ಮೂಡಿಗೆರೆ: ಜೆಸಿಐ (JCI) ಪದಗ್ರಹಣ ಸಮಾರಂಭವು ಜೆಸಿಐ ಸಂಘಟನೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರದ ಸಾಂಪ್ರದಾಯಿಕ ಕಾರ್ಯಕ್ರಮವಾಗಿದ್ದು . ಇದರಲ್ಲಿ ಹಳೆಯ ಅಧ್ಯಕ್ಷರು ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುತ್ತಾರೆ, ಪ್ರತಿಜ್ಞಾ ವಿಧಿ ಬೋಧನೆ ಮತ್ತು ವಾರ್ಷಿಕ ಯೋಜನೆಗಳ ಅನಾವರಣ ನಡೆಯುತ್ತದೆ. ಇಂತಹ ಕಾರ್ಯಕ್ರಮವು ರಿಜಿಯನ್ ಎ ಏರಿಯಾ ಎ ಗೋಣಿಬೀಡು ಸಂಸ್ಥೆಯ ಚಿರುಶ್ರೀ ತಂಡದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜನ್ನಾಪುರ ಗವಿಕಲ್ ಕ್ಲಬ್ ನಲ್ಲಿ ನಡೆಯಿತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಆರ್, ಪಿ, ಪಿ, ಭರತ್ ಏನ್ ಆಚಾರ್ಯ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶಕ್ಕೆ ಜೆಸಿಐ ಸಂಸ್ಥೆ ನಿರಂತರ ವೇದಿಕೆ ಕಲ್ಪಿಸಿದೆ ಎಂದು ಹೇಳಿದರು.
ಜನ್ನಾಪುರದ ಗವಿಕಲ್ ಕ್ಲಬ್ ಸಭಾಂಗಣದಲ್ಲಿ ನಡೆದ ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿಗೆ ಪೂರಕವಾದ ಕಾರ್ಯವನ್ನು ಜೆಸಿಐ ಸದಸ್ಯರು ನಿರ್ವಹಿಸಬೇಕು. ಶುದ್ಧ ಗಾಳಿ, ನೀರು ಕಲುಷಿತಗೊಳ್ಳದಂತೆ ಜಾಗೃತ ವಹಿಸಬೇಕು ಎಂದರು.

ಜೆಸಿಐ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದ್ದು ಈ ಮಟ್ಟಕ್ಕೆ ಪ್ರತಿ ಸದಸ್ಯರ ಶ್ರಮ ಮೆಚ್ಚುವಂತದ್ದು ಎಂದರು. ಈ ಭಾಗದಲ್ಲಿ ತೋರಿರುವ ಪ್ರೀತಿ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದರು. ಮತ್ತಷ್ಟು ವರ್ಷಗಳು ಯಶಸ್ಸಿನಿಂದ ಈ ಘಟಕ ನಡೆಯಲಿ ಎಂದು ಹಾರೈಸಿದರು
ಜೆಸಿಐ ಸಂಸ್ಥೆಗೆ ಕಟ್ಟುವ ಹಣಕ್ಕೆ ಸಂಸ್ಥೆಯು ವೇದಿಕೆ ಕಲ್ಪಿಸಿಕೊಡುತ್ತದೆ ಆದನ್ನು ನೀವು ಅಚ್ಚುಕಟ್ಟಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು
ನೂತನ ಅಧ್ಯಕ್ಷರಿಗೆ ಪಿ ಆರ್ ಪಿ ನೀಡುವುದರ ಮೂಲಕ ಶುಭ ಹಾರೈಸಿದರು
ವಲಯ-14ರ ಉಪಾಧ್ಯಕ್ಷ ಹಾಗೂ 2025 ಅಧ್ಯಕ್ಷರಾದ ಜಗತ್ ಗೌಡ ಮಾತನಾಡಿ, ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ,ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಸತ್ಕಾರ್ಯಗಳನ್ನು ರೂಪಿಸುವುದು ಸಂಸ್ಥೆಯ ಮುಖ್ಯ ಗುರಿ. ಉತ್ತಮ ನಾಯಕತ್ವಗುಣ ಬೆಳೆಸಿಕೊಳ್ಳಲು ಜೆಸಿಐ ಸಂಸ್ಥೆ ಪೂರಕವಾಗಿದೆ ಎಂದರು.ಹಾಗೆಯೇ ತಮ್ಮ ಜವಾಬ್ದಾರಿ ಸ್ಥಾನದಲ್ಲಿ ತಮ್ಮ ಕಾರ್ಯ ವೈಖರಿಗಳ ಬಗ್ಗೆ ತಿಳಿಸಿದರು.
ನೂತನ ಅಧ್ಯಕ್ಷ ಸಂತೋಷ್ ಮಾತನಾಡಿ, `ಧನಾತ್ಮಕವಾದ ದೃಷ್ಟಿಕೋನದಿಂದ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತೇವೆ. ಮನಸ್ಸು ಸ್ವಚ್ಛವಾಗಿದ್ದರೆ ಸತ್ಕಾರ್ಯ ನಿರ್ವಹಿಸಲು ಉತ್ತಮ ಚಿಂತನೆ ಪರಿಮೂಡಲು ಸಾಧ್ಯ’ ಎಂದರು. ಜೆಸಿಐ ವಾಣಿ ಯನ್ನು ನೇತ್ರಾವತಿ ನುಡಿದರು.
ಕಾರ್ಯಕ್ರಮದಲ್ಲಿ ಜೆಸಿಐ ಸ್ಥಾಪಕ ಅಧ್ಯಕ್ಷ ಮೋಹನ್ ರಾಜಣ್ಣ , ಜೆಸಿಐ ನಿಕಟ ಪೂರ್ವ ಅಧ್ಯಕ್ಷರು ಹಾಗೂ ವಕೀಲರಾದ ಆದರ್ಶ್ ಜಿ ಹೊಸಳ್ಳಿ, ಜೆಸಿಐ ಸಂಸ್ಥೆಯ 2026 ರ ನಿಯೋಜಿತ ಕಾರ್ಯದರ್ಶಿ ದಯಾನಂದ್ ಜೆಸಿಐ ವಿವಿಧ ಭಾಗದ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.
ವರದಿ:ಪುನೀತ್ ಕಡಿದಾಳು
9483811948
