Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಮೂಡಿಗೆರೆ: ಕಾಡಾನೆಗಳ ಉಪಟಳ :ಶಾಶ್ವತ ಪರಿಹಾರಕ್ಕಾಗಿ ತಾಲೂಕು ಬೆಳೆಗಾರರ ಸಂಘ ಆಗ್ರಹ!

ಮೂಡಿಗೆರೆ: ಕಾಡಾನೆಗಳ ಉಪಟಳ :ಶಾಶ್ವತ ಪರಿಹಾರಕ್ಕಾಗಿ ತಾಲೂಕು ಬೆಳೆಗಾರರ ಸಂಘ ಆಗ್ರಹ!

ಮೂಡಿಗೆರೆ: ತಾಲೂಕಿನ ಸುತ್ತ ಮುತ್ತ ಪ್ರದೇಶಗಳಲ್ಲಿ ಹೆಚ್ಚಿರುವ ಕಾಡಾನೆಗಳ ಹಾವಳಿ ತಡೆಗಟ್ಟಲು ಮತ್ತು ಶಾಶ್ವತ ಪರಿಹಾರಕ್ಕಾಗಿ ಕಾಫಿ ಬೆಳೆಗಾರರ ಸಂಘ ಒತ್ತಾಯಿಸಿದೆ

ಹೌದು ..ಪಟ್ಟಣದ ಬೆಳೆಗಾರರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅದ್ಯಕ್ಷರಾದ ಹಳಸೆ ಶಿವಣ್ಣ ಮಾತನಾಡಿ, ರೈತರ ಬದುಕಿಗೆ ಮಾರಕವಾದ ಕಾಡಾನೆ ದಾಳಿಯಿಂದ ರೈತರ ಬೆಳೆಯನ್ನು,ಜನರನ್ನು ರಕ್ಷಿಸಬೇಕು. ಆನೆಗಳ ಉಪಟಳಕ್ಕೆ ಶಾಶ್ವತವಾಗಿ ಪರಿಹಾರ ದೊರಕಿಸುವಂತೆ ಶಾಸಕರ,ಸಂಸದರ ನಿಯೋಗದೊಂದಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು ಎಂದರು.

ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರು ಬಾಲಕೃಷ್ಣ ಮಾತನಾಡಿ, ಆನೆ ದಾಳಿಯಿಂದ ರೈತರು ತತ್ತರಿಸಿ ಹೋಗಿದ್ದು ಅರಣ್ಯ ಇಲಾಖೆಗೆ ಬೇಕಾದ ಹೆಚ್ಚಿನ ಸವಲತ್ತುಗಳನ್ನು ಸರ್ಕಾರ ನೀಡಬೇಕು. ಅನೇಕ ಜೀವ ಹಾನಿಗಳು ಸಂಭವಿಸಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿರುವ ಆನೇಕ ಉದಾಹರಣೆ ಕಣ್ಮುಂದಿವೆ ಎಂದರು.

ಈ ಸಂದರ್ಭದಲ್ಲಿ ಅನೇಕ ವಿಚಾರಗಳ ಬಗ್ಗೆಯೂ ಚರ್ಚಿಸಲಾಯಿತು. ಇದರಲ್ಲಿ ಮಾಜಿ ಅಧ್ಯಕ್ಷರಾದ ಬಿದರಹಳ್ಳಿ ಜಯರಾಂ,
ಮನೋಹರ್ ಕತ್ಲೇಖಾನ್ ಸೇರಿದಂತೆ ಹಲವು ಕಾಫಿ ಬೆಳೆಗಾರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!