ಮೂಡಿಗೆರೆ :2026 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆ ಇಂದಿನಿಂದ ರಾಜ್ಯದಲ್ಲಿ ಆರಂಭವಾಗಿದ್ದು ಪರೀಕ್ಷೆ ಎದುರಿಸುತ್ತಿರುವ ಮಕ್ಕಳಿಗೆ ಸರ್ಕಾರಿ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ ) SDMC ಹಾಗೂ ಶಿಕ್ಷಕ ವೃಂದ ಹೂಗುಚ್ಛ ಹಾಗೂ ಸಿಹಿ ನೀಡಿ ಪರೀಕ್ಷಾ ಕೊಠಡಿಗೆ ಪ್ರೀತಿಯಿಂದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ SDMC ಅಧ್ಯಕ್ಷ ಅನಂತ್ ಎಂ. ಎಸ್. ಮಾತನಾಡಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತ ಬಂದಿದ್ದು ವಿದ್ಯಾರ್ಥಿಗಳು ಭಯ ಬೀತರಾಗದೆ ಮುಕ್ತ ಮನಸ್ಸಿನಿಂದ ಪರೀಕ್ಷೆ ಎದುರಿಸಲು ಧೈರ್ಯ ತುಂಬುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದಾಗಿ ತಿಳಿಸಿದರು.
LKG ನಲ್ಲಿ ಆರಂಭವಾದ ಪರೀಕ್ಷೆಗಳನ್ನು ಎದುರಿಸುತ್ತ ಬಂದ ಮಕ್ಕಳು SSLC ಪರೀಕ್ಷೆಯಲ್ಲಿ ಆತಂಕಕ್ಕೆ ಒಳಾಗಗುವುದು ಸಹಜ. ಅಂತ ಭಯ ಹೋಗಲಾಡಿಸಲು ವಿದ್ಯಾರ್ಥಿಗಳಿಗೆ ಹುರಿದುಂಬಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಈ ಶಾಲೆಯಲ್ಲಿ ಒಟ್ಟು 266 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದೂ ವೈಯುಕ್ತಿಕ ವಾಗಿ ಹಾಗೂ SDMC ವತಿಯಿಂದ ಶುಭ ಹಾರೈಸಿದರು.ಪರೀಕ್ಷೆ ತುಂಬಾ ಕಷ್ಟ ಎಂಬ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಮಕ್ಕಳಿಗೆ ಧೈರ್ಯತುಂಬಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮಕ್ಕೆ ಶಾಲೆಯ ಶಿಕ್ಷಕ ವೃಂದ ಹಾಗೆ SDMC ಸದಸ್ಯರುಗಳ ಸಹಕಾರ ಶ್ಲಾಘನಿಯ ಎಂದರು
ಶಾಲೆಯ ಉಪ ಪ್ರಾಂಶುಪಾಲರಾದ ಡಾ.ಜಗದೀಶ್ ನಾಯ್ಕ್ ಮಾತನಾಡಿ ಮಕ್ಕಳಿಗೆ ಪರೀಕ್ಷೆ ಎದುರಿಸಲು ಒತ್ತಡದಿಂದ ಹೊರಬಂದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು ವರ್ಷ ಪೂರ್ತಿ ಓದಿ ಕೊನೆ ಸಮಯ ಬಂದಾಗ ಒಂದಿಷ್ಟು ಗಾಬರಿ ಆಗುವ ಮಕ್ಕಳು ಧೈರ್ಯ ವಾಗಿ ಪರೀಕ್ಷೆ ಎದುರಿಸಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವುದಾಗಿ ತಿಳಿಸಿದರು.ಇಂದಿನಿಂದ ಪರೀಕ್ಷೆ ಆರಂಭವಾಗಿದ್ದು ಪರೀಕ್ಷೇ ಸಮಯದಲ್ಲಿ ಆರಂಭದಿಂದ ಕೊನೆಯ ದಿನದವರೆಗೂ ಯಾವುದೇ ತೊಂದರೆ ಆಗದಂತೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ SDMC ಉಪಾಧ್ಯಕ್ಷ ಪರಮೇಶ್, ಸದಸ್ಯರಾದ ರವಿ, ನರಸಿಂಹ ಸೇರಿದಂತೆ ಸರ್ಕಾರಿ ಪದವಿಪೂರ್ವಪ್ರೌಢ ಶಾಲೆಯ ಶಿಕ್ಷಕ ವೃಂದ, ಪೋಷಕರು, ವಿವಿಧ ಶಾಲೆಯ ಮಕ್ಕಳು ಇದ್ದರು.
ವರದಿ: ಪುನೀತ್ ಕಡಿದಾಳು
9483811948
