ಮೂಡಿಗೆರೆ: ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ಎಲ್ಲಾರನ್ನು ಸಮಾನವಾಗಿ ಕಾಣಬೇಕು. ಬೂಕರ್ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಮಹಾನ್ ಸಾಧನೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ರಾಜ್ಯದಿಂದ ಬಾನು ಮುಸ್ತಾಕ್ ಅವರು ‘ದೊಡ್ಡ ಸಾಧನೆ ಮಾಡಿದ್ದಾರೆ. ದಸರವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡಿದ್ರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಹಾಗೆ ಇದೀಗ ಡೀಮ್ಡ್ ಪ್ರದೇಶವನ್ನು ಪರಿಷ್ಕರಿಸಿ, ಡೀಮ್ಡ್ 3 ಮಾಡಲು ಮುಂದಾಗಿರುವುದು ಸ್ವಾಗತಾರ್ಹ, ಈ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಿ, 10 ತಲೆಮಾರಿಗೆ ಆಗುವಷ್ಟು ಕೃಷಿ ಹಾಗೂ ನಿವೇಶನಕ್ಕೆ ಜಾಗ ಕಾಯ್ದಿರಿಸಬೇಕೆಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.
ಈ ಹಿಂದೆ ಡೀಮ್ಡ್ ಮಾಡಿದ ಪ್ರದೇಶದಲ್ಲಿ ಕಾಡು ಇರಲಿಲ್ಲ. ಅಲ್ಲದೇ ಕಂದಾಯ ಇಲಾಖೆ ಗಮನಕ್ಕೆ ಬಾರದಂತೆ ಕಂದಾಯ ಭೂಮಿಯಲ್ಲಿ ಗಿಡಗಳನ್ನು ನೆಟ್ಟು ಡೀಮ್ಡ್ ಹೆಸರಿನಲ್ಲಿ ಅರಣ್ಯ ಇಲಾಖೆ ಭೂಮಿ ಆಕ್ರಮಿಸಿಕೊಂಡಿದೆ. ಡೀಮ್ಡ್ 1ಕ್ಕಿಂದ ಡೀಮ್ಡ್ ೨ರಲ್ಲಿ ಕೃಷಿ ಭೂಮಿ ಹಾಗೂ ನಿವೇಶನಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಈಗ ಸುಪ್ರಿಂ ಕೋರ್ಟ್ ಡೀಮ್ಡ್ ಪ್ರದೇಶ ಪರಿಶೀಲಿಸಲು ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಇದೀಗ ಡೀಮ್ಡ್ ೩ ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ 10 ತಲೆಮಾರಿಗಾಗುವಷ್ಟು ಭೂಮಿ ಮೀಸಲಿರಿಸಬೇಕೆಂದು ಆಗ್ರಹಿಸಿದರು.
