Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ವಿಶ್ವಕರ್ಮ ಯೋಜನೆ ಮೋದಿಜಿ ಕನಸು: ಎಂ.ಕೆ ಪ್ರಾಣೇಶ್

ಮೂಡಿಗೆರೆ: ವಿಶ್ವಕರ್ಮ ಯೋಜನೆ ಮೋದಿಜಿ ಕನಸು: ಎಂ.ಕೆ ಪ್ರಾಣೇಶ್


ಮೂಡಿಗೆರೆ: ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಜನಸಮಾನ್ಯರ ಅಭಿವೃದ್ಧಿಗೆ ಉನ್ನತ ಸೌಲಭ್ಯ ನೀಡುತ್ತಿರುವುದು ದೇಶದ ಹೆಮ್ಮೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ತಿಳಿಸಿದರು

ಅವರು ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕೇಂದ್ರದ ಸರ್ಕಾರದ ಸಹಯೋಗದಲ್ಲಿ ಇಲ್ಲಿನ ಅಂಚೆ ಕಚೇರಿಯಲ್ಲಿ ನಡೆದ ಫಲಾನುಭವಿಗಳಿಗೆ ರೂಲ್ಸ್ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿ. ನಿರುದ್ಯೋಗ ಹೋಗಲಾಡಿಸಿ ಯುವಜನತೆಗೆ ಉದ್ಯೋಗ ನೀಡಿ ಸ್ವಾವಲಂಬಿಯಾಗಿಸುವುದು ಕೇಂದ್ರ ಸರ್ಕಾರದ ಪ್ರಮುಖ ಗುರಿಯಾಗಿದೆ.

ಈ ನಿಟ್ಟಿನಲ್ಲಿ ದೇಶಾದ್ಯಂತ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕೋಟ್ಯಂತರ ಜನರಿಗೆ ಈಗಾಗಲೇ ವಿವಿಧ ಕರಕುಶಲ ತರಬೇತಿಯನ್ನು ನೀಡಲಾಗಿದ್ದು. ಅಲ್ಲದೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಕೂಡ ನೀಡಲಾಗಿದೆ.

ಅವರು ತಮ್ಮ ಕರಕುಶಲ ಅಭಿವೃದ್ಧಿಯಿಂದ ಮುಂದೆ ಒಂದು ದಿನ ಕ್ಯೆಗಾರಿಕೆಯನ್ನೆ ತೆರೆಯುವ ಮತ್ತು ನೂರಾರು ಜನರಿಗೆ ಉದ್ಯೋಗ ಮಾಡು ಅವಕಾಶ ಇದ್ದು ಪಲಾನುಭವಿಗಳು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ ಮೂಲಕ ದೇಶದ ಅರ್ಥ ವ್ಯವಸ್ಥೆಗೆ ಎಳಿಗೆಗೆ ಮುನ್ನಡಿ ನೀಡಬೇಕು. ಹಾಗು ಉದ್ಯೋಗದಿಂದ ವಂಚಿತರಾಗುವ ಬದಲು ತಾವೆ ದುಡಿದು ತಮ್ಮ ಕುಟುಂಬದ ನಿರ್ವಹಣೆಯನ್ನು ನಿರ್ವಹಿಸುವಂತಾಗಬೇಕು ಈ ಮೂಲಕ ಮೋದಿಯವರ ಕನಸನ್ನು ನನಸಾಗಿಸಬೇಕು ಎಂದ ಇವರು ಜಿಲ್ಲೆಯಲ್ಲು ಸುಮಾರು 7000 ಪಲಾನಿಭವಿಗಳಿದ್ದು. ಇದು ಕಳೆದ ಎರಡು ವರ್ಷಗಳಿಂದ ಜಾರಿಗೆ ಬಂದಿದ್ದು ಅನೇಕ ಕಡೆ ಕರಕುಶಲ ವಸ್ತುಗಳ ತಾಯರಿಕೆ ಪ್ರಾರಂಭ ಕೂಡ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ದೀಪಕ್ ದೊಡ್ಡಯ್ಯ, ಗಜೇಂದ್ರ ಕೊಟ್ಟಿಗೆಹಾರ, ಸಂತೋಷ್ ಕೋಟ್ಯಾನ್, ಗಜೇಂದ್ರ ಕೊಟ್ಟಿಗೆಹಾರ, ವಿನೋದ್ ಕಣಚೂರು, ನಯನ ತಳವಾರ, ಪಪಂ ಸದಸ್ಯ ಮನೋಜ್, ಸುನೀಲ್ ಮಣ್ಣಿಕೆರೆ, ಶಶಿ ಆಲ್ದೂರು, ರತನ್ ಊರುಬಗೆ, ಅಂಚೆ ಕಚೇರಿ ಮುಖ್ಯಸ್ಥ ಮಹೇಂದ್ರ, ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!