ಮೂಡಿಗೆರೆ: ಪಟ್ಟಣದ ಇಂಜಿನಿಯರ್ ಕಚೇರಿಯ ಸಿಬ್ಬಂದಿಗಳ ಕಾರ್ಯಕ್ಷಮತೆ ಕುರಿತು ಯುವ ಮುಖಂಡ ನೂತನ್ ಬೆಟ್ಟಗೆರೆ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 10 ತಿಂಗಳುಗಳಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ಜಲ-ಜೀವನ್-ಮಿಷನ್ ಯೋಜನೆಯಲ್ಲಿ ನಡೆದಿರುವ ಕಾಮಗಾರಿಯ ಕುರಿತು ಮುಖ್ಯ ಇಂಜಿನಿಯರ್ ಗ್ರಾ.ಕು.ನೀ & ನೈರ್ಮಲ್ಯ ವೃತ್ತ , ಕಾವೇರಿ ಭವನ, ಬೆಂಗಳೂರು ಇವರಿಗೆ ದೂರನ್ನು ನೀಡಿದ್ದು,ಅವರು ಅಧೀಕ್ಷಕ ಇಂಜಿನಿಯರ್ ಮಂಗಳೂರು ವೃತ್ತ ಇವರಿಗೆ ಸದರಿ ದೂರಿನ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು, ನಂತರ ಕ್ರಮದ ವರದಿಯನ್ನು ಸಲ್ಲಿಸಲು ಸೂಚಿಸಿದ್ದರು ಸಹ, ದೂರನ್ನು ನೀಡಿ 4 ತಿಂಗಳು ಕಳೆದರೂ ಸಹ ಯಾವುದೇ ಮಾಹಿತಿ ದೊರೆತಿರುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು,
ಆದ್ದರಿಂದ ಮತ್ತೊಮ್ಮೆ ದೂರನ್ನು ನೀಡಿ, ಸದರಿ ವಿಷಯದ ಬಗ್ಗೆ ಪರಿಶೀಲಿಸಿದ್ದಲ್ಲಿ ನಂತರ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗಿ ಮುಖ್ಯ ಇಂಜಿನಿಯರ್ ಅವರನ್ನು ಕೇಳಿಕೊಂಡಿರುತ್ತೇನೆ ಎಂದರು
ಮುಖ್ಯ ಇಂಜಿನಿಯರ್ ಅವರು ಅಧೀಕ್ಷಕ ಇಂಜಿನೀಯರ್ ಅವರಿಗೆ ಈವರೆಗೂ ವಿಷಯದ ಕುರಿತು ಯಾವುದೇ ವರದಿ ಸಲ್ಲಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ, ಇದೀಗ ವಿಷಯದ ಬಗ್ಗೆ ಮತ್ತೊಮ್ಮೆ ದೂರು ಸಲ್ಲಿಕೆಯಾಗಿದ್ದು ವಿಷಯದ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಮತ್ತೊಮ್ಮೆ ಸೂಚಿಸಿರುತ್ತಾರೆ,
ಎರಡನೇ ಬಾರಿ ದೂರನ್ನು ನೀಡಿ 4 ತಿಂಗಳುಗಳು ಕಳೆದಿದ್ದರೂ ಸಹ ಯಾವುದೇ ಮಾಹಿತಿ ನೀಡದೆ ಕ್ರಮ ಕೈಗೊಳ್ಳದೇ ಇದ್ದುದರಿಂದ ಮೂರನೇ ಬಾರಿ ಸದರಿ ವಿಷಯದ ಬಗ್ಗೆ ದೂರನ್ನು ನೀಡಿದ್ದಾಗಿ ತಿಳಿಸಿದರು.
ಮೂರನೇ ಬಾರಿ ನೀಡಿದ ದೂರಿಗೆ ಯಾವುದೇ ಪ್ರತ್ಯುತ್ತರ ಬಂದಿರುವುದಿಲ್ಲ ಹಾಗೆಯೇ ಕಾಮಗಾರಿಯ ಬಗ್ಗೆ ಆರ್ ಟಿ ಐ ಮೂಲಕ ಒಂದೂವರೆ ತಿಂಗಳಿನ ಹಿಂದೆ ಮಾಹಿತಿಯನ್ನು ಕೇಳಿದ್ದು ಯಾವುದೇ ಉತ್ತರ ದೊರೆತಿರುವುದಿಲ್ಲ ಆದ್ದರಿಂದ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಲಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿ ಅಂದರೆ ಸಾರ್ವಜನಿಕ ಸೇವಕ ಎಂದರ್ಥ ಆದರೆ ಆ ಸೇವಕನಿಗೆ ಸಾರ್ವಜನಿಕರ ಕುಂದು-ಕೊರತೆಗಳ ಬಗ್ಗೆಯಾಗಲಿ ಅವರ ದೂರಿಗಾಗಲಿ ವಿಷಯವನ್ನ ಪರಿಶೀಲಿಸಬೇಕು, ಕ್ರಮ ಕೈಗೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನ ಇಲ್ಲದಿರುವುದು ನೂತನ್ ಗೌಡ ಅವರ ಅಸಮಾಧಾನಕ್ಕೆ ಕಾರಣವಾಗಿದೆ
ರಾಜ್ಯ ಮಟ್ಟದ ಒಬ್ಬ ಹಿರಿಯ ಅಧಿಕಾರಿ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು, ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಸೂಚಿಸಿದರೂ ಸಹ ಅವರ ಸೂಚನೆಯನ್ನು ಪಾಲಿಸಲು ಬದ್ಧತೆ ಇಲ್ಲ ಎಂದರೆ, ಅಧಿಕಾರಿಗಳ ಕಾರ್ಯ ವೈಖರಿ ಎಷ್ಟರ ಮಟ್ಟಿಗೆ ಕಳಪೆ ಹಿರಿಯ ಅಧಿಕಾರಿಗಳಿಗೆ ನೀಡುವ ಗೌರವ ಎಂತದ್ದು ಎಂಬುದು ಅರಿವಾಗುತ್ತಿದೆ ಜನಸಾಮಾನ್ಯರಿಗೆ ಸ್ಪಂದಿಸದ ಅಧಿಕಾರಿಗಳು ತಾಲ್ಲೂಕಿನಲ್ಲಿರಲು ಸೂಕ್ತ ಅಲ್ಲ ಎಂದರು.
