ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಣಿವೆ ಹಾಗೂ ಕೋಣಕೆರೆ ಗ್ರಾಮದ ರಸ್ತೆಯ ಗುಂಡಿಗಳನ್ನು ಕೌಶಿಕ್ ಮಕ್ಕಿಕೊಪ್ಪ ಮತ್ತು ಅಭಿ ಕೆಳಗಿನ ಕಣಿವೆ ನೇತೃತ್ವದಲ್ಲಿ ಗಣಪತಿ ಸಮಿತಿಯವರೆಲ್ಲ ಸೇರಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.

ಊರಿನ ರಸ್ತೆಯೂ ಗುಂಡಿಗಳಿಂದ ಕೂಡಿದ್ದು ಗಣಪತಿ ವಿಸರ್ಜನೆ ಮೆರವಣಿಗೆ ಇದೇ ರಸ್ತೆಯಲ್ಲಿ ಸಾಗಬೇಕಿದ್ದು ಗುಂಡಿಗಳಿಂದ ಸಮಸ್ಯೆ ಆಗುವುದನ್ನು ಮನಗಂಡು ಗುಂಡಿಗಳನ್ನು ಮುಚ್ಚಿವುದರ ಮೂಲಕ ಹಬ್ಬದ ಪ್ರಯುಕ್ತವೂ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
