Wednesday, March 25, 2026
Homeಜಿಲ್ಲಾಸುದ್ದಿಎನ್. ಆರ್.ಪುರ:‌ ಮಾರ್ಚ್ 27ರಂದು ಅಮ್ಮ ಫೌಂಡೇಶನ್ ವತಿಯಿಂದ 33ನೇ ಆರೋಗ್ಯ ಶಿಬಿರ ಆಯೋಜನೆ!

ಎನ್. ಆರ್.ಪುರ:‌ ಮಾರ್ಚ್ 27ರಂದು ಅಮ್ಮ ಫೌಂಡೇಶನ್ ವತಿಯಿಂದ 33ನೇ ಆರೋಗ್ಯ ಶಿಬಿರ ಆಯೋಜನೆ!

ಎನ್. ಆರ್.ಪುರ: ಅಮ್ಮ ಫೌಂಡೇಶನ್ ತುಮಖಾನೆ ಇವರ ವತಿಯಿಂದ 33ನೇ ಆರೋಗ್ಯ ಶಿಬಿರ ನಡೆಯಲಿದ್ದು ಎನ್‌ ಆರ್‌ ಪುರ ತಾಲೂಕಿನ ಹೊಡೆಯಾಲದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ಆಯೋಜಿಸಲಾಗಿದೆ.

ಹೌದು .. ಮಾರ್ಚ್ 27 ಶುಕ್ರವಾರದಂದು ಹೊಡೆಯಾಲದ ಶ್ರೀರಾಮ ದೇವಸ್ಥಾನದಲ್ಲಿ ಆರೋಗ್ಯ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ

ಈ ವೇಳೆ ಮುಖ್ಯ ಅತಿಥಿಗಳಾಗಿ ಎನ್ಆರ್ ಪುರದ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ವಿನಯ್ ಕಣಿವೆ, ಹೊಡೆಯಾಲದ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ಹಿರಿಯಣ್ಣ ಹಾಗೂ ಕೃಷಿಕರಾದ ಪ್ರಫುಲ್ಲ ಕೆ. ಅವರು ಭಾಗವಹಿಸಲಿದ್ದಾರೆ. ಹಾಗೆ ಈ ಕಾರ್ಯಕ್ರಮ ಉದ್ಘಾಟನೆಯನ್ನು ಎನ್ ಆರ್ ಪುರದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪಿ.ಜೆ.ಅಂತೋನಿ ಅವರು ಉದ್ಘಾಟನೆ ಮಾಡಲಿದ್ದಾರೆ

ಈ ವೇಳೆ ವೆಂಕಪ್ಪ ಆಚಾರ್, ಶ್ರೀ ರಮೇಶ್ ಶೆಟ್ಟಿ, ರವಿಕುಮಾರ್, ಪದ್ಮನಾಭ.ಕೆ, ಕೌಶಿಕ್ ಗೌಡ, ಕಾರ್ತಿಕ್, ಅಭಿನವ್, ಮೇಘರ್ಷ್‌ ಉಪಸ್ಥಿತರಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!