ಚಿಕ್ಕಮಗಳೂರು: ಸಾರ್ವಜನಿಕ ಹಿಂದೂ ಮಹಾ ಸಭಾ ವೇದಿಕೆಯ್ಲಲಿ ಶಾಸಕಿ ನಯನಾ ಮೋಟಮ್ಮ ನವರ ಭಾಷಣ ಸ್ವಾಗತರ್ಹ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಆರ್ಯ ಪಟೇಲ್ ಹೇಳಿದರು.

ಈ ಕುರಿತು ಪಬ್ಲಿಕ್ ಇಂಪಾಕ್ಟ್ ಗೆ ಜೊತೆ ಮಾತನಾಡಿದ ಅವರು, ನಯನಾ ಅವರ ಭಾಷಣದ ಪರ ವಿರೋಧ ವ್ಯಕ್ತವಾಗಿದ್ದು ಇವರ ಭಾಷಣದಲ್ಲಿ ಯಾವುದೇ ತಪ್ಪಿಲ್ಲ ಕೆಲವರು ಅನಗತ್ಯವಾಗಿ ಮಾತಾಡುತ್ತಿರುವುದನ್ನು ಖಂಡಿಸುತ್ತೇನೆ. ಭಾಷಣದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಅದಲ್ಲದೆ ಈ ಕುರಿತು ಸ್ಪಷ್ಟತೆ ನೀಡಿದ್ದಾರೆ. ಆದರೂ ಕೆಲವು ತಿಳುವಳಿಕೆ ಇಲ್ಲದ ವ್ಯಕ್ತಿಗಳು ಸುಖಾಸುಮ್ಮನೆ ಆರೋಪಿಸುತ್ತಿದ್ದೂ ಇಂತಹ ಆರೋಪ ಗಳು ಸರಿ ಅಲ್ಲ ಅನಗತ್ಯ ಚರ್ಚೆಗಳು ಕೂಡಲೇ ನಿಲ್ಲಿಸಬೇಕು ಇಲ್ಲವಾದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಂದು ಎಚ್ಚರಿಸಿದರು.
ಹಾಗೆ ಜನತೆಯ ಹಿತ ಕಾಪಾಡುವುದು ಇವರ ಮೊದಲ ಆದ್ಯತೆ. ಕೆಲ ಕಿಡಿಗೇಡಿಗಳು ನಯನಾ ಅವರ ಹೆಸರನ್ನು ಹಾಳು ಮಾಡುವ ಹಗಲು ಕನಸು ಕಾಣುತ್ತಿದ್ದೂ ನಿಜಕ್ಕೂ ಹಾಸ್ಯಸ್ಪದ ಎಂದರು. ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಸಮಿತಿಯ ಕಾರ್ಯಧ್ಯಕ್ಷೆ ಜವಾಬ್ದಾರಿ ಹೊತ್ತಿರುವ ಶಾಸಕಿ ನಯನ ಅವರು ಒಬ್ಬ ಹಿಂದುವಾಗಿ ಸಭೆಯಲ್ಲಿ ಪಾಲ್ಗೊಂಡಿದ್ದು ತಪ್ಪೇನು? ಎಂದು ಪ್ರಶ್ನಿಸಿದರು. ರಾಜಕೀಯಕ್ಕೂ ಧರ್ಮಕ್ಕೂ ವ್ಯತ್ಯಾಸವಿದೆ ಕೆಲವರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ತದನಂತರ ಶಾಸಕಿ ಅವರ ಏಳಿಗೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದ ಕೆಲ ಕಿಡಿಗೇಡಿಗಳು ಮನಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕಿ ಅವರ ಬಗ್ಗೆ ಬಿಂಬಿಸುತ್ತಿದ್ದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾಷಣದ ಕುರಿತು ಆಶ್ಚರ್ಯ ಪಡಬೇಕಾಗಿದ್ದು ಏನು ಇಲ್ಲಾ ಓರ್ವ ದೈವ ಭಕ್ತೆಯಾಗಿ ತನ್ನ ಧರ್ಮದ ಬಗ್ಗೆ ವಿವರಾತ್ಮಕವಾಗಿ ತಿಳಿಸಿದ್ದಾರೆ. ಇಡೀ ಹಿಂದೂ ಸಮಾಜ ಹೆಮ್ಮೆ ಪಡುವ ವಿಚಾರ ಎಂದರು. ರಾಜಕೀಯನೇ ಬೇರೆ ಧರ್ಮನೆ ಬೇರೆ ಒಂದೇ ತಕ್ಕಡಿಯಲ್ಲಿ ತೂಗುವುದು ತಪ್ಪು ಎಂದು ಗುಡುಗಿದರು.
ಗೆಲುವಿನ ಬಳಿಕ ಯಾವುದೇ ಪಕ್ಷದ ಕಾರ್ಯಕರ್ತ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಾಗ ನೈಜ ಶಾಸಕಿಯಾಗಿ ಪ್ರೀತಿಯಿಂದ ಆಲಿಸಿ,ಗೌರವಿಸಿ ಎಲ್ಲರ ಕಷ್ಟಗಳಿಗೂ ಸ್ಪಂದಿಸುತ್ತಿದ್ದು ದ್ವೇಷದ ರಾಜಕಾರಣ ಖಂಡಿತ ಇಂದಿನವರೆಗೂ ಮಾಡಿಲ್ಲ ಎಂದರು. ವ್ಯಕ್ತಿ ಬಗ್ಗೆ ಅರಿತು ಮಾತಾಡುವುದು ಸೂಕ್ತ ಹಾಗೆ ಮೂಡಿಗೆರೆ ಅಭಿವೃದ್ಧಿ ದೃಷ್ಟಿಯಿಂದ ಆನೇಕ ಯೋಜನೆಗಳನ್ನುಕಾರ್ಯರೂಪಕ್ಕೆ ತಂದು ಮೂಡಿಗೆರೆ ಬದಲಾವಣೆಗೆ ಶ್ರಮಿಸುತ್ತಿರುವುದನ್ನು ಮಾತ್ರ ನಾವುಗಳು ಗಮನಿಸಬೇಕು ಎಂದರು.