Wednesday, February 11, 2026
Homeಕ್ರೈಮ್ಚಾರ್ಮಾಡಿ ಘಾಟ್‌ʼನಲ್ಲಿ ಇನ್ಮುಂದೆ ಪೊಲೀಸರ ಹೊಸ ರೂಲ್ಸ್: ಐದು ವಾಹನಗಳು ಒಟ್ಟಾಗಿ ಮಾತ್ರ ತೆರಳಲು ಅವಕಾಶ!

ಚಾರ್ಮಾಡಿ ಘಾಟ್‌ʼನಲ್ಲಿ ಇನ್ಮುಂದೆ ಪೊಲೀಸರ ಹೊಸ ರೂಲ್ಸ್: ಐದು ವಾಹನಗಳು ಒಟ್ಟಾಗಿ ಮಾತ್ರ ತೆರಳಲು ಅವಕಾಶ!

ಚಿಕ್ಕಮಗಳೂರು ಕಾಫಿನಾಡು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಇನ್ಮುಂದೆ ಹೊಸ ನಿಯಮಗಳು ಜಾರಿಯಾಗಲಿದೆ. ರಾತ್ರಿ ವೇಳೆಯಲ್ಲಿ ಚೆಕ್‌ ಪೋಸ್ಟ್ ಮೂಲಕ ಸಾಗುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಸಂಚರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ

ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಅನ್ನೋ ಆರೋಪ ಕೇಳಿ ಬರುತ್ತದೆ ಹೀಗಾಗಿ ಇದಕ್ಕೆ ಬ್ರೇಕ್ ಹಾಕಲು ಪೊಲೀಸರು ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ರಾತ್ರಿ ವೇಳೆ ವಾಹನಗಳು ಕೊಟ್ಟಿಗೆಹಾರ ಚೆಕ್ ಪೋಸ್ಟ್ ದಾಟಬೇಕೆಂದರೆ ಸಂಪೂರ್ಣ ತಪಾಸಣೆಗೊಂಡು ಐದು ವಾಹನಗಳು ಒಟ್ಟಾಗಿ ತೆರಳುವಂತೆ ನಿಯಮ ರೂಪಿಸಲಾಗಿದೆ

ಕೊಟ್ಟಿಗೆಹಾರ ಚೆಕ್‌ ಪೋಸ್ಟ್ ನಲ್ಲಿ ಈಗಿರುವ ಬ್ಯಾರಿಕೇಡ್ ಬದಲಾಗಿ ಹೊಸ ಭೂಮ್ ಬ್ಯಾರಿಯರ್ ನಿರ್ಮಿಸಿ ರಾತ್ರಿ ವೇಳೆ ಓರ್ವ ಪಿಎಸ್ಐ ನೇತೃತ್ವದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ‌ಒಂದೂವರೆ ಕಿಲೀ ಮೀಟರ್‌ ರಸ್ತೆಯನ್ನು ಗೋಕಳ್ಳರು ದುರುಪಯೋಗ ಮಾಡುತ್ತಿದ್ದು ಅನ್ನೋ ದೂರುಗಳಿದ್ದವು ಅಲ್ಲಿ ಕೆಲವು ಮನೆಗಳಿದ್ದು ಸ್ಥಳೀಯರ ಜೊತೆ ಮಾತುಕತೆ ನಡೆಸಿ ಆ ರಸ್ತೆಯಲ್ಲಿ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ . ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಈ ಗೇಟ್‌ ಕ್ಲೋಸ್‌ ಮಾಡಲು ನಿರ್ಧರಿಸಲಾಗಿದೆ.

ಗೋ ಕಳ್ಳತನ ಸೇರಿದಂತೆ ಅಪರಾಧ ಕೃತ್ಯಗಳನ್ನು ತಡೆಯಲು ಎಸ್‌ ಪಿ ವಿಕ್ರಂ ಅಮಟೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಹೊಸ ನಿಯಮಗಳಿಂದ ಅಪರಾಧ ಕೃತ್ಯಗಳು ಹಾಗೂ ಗೋಕಳ್ಳತನ ನಡೆಸುತ್ತಿದ್ದರು ವಾಹನಗಳ ಎಲ್ಲಾ ವಿವರಗಳು ಸಿಸಿಟಿವಿಯಲ್ಲಿ ಹಾಗೂ ಪೊಲೀಸರ ಪುಸ್ತಕದಲ್ಲಿ ದಾಖಲಾಗಿದ್ದು ಈ ಹೊಸ ನಿಯಮಗಳ ಕುರಿತು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!