Wednesday, February 11, 2026
Homeಜಿಲ್ಲಾಸುದ್ದಿಎನ್.ಆರ್.ಪುರ: ಶವ ಸಂಸ್ಕಾರಕ್ಕೂ ಜಾಗ ಇಲ್ಲದೆ ಮೀನುಗಾರ ಕುಟುಂಬಗಳ ಪರದಾಟ: ಗೋಳು ಕೇಳೋರು ಯಾರು ಇಲ್ವಾ?

ಎನ್.ಆರ್.ಪುರ: ಶವ ಸಂಸ್ಕಾರಕ್ಕೂ ಜಾಗ ಇಲ್ಲದೆ ಮೀನುಗಾರ ಕುಟುಂಬಗಳ ಪರದಾಟ: ಗೋಳು ಕೇಳೋರು ಯಾರು ಇಲ್ವಾ?

ಚಿಕ್ಕಮಗಳೂರು: ಶವ ಸಂಸ್ಕಾರಕ್ಕೂ ಜಾಗ ಇಲ್ಲದೆ ಮೀನುಗಾರ ಕುಟುಂಬಗಳ ಪರದಾಟ ನಡೆಸಿದ ಘಟನೆ ಎನ್.ಆರ್.ಪುರ ತಾಲೂಕಿನ ರಾವೂರು ಕ್ಯಾಂಪ್ ನಲ್ಲಿ ಕಂಡುಬಂದಿದೆ.

ಹೌದು .. ತೆಪ್ಪದಲ್ಲೇ ಶವ ಹೊತ್ತೊಯ್ದು ಸಂಸ್ಕಾರಕ್ಕೆ ಜಾಗ ಹುಡುಕಬೇಕಾದ ಸ್ಥಿತಿ ಮೀನುಗಾರರದ್ದು ಆಗಿದ್ದು ಹೀಗಾಗಿ ಮಲೆನಾಡಲ್ಲಿ ಮೀನುಗಾರರ ಕುಟುಂಬದ ಗೋಳು ಕೇಳೋರು ಯಾರು ಹಾಗೆ ಈಗಲೂ ಈ ರೀತಿ ದಯಾನಿಯ ಸ್ಥಿತಿ ಬಂದರೂ ಅಲ್ಲಿನ ಸ್ಥಳೀಯರು ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿಲ್ವಾ?

ಎನ್.ಆರ್.ಪುರ ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾವುರು ಕ್ಯಾಂಪ್ ನಲ್ಲಿ ತೆಪ್ಪದಲ್ಲೇ ಶವ ಹೊತ್ತೊಯ್ದು ಸಂಸ್ಕಾರಕ್ಕೆ ಜಾಗ ಹುಡುಕಬೇಕಾದ ಸ್ಥಿತಿ ಬಂದೋದಗಿದ್ರು ಜಿಲ್ಲಾಡಳಿತಕ್ಕೆ ಹಲವು ವರ್ಷಗಳಿಂದ ಮನವಿ ಮಾಡಿದ್ರು ಜಾಗ ನೀಡದೆ ಸತಾಯಿಸುತ್ತಿದ್ದಾರಾ ಎಂದು ಕಿಡಿ ಕಾರಿದ್ದಾರೆ.

ಮಳೆ ಬಂದ್ರೆ ಜನರ ಮನೆಯ ಹಿಂಬಂದಿಗೆ ಬರುವ ಭದ್ರಾ ಹಿನ್ನೀರು ಹಾಗೆ ಮಳೆಗಾಲದಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗುತ್ತೆ ಹಿನ್ನೀರು ಪ್ರದೇಶ ಮೊಣಕಾಲುದ್ದದ ನೀರಿನಲ್ಲೇ ದಡದ ಬಳಿ ಮಾಡಬೇಕು ಶವ ಸಂಸ್ಕಾರ ಮೃತದೇಹವನ್ನ ತೆಪ್ಪದಲ್ಲೇ ಕೊಂಡೊಯ್ಯದ್ದು ಮಾಡಬೇಕು ಅಂತಿಮ ವಿಧಿ-ವಿಧಾನ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ರಾವೂರು ಮೀನು ಕ್ಯಾಂಪ್ ನ 50ಕ್ಕೂ ಹೆಚ್ಚು ಕುಟುಂಬಗಳ ಶವ ಸಂಸ್ಕಾರಕ್ಕೆ ಗೋಳಾಟ ನಡೆಸುತ್ತಿದ್ದರು ಹೇಳೋರು ಕೇಳೋರು ಯಾರೂ ಇಲ್ಲದ ಹಾಗೆ ಆಗೆದೆ ಇದಕ್ಕೆಲ್ಲಾ ಯಾವಾಗ ಮುಕ್ತಿ ಸಿಗುತ್ತದೆ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!