
ಹೌದು .. ಪಟ್ಟಣದ ಬಸ್ ಸ್ಟಾಂಡ್ ಪಕ್ಕದ ರಸ್ತೆಯಾದ ತತ್ಕೋಳ ಗ್ರಾಮಕ್ಕೆ ಸಾಗುವ ರಸ್ತೆಯು ಏಕಮುಖ ಸಂಚಾರಕ್ಕೆ ಸೀಮಿತವಾದಂತೆ ಕಾಣುತ್ತಿದ್ದೂ, ಹೆಚ್ಚಿನ ಟ್ರಾಫಿಕ್ ಇದ್ದ ದಿನಗಳಲ್ಲಿ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಅದಲ್ಲದೆ ಈ ರಸ್ತೆಯಲ್ಲಿ ಶಾಲಾ ವಾಹನಗಳು, ಸ್ಥಳೀಯರು, ಗ್ರಾಮಸ್ಥರು ಹೆಚ್ಚು ತಿರುಗಾಡುತ್ತಾರೆ. ರಸ್ತೆಯಲ್ಲಿ ಖಾಸಗಿ ಶಾಲಾ ಮಕ್ಕಳು ಪ್ರತಿ ದಿನ ನಡೆದುಕೊಂಡು ಬರುವಾಗ ಭಯ ಭೀತರಾಗಿ ಓಡಾಡುತ್ತಿದ್ದೂ ಇದು ಮಕ್ಕಳಿಗೆ ಕಿರಿ ಕಿರಿ ಉಂಟು ಮಾಡಿದೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಗಮನಿಸಿ ಈ ರಸ್ತೆ ಯನ್ನು ಅಗಲೀಕರಸಿ ವಾಹನ ಸವಾರರಿಗೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕ ವಲಯ ಒತ್ತಾಯಿಸಿದೆ.
.