Monday, February 9, 2026
Homeಜಿಲ್ಲಾಸುದ್ದಿಎನ್.‌ ಆರ್.‌ ಪುರ: ತೋಟಕ್ಕೆ ತೆರಳಿದಾಗ ಹಾವು ಕಚ್ಚಿ ಮಹಿಳೆ ಸಾವು!

ಎನ್.‌ ಆರ್.‌ ಪುರ: ತೋಟಕ್ಕೆ ತೆರಳಿದಾಗ ಹಾವು ಕಚ್ಚಿ ಮಹಿಳೆ ಸಾವು!

ಎನ್.‌ ಆರ್.‌ ಪುರ: ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.‌ ಆರ್.‌ ಪುರ ತಾಲೂಕಿನ ಸೀತೂರು ಗ್ರಾಪಂ ವ್ಯಾಪ್ತಿಯ ಕಮಲಾಪುರ ಗ್ರಾಮದಲ್ಲಿ ನಡೆದಿದೆ.

ಕಮಲಾಪುರ ಗ್ರಾಮದ ಕೋತಳ್ಳಿಯ ಶಿವಕುಮಾರಿ (37) ಹಾವು ಕಚ್ಚಿ ಮೃತಪಟ್ಟ ಮಹಿಳೆ.

ಭಾನುವಾರ ಮಧ್ಯಾಹ್ನದ ವೇಳೆ ತೋಟಕ್ಕೆ ಹುಲ್ಲು ಕುಯ್ಯುಲು ಹೋದಾಗ ಈ ಅಚಾತುರ್ಯ ಘಟನೆ ನಡೆದಿದ್ದು ಹಾಗೆ ಈ ವೇಳೆ ಹುಲ್ಲು ಕೊಯ್ಯುತ್ತಿದ್ದಾಗ ಕಾಲಿಗೆ ಹಾವೊಂದು ಕಚ್ಚಿ ಬಿಟ್ಟಿದೆ.

ತಕ್ಷಣ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮಹಿಳೆ ಮೃತಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!