Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಪೊಲೀಸ್ ಠಾಣಾ ಸಿಬ್ಬಂದಿಯಿಂದ ಅರ್ಥಪೂರ್ಣವಾಗಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆ

ಮೂಡಿಗೆರೆ: ಪೊಲೀಸ್ ಠಾಣಾ ಸಿಬ್ಬಂದಿಯಿಂದ ಅರ್ಥಪೂರ್ಣವಾಗಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆ

ಮೂಡಿಗೆರೆ ಅ.31:ಮೂಡಿಗೆರೆ ಪೊಲೀಸ್ ಠಾಣೆಯ ವತಿಯಿಂದ ಇಂದು ಬೆಳಗ್ಗೆ  ರಾಷ್ಟ್ರದ ಲೋಹಪುರುಷ ಶ್ರೀ ಸರ್ದಾರ್ ವಲ್ಲಭಾಯಿ ಪಟೇಲ್ ಅವರ  ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸವನ್ನು ಏಕತಾ ಓಟ ಎಂಬ ಅಭಿಯಾನದೊಂದಿಗೆ ರೋಟರಿ ಕ್ಲಬ್ ಹಾಗೂ RRS ಕಾಲೇಜು ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಮೊದಲು ಪೊಲೀಸ್ ಠಾಣೆ ಆವರಣದಲ್ಲಿ ಏಕತಾ ಶಪಥ ಸ್ವೀಕರಿಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ಸಿಪಿಐ ರಾಜಶೇಖರ್ ಪಿಎಸ್‍ಐ  ಶ್ರೀನಾಥ್ ರೆಡ್ಡಿ ಹಾಗೂ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದರು.

ನಂತರ ಏಕತಾ ಓಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಲಿಸ್ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಓಟ ನಡೆಸಿ ರಾಷ್ಟ್ರದ ಏಕತೆ, ಅಖಂಡತೆ ಮತ್ತು ಸಹೋದರತ್ವದ ಸಂದೇಶವನ್ನು ಹರಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರೂ ರಾಷ್ಟ್ರದ ಐಕ್ಯತೆ, ಶಾಂತಿ ಮತ್ತು ಪ್ರಗತಿಗೆ ಬದ್ಧರಾಗಿರಲು ಪ್ರತಿಜ್ಞೆ ಬದ್ಧರಾದರು.ಏಕತೆಯಲ್ಲಿದೆ ಶಕ್ತಿ ವಿಭಜನೆಯಲ್ಲಿದೆ ದುರ್ಬಲತೆ, ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.

ವರದಿ :ಪುನೀತ್ ಕಡಿದಾಳ್

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!