ಮೂಡಿಗೆರೆ: ತಾಲೂಕಿನ ಮರಬೈಲು ಗ್ರಾಮದ ಸುರೇಶ್ ಗೌಡ ಅವರ ಮನೆಗೆ ಸಾಗುವ ರಸ್ತೆಯು ಸಂಪೂರ್ಣ ಕೆಸರುಗದ್ದೆಯಾಗಿದ್ದು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ.
ಹಾಗೆ ಗ್ರಾಮಸ್ತ ಮಧು ರಾಮ್ ಪ್ರಸಾದ್ ಗೌಡ ಮಾತನಾಡಿ, ಜನಪ್ರತಿನಿದಿಗಳು ಚುನಾವಣೆ ಸಂಧರ್ಭದಲ್ಲಿ ಮಾತ್ರ ಮತಗಳಿಗೆ ಪೊಳ್ಳು ಭರವಸೆ ನೀಡುತ್ತಾ ಬಂದಿದ್ದು ಚುನಾವಣೆ ಮುಗಿದ ನಂತರ ಸಮಸ್ಸೆಗಳ ಬಗ್ಗೆ ಕಿಂಚಿತ್ತೂ ಯೋಚಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಅದೇ ರೀತಿ ಈ ರಸ್ತೆಯಲ್ಲಿ ಈಜಾಡಿಕೊಂಡು ಮನೆಗೆ ತಲುಪುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಹಲವು ಬಾರಿ ಕಾಂಕ್ರಿಟ್ ರಸ್ತೆಗೆ ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೂ ತಂದಿದ್ದು ಉಪಯೋಗವಾಗಿಲ್ಲ. ಈ ರಸ್ತೆಯು ಹಲವು ಮನೆಗಳಿಗೆ ಹಾದು ಹೋಗುವ ರಸ್ತೆಯಾಗಿದ್ದು, ಮಳೆ ಗಾಲದಲ್ಲಿ ತಿರುಗಾಡಲು ಯೋಗ್ಯವಿಲ್ಲದೇ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು
ಈ ಕೂಡಲೇ ಸಂಬಂಧ ಪಟ್ಟ ಚುನಾಯಿತಾ ಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ಥಿಗೊಳಿಸುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ