ಮೈಸೂರು: ಕೃಷ್ಣಸಾಗರ ವ್ಯಾಪ್ತಿಗೆ ಒಳಪಡುವ ಪ್ರವಾಸಿ ತಾಣಗಳಲ್ಲಿ ಪ್ರಾಮುಖ್ಯತೆ ಪಡೆದಿರುವ ಬಲಮುರಿ ಫಾಲ್ಸ್ ನಲ್ಲಿ ಯಮರಾಜನ ಕುಣಿಕೆಯಂತೆ ಕಾದು ಕುಳಿತಿರುವ ವಿದ್ಯುತ್ ತಂತಿ ಸ್ಥಳ ಬದಲಾವಣೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಕುರಿತು ಪಬ್ಲಿಕ್ ಇಂಪಾಕ್ಟ್ʼಗೆ ಪ್ರತಿಕ್ರಿಯಿಸಿದ ಪ್ರವಾಸಿ ಜ್ಯೋತಿ ಫೆರ್ನಾಂಡಿಸ್, ಬಲಮುರಿ ನದಿ ಮೇಲೆ ಸುಮಾರು ಮುನ್ನೂರು ಮೀಟರ್ ಗಿಂತಲೂ ಹೆಚ್ಚು ದೂರ ವಿದ್ಯುತ್ ತಂತಿ ಹಾದುಹೋಗಿದ್ದು ಪ್ರವಾಸಿಗರಿಗೆ ಇಲ್ಲಿ ಓಡಾಡಲೂ ಜೀವ ಭಯವಿದೆ.
ನದಿಯ ಮನಮೋಹಕ ದೃಶ್ಯಗಳನ್ನು ತೋರಿಸಲು ಈ ಭಾಗದಲ್ಲಿ ತೆಪ್ಪಗಳಲ್ಲಿ ಪ್ರವಾಸಿಗರನ್ನು ಕರೆದೋಯುತ್ತಿದ್ದೂ ಮಕ್ಕಳು ಹಿರಿಯರು ಸಹ ಓಡಾಡುತ್ತಿರುತ್ತಾರೆ. ರಕ್ಷಣೆಗೆ ವಾಟರ್ ಜಾಕೆಟ್ ಕೂಡ ಲಭ್ಯ ವಿರುವುದಿಲ್ಲ, ಇದು ಕುಣಿಕೆಗೆ ಬಿದ್ದ ಹಗ್ಗದಂತೆ ಬಾಸವಾಗುತ್ತಿದೆ ಎಂದರು.
ಸುತ್ತಮುತ್ತಲಿನ ಅಂಗಡಿಗಳಲ್ಲಿ ಮೂಲಬೆಲೆಗಿಂತ ಹೆಚ್ಚು ಹಣ ಕೇಳುತ್ತಿದ್ದೂ ಪ್ರಶ್ನಿಸಿದರೆ ಮಹಿಳೆಯರು ಎನ್ನದೆ ಅಗೌರವದಿಂದ ವ್ಯಾಪಾರಸ್ಥರು ನಡೆದುಕೊಳ್ಳುತ್ತಿದ್ದೂ ಹಾಗೆ ಆಚಾತುರ್ಯ ನಡೆಯುವ ಮುನ್ನ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಈ ಸಮಸ್ಸೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.