ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಗುಂಪಿನ ಓಡಾಟ ಕಂಡು ಬಂದಿದ್ದು ಭುವನೇಶ್ವರಿ ಕಾಡಾನೆಗಳ ಗುಂಪು ಕಾರ್ಬೈಲ್ ಅವಿನಾಶ್ ಅವರ ತೋಟದಲ್ಲಿ ಕಂಡು ಬಂದಿದೆ. ಕಾರ್ಬೈಲ್, ಮೂಡಸಸಿ, ಪುರ, ಗಬ್ಬಳ್ಳಿ, ಕನ್ನಾಪುರ, ಸಂಗಮಪುರ, ನಂದೀಪುರ, ಕೋಲುಗೋಡು, ಇಂದುವಳ್ಳಿ, ಬಾರದಹಳ್ಳಿ, ಮಾಕೋನಹಳ್ಳಿ, ಕಡೇಮಕ್ಕಲ್ , ಮಾಲಹಳ್ಳಿ, ಬಸ್ಕಲ್, ಈ ಗ್ರಾಮದ ಸುತ್ತ ಇರುವ ಗ್ರಾಮಸ್ಥರು ಹಾಗೂ ರಾಥ್ರಿ ವೇಳೆ ಗೆಂಡಳ್ಳಿ – ಮೂಡಿಗೆರೆ ಗ್ರಾಮವಾಗಿ ಸಂಚರಿಸುವ ವಾಹನ ಸವಾರರು ಬಃಳ ಎಚ್ಚರಿಕೆಯಿಂದ ಇರಬೇಕಾಗಿ ಈ ಮೂಲಕ ತಿಳಿಸಲಾಗಿರುತ್ತದೆ.
ಅಲ್ಲದೇ ರಾತ್ರಿ ವೇಳೆ ಯಾರೂ ಕೂಡ ಮನೆಯಿಂದ ಹೊರಗಡೆ ಬರಬಾರದು ಹಾಗೂ ಎಚ್ಚರಿಕೆಯಿಂದ ಇರಬೇಕಾಗಿ ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಮತ್ತೇರಡು ಆನೆಗಳು ಜೇನುಬೈಲು ಕಡೆಯಿಂದ ಸಂಚರಿಸುತ್ತಿದ್ದು ಹೊಸಮನೆ, ಜನ್ನಾ[ಪುರ, ಚಿನ್ನಿಗಾ ಕಾಲೋನಿ, ಮದ್ರೆಮನೆ, ಮುತ್ತಿಗೆಪುರ, ವಾಟೆಹಳ್ಳಿ, ನಿಡುಗೋಡು, ಹೊಯ್ಸಳಲು, ಮಣ್ಣಿಕೆರೆ, ಈ ಗ್ರಾಂದ ಸುತ್ತಮುತ್ತ ಬರುವ ಸಾಧ್ಯತೆ ಇದೆ. ಈ ಗ್ರಾಮಸ ಸುತ್ತ ಇರುವ ಗ್ರಾಮಸ್ಥರು ಹಾಗೂ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಇರಬೇಕಾಗಿ ಈ ಮೂಲಕ ಕೋರಲಾಗಿದೆ.
