ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಸುರಿದ ಮಳೆ, ಗಾಳಿಗೆ 212 ಲೈಟ್ ಕಂಬಗಳು ಧರೆಗೆ ಉರುಳಿವೆ. ಮೆಸ್ಕಂ ವ್ಯಾಪ್ತಿಯ ಬಾಳೆಹೊನ್ನೂರು ವಿಭಾಗದಲ್ಲಿ 116 ಲೈಟ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ. ನರಸಿಂಹರಾಜಪುರ ಶಾಖಾ ವ್ಯಾಪ್ತಿಯಲ್ಲಿ 52 ಕಂಬಗಳು, ಮುತ್ತಿನಕೊಪ್ಪ ವ್ಯಾಪ್ತಿಯಲ್ಲಿ 42 ಲೈಟ್ ಕಂಬಗಳು ಬಿದ್ದಿವೆ. ಹಾಘೆ ಬಹುತೇಕ ಕಡೆ ಕಾಡು ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ವಿದ್ಯುತ್ ಕಡಿತಗೊಂಡಿವೆ.
ಮೆಸ್ಕಾಂ ಸಿಬ್ಬಂದಿಗಳು ಮಳೆಯನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದರೂ ಭಾರೀ ಗಾಳಿ ಮಳೆಗೆ ಒಂದು ಕೆಲಸ ಮಾಡುತ್ತಿದ್ದರೆ ಇನ್ನೊಂದು ವಿದ್ಯುತ್ ಕಂಬಗಳು ಬೀಳುತ್ತಾ ಇರುವುದು ಮೆಸ್ಕಾಂ ಸಿಬ್ಬಂದಿಗಳಿಗೆ ಇದೊಂದು ಸವಾಲಿನ ಕೆಲಸವಾಗಿ ಬಿಟ್ಟಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ತಂತಿಇಗಳು ತುಂಡಾಗಿ ಕೆಳಗೆ ಬಿದ್ದಿವೆ. ಕಳೆದ 2 ಅಥವಾ 3 ದಿನದಲ್ಲಿ ಭಾರೀ ಮಳೆಗೆ ವಿದ್ಯುತ್ ಸ್ಥಗಿತಗೊಂಡಿದ್ದು ಈಗ ಒಂದೊಂದು ಕಡೆ ವಿದ್ಯುತ್ ಸರಿಯಾಗುತ್ತಾ ಬರುತ್ತಿವೆ. ಇದರಿಂದ ಇಂಟರ್ ನೆಟ್, ನೆಟ್ವರ್ಕ್ ಸಮಸ್ಯೆಯಿಂದಾಗಿ ಮಲೆನಾಡಿನ ಜನರು ಫುಲ್ ಹೈರಣಾರಾಗಿದ್ದಾರೆ . ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ತೊಂದರೆ ಕೂಡ ಆಗಿದ್ದು ಭಾರಿ ಮಳೆಗೆ ಜನ ಫುಲ್ ಸುಸ್ತು ಆಗಿ ಹೋಗಿರೋದು ಮಾತ್ರ ಖಂಡಿತಾ.