Wednesday, February 11, 2026
Homeಜಿಲ್ಲಾಸುದ್ದಿಮೂಡಿಗೆರೆ: ನಿಸ್ವಾರ್ಥವಾದ ಸೇವೆಗಳಿಂದ ಸಮಾಜದ ಏಳಿಗೆ ಸಾಧ್ಯ : ಸೂರಜ್ ಉಮಾಪತಿ ಗೌಡ

ಮೂಡಿಗೆರೆ: ನಿಸ್ವಾರ್ಥವಾದ ಸೇವೆಗಳಿಂದ ಸಮಾಜದ ಏಳಿಗೆ ಸಾಧ್ಯ : ಸೂರಜ್ ಉಮಾಪತಿ ಗೌಡ

ಮೂಡಿಗೆರೆ: ದಾರದಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಪಂಚಾಯಿತಿ ಕಚೇರಿಯಲ್ಲಿ ದಾನಿಗಳಿಗೆ ಗೌರವ ಸಮರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇತ್ತೀಚೆಗೆ ಲೋಕಾರ್ಪಣೆಗೊಂಡ ದಾರದಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನೆ ಅದ್ದೂರಿಯಾಗಿ ನಡೆದಿತ್ತು.ಇದರ ಬೆನ್ನಲ್ಲೇ ಪಂಚಾಯಿತಿಗೆ ನೂತನ ಕಚೇರಿಯ ಅಧ್ಯಕ್ಷ ಉಪಾಧ್ಯಕ್ಷರ ಸದಸ್ಯರ ಮೆಜು ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ಮಾಜಿ ಜೆಡಿಎಸ್ ಪಕ್ಷದ ಉಪಾಧ್ಯಕ್ಷರು. ಕಾಫಿ ಬೆಳೆಗಾರರು ಬಡವರ ಬಂದು ದಿ.ಡಿ.ಆರ್.ಉಮಾಪತಿ ಗೌಡ ಅವರ ಹೆಸರಿನಲ್ಲಿ ಪುತ್ರ ಸೂರಜ್ ಉಮಾಪತಿ ಗೌಡ ಪಂಚಾಯಿತಿ ಕೊಡುಗೆಯಾಗಿ ನೀಡಿ ಮಾತನಾಡಿದ ಅವರು ದಾನ ಮತ್ತು ಸೇವೆಗಳಿಗೆ
ವಿಶೇಷ ಫಲವಿದೆ ಮತ್ತು ಅದು ಶಾಶ್ವತವಾದ ಧನ್ಯತೆಯನ್ನು ನೀಡುತ್ತದೆ, ನಿಸ್ವಾರ್ಥ ಸೇವೆಗಳಿಂದ ಸಮಾಜದ ಸುಧಾರಣೆ ಸಾಧ್ಯ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಸಂಪತ್ ಗೌಡ ಬಿಳ್ಳೂರು ಮಾತನಾಡಿ ನನ್ನ ರಾಜಕೀಯ ಗುರುಗಳು ಆದ ಉಮಣ್ಣ ಅವರ ಹೆಸರಿನಲ್ಲಿ ಮಗ ಸೂರಜ್ ಸಮಾಜ ಸೇವೆಗೆ ಇಳಿದಿರುವುದು ಹೆಮ್ಮೆಯ ವಿಚಾರ. ತಂದೆಯಂತೆ ರಾಜಕೀಯ ಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಹಾಗೆಯೇ ಉಮಾಪತಿ ಅವರು ಆ ಕಷ್ಟ ಕಾಲದಲ್ಲಿಯೂ ಇಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸಿದವರು. ಅವರಂತೆ ದಾನಿಗಳಿಂದ ಅದೆಷ್ಟೋ ಸಾರ್ವಜನಿಕ ಸ್ವತ್ತುಗಳನ್ನು ಕಾಪಾಡಿಕೊಂಡು ನಾವು ಮುಂದೆ ಬಂದಿರುವುದಾಗಿ ತಿಳಿಸಿದರು

ಧ್ವಜದ ಕಟ್ಟೆ ಕೊಡುಗೆಯಾಗಿ ನೀಡಿ ಉದ್ಘಾಟಿಸಿ ಮಾತನಾಡಿದ ರಂಜಿತ್ ಗೌಡ ದಾರದಹಳ್ಳಿ ಒಂದು ಕೈ ತಟ್ಟಿದರೆ ಚಪ್ಪಾಳೆ ಬಾರದು ಅಂತೆಯೇ ಹನಿ ಹನಿ ಸೇರಿದಾಗ ಮಾತ್ರ ಸಮುದ್ರವಾಗಲು ಸಾಧ್ಯ. ಇದು ಚಿಕ್ಕ ಕಾಣಿಕೆ ಅಷ್ಟೇ.
ಅಚ್ಚುಕಟ್ಟಾಗಿ ಉಳಿಸಿ ಬೆಳೆಸಿಕೊಂಡು ಹೋಗುವಂತೆ ತಿಳಿಸಿದರು.

ಕಾಫಿ ಬೆಳೆಗಾರರದ ಡಿ.ಆರ್, ರಘುಪತಿ ಗೌಡ ಮಾತನಾಡಿ ಉದಾರ ಮನದ ಕೊಡುಗೆ ಈ ದಿನಕ್ಕೆ ಸಾಕ್ಷಿಯಾಗಿದೆ. ಈ ಭವ್ಯ ಕಟ್ಟಡವನ್ನು ದಾನಿಗಳು ಮತ್ತಷ್ಟು ಸಾಕಾರಗೊಳಿಸಲಿ ಸಹೋದರನನ್ನು ನೆನೆದು ಭಾವುಕರಾದರು

ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರಾದ ರಮೇಶ್ ಗೌಡ, ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಷರೀಫ್,ಗ್ರಾ. ಪಂ. ಅಧ್ಯಕ್ಷೆ ಶಬೀದಾ, ಉಪಾಧ್ಯಕ್ಷೆ ನವೀನಾ ಅಶ್ವಥ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದೇಶ್ ಕೆಸವಳಲು, ಗ್ರಾಮ ಪಂಚಾಯಿತಿ ಸದಸ್ಯರಾದ ವಿಕ್ರಂ ಗೌಡ, ಸಾಧನ ಮಣೀಶ್, ರಘು ಮಗ್ಗಲಮಕ್ಕಿ ಮಂಜುನಾಥ್ ಕಡಿದಾಳು, ಸುನಿತಾ, ಗ್ರಂಥಾಲಯ ಮೇಲ್ವಿಚಾರಕಿ ಸುರಭಿ ಪ್ರದೀಪ್ ಗೌಡಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!