ಮೂಡಿಗೆರೆ: ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದೆ, ರೈತರು ಬೆಳೆದ ಬೆಳೆ ನಾಶವಾಗುತ್ತಿದೆ, ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ, ಇದು ಇಂದು ನಿನ್ನೆಯ ಸಮಸ್ಯೆಯಲ್ಲ.ಈ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ.
ಹೌದು .. ಮೂಡಿಗೆರೆ ತಾಲೂಕಿನ ಗೋಣಿಬೀಡು ಸುತ್ತಮುತ್ತ ಪ್ರದೇಶದಲ್ಲಿ ಕಾಡಾನೆ ಭೀಮನ ಗಾಂಭೀರ್ಯ ನಡಿಗೆ ಅಲ್ಲಿನ ಸ್ಥಳೀಯರಿಗೆ ಮತ್ತಷ್ಟು ಆತಂಕ ಹೆಚ್ಚಿಸಿದೆ ಅಂದ್ರೆ ತಪ್ಪಾಗಲಾರದು.
ಕಾಡಿನ ದಾರಿಯಲ್ಲಿ ತನ್ನದೇ ದಾರಿಯಲ್ಲಿ ಸಾಗುತ್ತಿದ್ದು ಅಡ್ಡ ಸಿಕ್ಕ ಬೇಲಿಗಳನ್ನೆಲ್ಲಾ ಪುಡಿ ಮಾಡಿ ತನ್ನ ಹಿಂಡಿನೊಂದಿಗೆ ಈ ಭಾಗದಲ್ಲಿ ಬೀಡು ಬಿಟ್ಟಿದ್ದು ಇದರಿಂದ ಜನರು ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ.
ಒಂದು ಕಡೆ ಅರಣ್ಯ ಇಲಾಕೆ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ನಿಯಂತ್ರಿಸುತ್ತಿದ್ದರು ಇನ್ನೊಂದು ಕಡೆ ಭೀಮಾ ಮತ್ತು ಅವರ ಗ್ಯಾಂಗ್ ಇನ್ನೊಂದು ಕಡೆ ಡೋಟ್ ಕೇರ್ ಎನ್ನುತ್ತಾ ಕಾಫಿ ತೋಟಗಳನ್ನು ನುಗ್ಗುತ್ತಾ ಇವೆ. ಕಾಡಾನೆಗಳನ್ನ ನೋಡಿ ಜನರು ಎದ್ನೋ ಬಿದ್ನೋ ಅಂತಾ ಓಡುತ್ತಾ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಶೃಂಗೇರಿ ಕ್ಷೇತ್ರಕ್ಕೆ ಕಾಡಾನೆಗಳ ಕಾಟ ಆಗಿದ್ದು ಇದೀಗ ಮೂಡಿಗೆರೆಯಲ್ಲಿ ಕಾಡಾನೆಗಳ ಕಾಟ ಶುರುವಾಗಿದ್ದು ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
