Monday, March 16, 2026
Homeಜಿಲ್ಲಾಸುದ್ದಿಮೂಡಿಗೆರೆ: ಮಾನಸಿಕ ಶಾಂತಿಗೆ ದೇಹ ಸದೃಢತೆಗೆ & ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಎಂ.ಕೆ.ಪ್ರಾಣೇಶ್

ಮೂಡಿಗೆರೆ: ಮಾನಸಿಕ ಶಾಂತಿಗೆ ದೇಹ ಸದೃಢತೆಗೆ & ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಎಂ.ಕೆ.ಪ್ರಾಣೇಶ್

ಮೂಡಿಗೆರೆ: ಇಂದಿನ ದಿನಗಳಲ್ಲಿ ಮಾನಸಿಕ ಶಾಂತಿ ಮತ್ತು ದೇಹ ಸದೃಢವಾಗಿರಲು ಆರೋಗ್ಯವಾಗಿರಲು ಕ್ರೀಡೆ ಸಹಕಾರಿ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.

ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಮೂಡಿಗೆರೆ ಕರ್ತವ್ಯ ನಿರತ ಪತ್ರಕರ್ತರ ಸಂಘವು ರಾಜಕೀಯ ಪಕ್ಷಗಳು, ಹಾಗೂ ವಿವಿಧ ಇಲಾಖೆಗಳ ನಡುವೆ ಹಮ್ಮಿಕೊಳ್ಳಗಿದ್ದ ಕ್ರೀಡಾಕೂಟವನ್ನು ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೇ ನೀಡಿ ಮಾತನಾಡಿದ ಅವರು. ದಿನದ 24 ಗಂಟೆಗಳ ಕಾಲವು ಸುದ್ದಿಯ ಭರದಲ್ಲೇ ಮುಳುಗಿರುವ ಪತ್ರಕರ್ತರು ವರ್ಷದಲ್ಲಿ ಒಂದು ದಿನ ರಾಜಕೀಯ ಪಕ್ಷಗಳು ಹಾಗೂ ವಿವಿಧ ಇಲಾಖೆಗಳೊಂದಿಗೆ ಕ್ರೀಕೆಟ್ ಪಂದ್ಯಾವಳಿ ಹಮ್ಮಿಕೊಂಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಬರಿ ಸುದ್ದಿಯನ್ನೇ ಹುಡುಕುತ್ತಾ ದಿನ ತೆಗೆಯುವ ಪತ್ರಕರ್ತರಿಗೆ ಮಾನಸಿಕ ಹಾಗೂ ನೆಮ್ಮದಿಗೆ ಕ್ರೀಡಾಕೂಟಗಳು ಅತ್ಯವಶ್ಯಕವಾಗಿದೆ ಎಂದು ತಿಳಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳಾದ ಸುಷ್ಮಾ ವಿಬಾ.ವಿಜಯಕುಮಾರ್, ಕ್ಷೇತ್ರಧ್ಯಕ್ಷ ಗಜೇಂದ್ರ, ದೀಪಕ್ ದೊಡ್ಡಯ್ಯ,ಪರೀಕ್ಷಿತ್ ಜಾವಳಿ, ಉಪಸ್ಥಿತರಿದ್ದರು,
ಪತ್ರಕರ್ತರ ಸಂಘ, ಬಿಜೆಪಿ,ಕಾಂಗ್ರೆಸ್, ಜೆಡಿಎಸ್, ಅರಣ್ಯ ಇಲಾಖೆ ಮತ್ತು ನೌಕರರ ಸಂಘ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಬಿಜೆಪಿ ತಂಡದ ದರ್ಶನ್ ಬೆಸ್ಟ್ ಬ್ಯಾಟ್ ಮ್ಯಾನ್, ಬಿಜೆಪಿ ಭರತ್ ಮ್ಯಾನ್ ಆಫ್ ದಿ ಸೀರಿಶ್, ಮತ್ತು ಮ್ಯಾನ್ ಆಫ್ ದಿ ಮ್ಯಾಚ್, ಅರಣ್ಯ ಇಲಾಖೆ ತಂಡದಿಂದ ಪ್ರವೀಣ್, ಬೆಸ್ಟ್ ಬೌಲರ್, ನೌಕರರ ಸಂಘದ ನಟರಾಜ್ ಮ್ಯಾನ್ ಆಫ್ ದಿ ಮ್ಯಾಚ್. ಪ್ರಶಸ್ತಿ ಪಡೆದರು.
ಬಿಜೆಪಿ ಪ್ರಥಮ ಸ್ಥಾನಗೊಳಿಸಿ ಟ್ರೋಪಿಯನ್ನು ತಮ್ಮದಾಗಿಸಿಕೊಂಡರೇ, ಜೆಡಿಎಸ್ ದ್ವಿತೀಯ ಸ್ಥಾನಗಳಿಸಿ. ತೃತೀಯ ಸ್ಥಾನವನ್ನ ಅರಣ್ಯ ಇಲಾಖೆ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿತು.

ಸಮರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜೆ.ಎಸ್.ರಘು, ಬಿಜೆಪಿ ಕ್ಷೇತ್ರಾಧ್ಯಕ್ಷ ಗಜೇಂದ್ರ, ಕಾಂಗ್ರೆಸ್ ಮುಖಂಡ ಮಂಚೇಗೌಡ,ಜೆಡಿಎಸ್‌ನ ಮಂಜುನಾಥ್, ಲೋಹಿತ್, ಪ್ರಹ್ಲಾದ್, ಮಾಕೋನಹಳ್ಳಿ, ಮಹಂತಿನ ಮಠದ ಗುರುಗಳಾದ ಸಂಗಮೇಶ್, ಅರಣ್ಯ ಇಲಾಖೆಯ ರಂಜಿತ್, ಅನಿಲ್ ಗುರುದೇವ್, ಪ್ರಸನ್ನ, ಪತ್ರಕರ್ತ ಸಂಘದ ಕಾರ್ಯ ದರ್ಶಿ ಪ್ರಕಾಶ್ ಬಕ್ಕಿ, ಅತ್ತಿಗೆರೆ ಸಂತೋಷ್, ಸಂಘದ ಸದಸ್ಯರುಗಳಾದ, ಅಮರನಾಥ್, ಪ್ರವೀಣ್, ಪ್ರಸನ್ನ ಗೌಡಹಳ್ಳಿ, ನಯನ ತಳವಾರ, ಉದಯಶಂಕರ್, ಪುನಿತ್, ಪ್ರಸನ್ನ, ಉದಯಶಂಕರ್, ಆನಂದ, ಶಿವಕಾಶಿ, ತನು, ಅನಿಲ್ ಮೆಂತರೋ, ಉಮಾಶಂಕರ್, ಗಣೇಶ್ ಮಗ್ಗಲಮಕ್ಕಿ, ಪುನೀತ್ ಕಡಿದಾಳು,ಸೋಮಶೇಖರ್, ಶ್ರೀಮತಿ ಶಾರದಾ ಶೇಖರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!