ಮೂಡಿಗೆರೆ: ಮಲೆನಾಡಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧ ಮರಗಳನ್ನು ಕತ್ತರಿಸಿ ಸಾಗಿಸುತ್ತಿದ್ದ ಕಳ್ಳರ ಮೇಲೆ ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆ ನಡೆದಿದೆ.
ಹೌದು.. ಬುಧವಾರ ರಾತ್ರಿ 8 ಗಂಟೆ ವೇಳೆ ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಅರಣ್ಯಾಧಿಕಾರಿ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ ಸುಜುಕಿ ಕಂಪನಿಯ ಮೋಟಾರ್ ಬೈಕ್ KA-18-ED-5486 ರನ್ನು ಬೆನ್ನಟ್ಟಿ ತಡೆದು ಪರಿಶೀಲನೆ ನಡೆಸಲಾಗಿದ್ದು ಅಕ್ರಮ ಶ್ರೀಗಂಧ ಸಾಗಿಸುತ್ತಿದ್ದು ಪತ್ತೆಯಾದವು.
ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾoಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಾಗೆ ಪ್ರತಿನಿಧಿ ಪತ್ರಿಕೆ ವರದಿಗಾರ ಎಂಬುದಾಗಿ ನಂಬಿಸಿದ್ದ ಆರೋಪಿ ಮಾನ್ಸೂರ್ ಕರ್ತವ್ಯ ನಿರತ ಪತ್ರಕರ್ತ ಸಂಘದಲ್ಲಿ ಸಹ ಸದಸ್ಯನ್ನಾಗಿದ್ದು ಇಂತಹ ವ್ಯಕ್ತಿ ಪತ್ರಿಕೆ ಗೆ ಸೂಕ್ತ ನಲ್ಲ ಎಂದು ಪತ್ರಿಕ ಸಂಘಟನೆಯಿಂದ ಈತನನ್ನು ಉಚ್ಛಾಟನೆ ಮಾಡಲಾಗಿದೆ
