ನರಸಿಂಹರಾಜಪುರ: ದತ್ತ ಜಯಂತಿ ಅಂಗವಾಗಿ ನ.29 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದತ್ತ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದು ಬಜರಂಗದಳದ ನಗರ ಸಂಯೋಜಕ ದರ್ಶನ್ ಪಬ್ಲಿಕ್ ಇಂಪ್ಯಾಕ್ಟ್ ಗೆ ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಬಸ್ತಿಮಠದಲ್ಲಿ ಶ್ರೀಲಕ್ಷ್ಮಿ ಸೇನಭಟ್ಟಾರಕ ಸ್ವಾಮೀಜಿ ಶೋಭಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಶೋಭಾ ಯಾತ್ರೆ ಬಸ್ತಿಮಠದಿಂದ ಹೊರಟು ಪ್ರವಾಸಿ ಮಂದಿರ ತಲುಪಿ ಅಂತರ ಘಟ್ಟಮ್ಮ ದೇವಸ್ಥಾನದ ಮಾರ್ಗವಾಗಿ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಬರಲಿದೆ. ಅಲ್ಲಿ ಸಂಜೆ 6 ಗಂಟೆಗೆ ಹಿಂದೂ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ದಿಕ್ಕೂಚಿ ಭಾಷಣಕಾರರಾಗಿ ಶ್ರೀ ರಾಮಸೇನೆ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ. ಮಂಡಗದ್ದೆ ಸರ್ಕಲ್ ನ ಈಶ್ವರ ದೇವಸ್ಥಾನದಲ್ಲಿ ದತ್ತ ಮಾಲಾಧಾರಣೆಗೆ ಚಾಲನೆ ನೀಡಲಾಗಿದೆ. ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ದತ್ತ ಮಾಲೆ ಅಭಿಯಾನ ಪ್ರಾರಂಭವಾಗಿದೆ ಎಂದು ತಿಳಿಸಲಾಗಿದೆ.
