ಮೂಡಿಗೆರೆ: ಪಟ್ಟಣದ ನಳಂದ ಶಾಲೆಯ ವಿದ್ಯಾರ್ಥಿನಿ ಪ್ರೇರಣಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಅಸುನಿಗಿರುತ್ತಾರೆ.
ಮೃತ ವಿದ್ಯಾರ್ಥಿನಿ ಪ್ರೇರಣಾ ಹೆಸಗಲ್ ಗ್ರಾಮದ ರವಿ ಹಾಗೂ ಪಲ್ಲವಿ ದಂಪತಿ ಪುತ್ರಿ. ವಿದ್ಯಾರ್ಥಿನಿ ಅಗಲಿಕೆ ಕುಟುಂಬಸ್ಥರಿಗೆ ತುಂಬಲಾಗದ ನಷ್ಟ, ಭಗವಂತ ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದೆ ನಳಂದ ಶಾಲಾ ಆಡಳಿತ ಮಂಡಳಿ.
ಈ ಸಂದರ್ಭದಲ್ಲಿ ಮುಖ್ಯೋಪಧಾಯಿನಿ ಶ್ರೀಮತಿ ಡಾಲಿ, ಶಾಲಾ ನಿರ್ದೇಶಕರು ಸಾವಿತ್ರಿ, ಗಣೇಶ್ ಸೇರಿದಂತೆ ಶಿಕ್ಷಕ ವೃಂದ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.