Saturday, March 28, 2026
Homeಆರೋಗ್ಯಕೊಪ್ಪ: ಮಾರ್ಚ್ 29ರಂದು ಅಮ್ಮ ಫೌಂಡೇಶನ್ ತುಮಖಾನೆ ವತಿಯಿಂದ 34ನೇ ಆರೋಗ್ಯ ಶಿಬಿರ ಆಯೋಜನೆ!

ಕೊಪ್ಪ: ಮಾರ್ಚ್ 29ರಂದು ಅಮ್ಮ ಫೌಂಡೇಶನ್ ತುಮಖಾನೆ ವತಿಯಿಂದ 34ನೇ ಆರೋಗ್ಯ ಶಿಬಿರ ಆಯೋಜನೆ!

ಕೊಪ್ಪ: ಅಮ್ಮ ಫೌಂಡೇಶನ್ ತುಮಖಾನೆ ಇವರ ವತಿಯಿಂದ 34ನೇ ಆರೋಗ್ಯ ಶಿಬಿರ ನಡೆಯಲಿದ್ದು ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ಆಯೋಜಿಸಲಾಗಿದೆ.

ಹೌದು .. ಮಾರ್ಚ್ 29 ಭಾನುವಾರದಂದು ಬಸರೀಕಟ್ಟೆಯ ಸದ್ಗುರು ಸುವರ್ಣ ಸಭಾಭವನದಲ್ಲಿ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಂಡಿದ್ದು ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೆ ಈ ಕಾರ್ಯಕ್ರಮವನ್ನು ಬಸರೀಕಟ್ಟೆ ಕೃಷಿಕರಾದ ಕೆ.ಟಿ.ಚನ್ನಕೇಶವಗೌಡ ಅವರು ಉದ್ಘಾಟಿಸಿದ್ದಾರೆ.

ಈ ವೇಳೆ ಮುಖ್ಯ ಅತಿಥಿಗಳಾಗಿ ಎನ್ ಆರ್ ಪುರದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪಿ.ಜೆ.ಅಂತೋನಿ, ಬಸರೀಕಟ್ಟೆಯ ಸದ್ಗುರು ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ಸಿ.ಗೋಪಾಲಕೃಷ್ಣ, ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್‌ ಕಂದಸ್ವಾಮಿ, ಅಮ್ಮ ಫೌಂಡೇಶನ್‌ ಯೋಜನಾಧಿಕಾರಿಗಳಾದ ವೆಂಕಪ್ಪ ಆಚಾರ್‌ ಅವರು ಭಾಗವಹಿಸಲಿದ್ದಾರೆ

ಈ ವೇಳೆ ಶ್ರೀಕಾಂತ್, ಹರೀಶ್, ‌ಸತೀಶ್‌, ವೆಂಕಟೇಶ್‌, ಉಮೇಶ್‌, ರಾಘವೇಂದ್ರ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆ.

ವರದಿ : ಶಶಿ ಬೆತ್ತದಕೊಳಲು!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!