ಮೂಡಿಗೆರೆ: ಕಡಿದಾಳು ಗ್ರಾಮದಲ್ಲಿ ಬೀದಿ ದೀಪ ಅಳವಡಿಕೆ ವಿಳಂಬವಾದ ಹಿನ್ನೆಲೆ ಗ್ರಾಮದ ಯುವಕ ಪುನೀತ್ ಕಡಿದಾಳ್ ಗ್ರಾ.ಪಂ. ಸದಸ್ಯರ ರಾಜೀನಾಮೆಗೆ ಅಗ್ರಹಿಸಿದ್ದು ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ವರದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಎಚ್ಚೆತ್ತು ಅಧಿಕಾರಿಗಳ ಜೊತೆ ಸೇರಿ ಇಂದು ಬೀದಿ ದೀಪಗಳನ್ನು ಅಳವಡಿಸಿದ್ದಾರೆ.
ಈ ಕುರಿತು ಅಜಿತ್ ಗೌಡ ಮಾತನಾಡಿ ಗ್ರಾಮದಲ್ಲಿ ಬೀದಿ ದೀಪಗಳ ಜೊತೆಗೆ ಹಲವು ಸಮಸ್ಯೆಗಳಿದ್ದು ಪಬ್ಲಿಕ್ ಇಂಪ್ಯಾಕ್ಟ್ ಸಾಮಾಜಿಕ ಸಮಸ್ಸೆಗಳ ಬಗ್ಗೆ ಹೆಚ್ಚಿನ ವರದಿ ಮಾಡುತ್ತ ಬಂದಿದೆ ಹಾಗಾಗಿ ಇಂದು ಗ್ರಾಮದ ರಸ್ತೆ ಹಾಗೂ ಬೀದಿ ದೀಪಗಳಿಗೆ ಮುಕ್ತಿ ಸಿಕ್ಕಿದೆ ಎಂದರು.
ಕಡಿದಾಳು ಗ್ರಾಮಕ್ಕೆ ಬೀದಿ ದೀಪದ ಕೊರತೆ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ವರದಿ ಪ್ರಸಾರ ಮಾಡಲಾಗಿತ್ತು.