ಮೂಡಿಗೆರೆ :ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಹಾಗೂ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮವನ್ನು ಸವಿತಾ ಸಮಾಜ ಸಂಘಟನೆಯ ತಾಲೂಕು ಘಟಕದ ವತಿಯಿಂದ ಆಚರಿಸಲಾಯಿತು
ಕಾರ್ಯಕ್ರಮ ವನ್ನು ಸವಿತ ಸಮಾಜ ಸಂಘಟನೆಯ ಜಿಲ್ಲಾ ಅಧ್ಯಕ್ಷ ನಾರಾಯಣ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸವಿತಾ ಸಮಾಜದ ಆರಾಧ್ಯ ದೈವ ಆಗಿರುವ ಸವಿತಾ ಮಹರ್ಷಿಗಳು ಸಮಾಜದ ಮೂಲ ಪುರುಷರಾಗಿದ್ದಾರೆ ತಿಳಿಸಿದರು.
ರಾಜ್ಯ ಸರ್ಕಾರ ಸವಿತಾ ಸಮಾಜದವರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿ ತಾಲ್ಲೂಕಿಗೆ 5 ರಿಂದ 10 ಜನರಿಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ಸಾಲ ನೀಡುತ್ತಿದ್ದು ಅರ್ಹರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಸವಿತಾ ಎಂದರೆ ಬೆಳಕು ಅಥವಾ ಜ್ಞಾನ ಎಂದರ್ಥ. ಸವಿತಾ ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳು ಪರಶಿವನ ಬಲಗಣ್ಣಿನಿಂದ ಜನಿಸಿದವರಾಗಿದ್ದು ಸೂರ್ಯವಂಶದ ಕುಲದೈವರಾಗಿದ್ದಾರೆ. ಅಪಾರ ಜ್ಞಾನ ಹೊಂದಿದ್ದ ಇವರು ಸಾಮವೇದವನ್ನು ರಚಿಸಿದ್ದು, ಸಂಗೀತದ ಪ್ರತೀಕವಾಗಿದ್ದಾರೆ ಎನ್ನಬಹುದು. ಇವರ ಪುತ್ರಿ ಗಾಯತ್ರಿ ದೇವಿ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.
ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ ಎಂಬುದಾಗಿ ತಿಳಿಸಿದರು. ಸಮಸ್ತ ಸಮುದಾಯಕ್ಕೂ ಮತ್ತು ಸಾರ್ವಜನಿಕರಿಗೂ ಸತ್ಯ ನಾರಾಯಣ ಪೂಜೆಯಿಂದ ಶುಭವಾಗಲಿ ಎಂದು ಹಾರೈಸಿದರು
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಮಹೇಶ್,ಕಾರ್ಯದರ್ಶಿ ಆನಂದ್, ಸಹ ಕಾರ್ಯದರ್ಶಿ ಪ್ರಸನ್ನ ಬಿಳ್ಳೂರ್,ಗಿರೀಶ್ ಛತ್ರಮೈದಾನ ಸೇರಿದಂತೆ ಸವಿತಾ ಸಮಾಜ ಸಂಘಟನೆಯ ವಿವಿಧ ಭಾಗಗಳ ಅಧ್ಯಕ್ಷರು ಉಪಾಧ್ಯಕ್ಷರು. ಸದಸ್ಯರುಗಳು ಪಾಲ್ಗೊಂಡಿದ್ದರು
ವರದಿ :ಪುನೀತ್ ಕಡಿದಾಳು
9483811948
