ಮೂಡಿಗೆರೆ: ತಾಲೂಕಿನ ಕೆಲ ಗ್ರಾಮದ ಶಾಲೆಯಲ್ಲಿ ಇಂದು ಹಸಿರು ಫೌಂಡೇಷನ್ ವತಿಯಿಂದ ವನಮಹೋತ್ಸವದ ಭಾಗವಾಗಿ ವಾರ್ಷಿಕ ಸರಾಸರಿ 1 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲಾಯಿತು.

ಹೌದು .. ಇಂದು ವನಮಹೋತ್ಸವದ ಭಾಗವಾಗಿ ಮೂಡಿಗೆರೆ ತಾಲೂಕು ಕಸಬಾ ಹೋಬಳಿಯ
ಘಟ್ಟದಹಳ್ಳಿ ಶಾಲೆ ,ಮಾಕೋನಹಳ್ಳಿ ಪ್ರೌಢಶಾಲೆ, ಮಾಕೋನಹಳ್ಳಿ ಪ್ರೈಮರಿ ಶಾಲೆ , ನಂದೀಪುರ ಶಾಲೆ
ಗೌರೀಕೆರೆ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.

ಹಾಗೆ ಹಸಿರು ಫೌಂಡೇಷನ್ ಅಧ್ಯಕ್ಷರಾದ ರತನ್ ಊರುಬಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ವನಮಹೋತ್ಸವದ ಭಾಗವಾಗಿ ನಾವು ಶಾಲೆಯಲ್ಲಿ ಗಿಡಗಳನ್ನ ನೆಟ್ಟಿದ್ದೇವೆ, ಪ್ರಕೃತಿ ಹಸಿರನ್ನು ಕಾಪಾಡಬೇಕೆ, ಇದರಿಂದ ಒಳ್ಳೆಯ ಗಾಳಿ ಸಿಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಸನ್ನಕುಮಾರ್ , ಉಪಾಧ್ಯಕ್ಷರಾದ ರಕ್ಷಿತಾ ನಾಗೇಶ್, ಕೆಡಿಪಿ ಸದಸ್ಯರು ಹಾಗೂ ಕೃಷಿ ಪತ್ತಿನ ಅಧ್ಯಕ್ಷರಾದ ಅಶ್ವಥ್ ಕಾರ್ಬೈಲ್ , ಅರಣ್ಯ ಇಲಾಖೆ ಶಿವಶಂಕರ್ , ಶಾಲಾ ಮುಖ್ಯ ಶಿಕ್ಷರಾದ ಹರೀಶ್, ಮಮತಾ,ಗ್ರಾಮಸ್ಥರುಗಳಾದ ವೆಂಕಟೇಶ್ ಘಟ್ಟದಹಳ್ಳಿ, ಸತೀಶ್ ರವರು ,ಧರ್ಮೇಶ ಗೌರಿಕೆರೆ ಉಪಸ್ಥಿತರಿದ್ದರು.

ಹಾಘೆ ನಂದೀಪುರ ಶಾಲೆಯ ಮುಖ್ಯ ಶಿಕ್ಷರರಾದ ತಸ್ಲೀಮ್ ಬೇಗಂ, ಗೌರಿಕೆರೆ ಶಾಲಾ ಮುಖ್ಯ ಶಿಕ್ಷಕರಾದ ರಾಜು ,ಘಟ್ಟದಹಳ್ಳಿ ಮುಖ್ಯ ಶಿಕ್ಷಕರಾದ ಆಲಿಶ , ಮೂಡಸಸಿ ಶಾಲೆ ಮುಖ್ಯ ಶಿಕ್ಷಕರಾದ ವೀಣಾ ಹಾಗೂ ಊರಿನ ಗ್ರಾಮಸ್ಥರು ಸೇರಿ ಹಲವರು ಇದ್ದರು.

ಅದೇ ರೀತಿ ಹಸಿರು ಫೌಂಡೇಷನ್ ಉಪಾಧ್ಯಕ್ಷರಾದ ವಿನುಪ್ರಸಾದ್ ಹೆಗ್ಗುಡ್ಲು, ಫೀಲ್ಡ್ ಕೋರ್ಡಿನೆಟರ್ ಅದೀಪ್ ಊರುಬಗೆ, ಶೋಧನ್ ಹೊಸಕೇರೆ , ಸುಮಂತ್ ಸತ್ತಿಗನಹಳ್ಳಿ ಹಾಜರಿದ್ದರು.
